Site icon Vistara News

Himachal Pradesh : ಕಾಂಗ್ರೆಸ್​​ನ ಉಚ್ಚಾಟಿತ ಶಾಸಕರು ಬಿಜೆಪಿಗೆ ಸೇರ್ಪಡೆ

himachal Pradesh BJP

ನವದೆಹಲಿ: ಪಕ್ಷದ ವಿಪ್ ಉಲ್ಲಂಘಿಸಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ನಂತರ ಅನರ್ಹಗೊಂಡ ಹಿಮಾಚಲ ಪ್ರದೇಶ (Himachal Pradesh) ವಿಧಾನಸಭೆಯ ಆರು ಮಾಜಿ ಕಾಂಗ್ರೆಸ್ ಶಾಸಕರು ಇಂದು ಭಾರತೀಯ ಜನತಾ ಪಕ್ಷಕ್ಕೆ (BJP) ಸೇರಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ (Jairam Thakur) ಮತ್ತು ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಾಲ್ ಸೇರಿದಂತೆ ಪ್ರಮುಖ ಬಿಜೆಪಿ ವ್ಯಕ್ತಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಕಾಂಗ್ರೆಸ್​​ ಉಚ್ಛಾಟಿತಗೊಂಡವರನ್ನು ಬರಮಾಡಿಕೊಂಡರು.

ಕಾಂಗ್ರೆಸ್ ಮಾಜಿ ಶಾಸಕರನ್ನು ಬಿಜೆಪಿ ತೆಕ್ಕೆಗೆ ಸ್ವಾಗತಿಸಿದ ಠಾಕೂರ್, ಚುನಾವಣಾ ಭರವಸೆಗಳನ್ನು ಅಲ್ಲಿನ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿದರು.

ಸುಧೀರ್ ಶರ್ಮಾ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ ಲಖನ್ಪಾಲ್, ಚೇತನ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೋ ಅವರು ಬಿಜೆಪಿಗೆ ನಿಷ್ಠೆ ಬದಲಿಸಿದ ಆರು ಅನರ್ಹ ಕಾಂಗ್ರೆಸ್ ಶಾಸಕರು. ಕಾಂಗ್ರೆಸ್ ಟಿಕೆಟ್​​ನಲ್ಲಿ ಆಯ್ಕೆಯಾದ ಅವರನ್ನು ಪಕ್ಷದ ನಿರ್ದೇಶನಗಳನ್ನು ಅನುಸರಿಸಲು ನಿರಾಕರಿಸಿದ್ದಕ್ಕಾಗಿ ಫೆಬ್ರವರಿ 29 ರಂದು ಅನರ್ಹಗೊಳಿಸಲಾಗಿತ್ತು.

ಇದನ್ನೂ ಓದಿ : Mahua Moitra : ಟಿಎಂಸಿ ನಾಯಕಿ ಮಹುವಾ ಮನೆ ಮೇಲೆ ಸಿಬಿಐ ರೇಡ್​

ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ನಿರ್ಣಯದ ಸಮಯದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮತ ಚಲಾಯಿಸದಿರುವುದು ಸೇರಿದಂತೆ ಅವರ ಕ್ರಮಗಳು ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಕ್ಕೆ ಹಾಕಲು ಕಾರಣವಾಯಿತು. ಆಶಿಶ್ ಶರ್ಮಾ, ಹೋಶಿಯಾರ್ ಸಿಂಗ್ ಮತ್ತು ಕೆಎಲ್ ಠಾಕೂರ್ ಬಿಜೆಪಿಗೆ ಸೇರ್ಪಡೆಯಾದ ಮೂವರು ಪಕ್ಷೇತರ ಶಾಸಕರು.

Exit mobile version