Site icon Vistara News

War and Love : ಹಮಾಸ್​ ಒತ್ತೆಯಾಳುವಾಗಿರುವ ಪ್ರಿಯತಮನಿಗಾಗಿ 6 ತಿಂಗಳಿಂದ ಕಾಯುತ್ತಿದ್ದಾಳೆ ಇಸ್ರೇಲ್​ ಯುವತಿ!

War and Love

Hamas Attack Survivor Waits For Captive Boyfriend

ಟೆಲ್ ಅವೀವ್: ಕಳೆದ ವರ್ಷ ಅಕ್ಟೋಬರ್​ 7ರಂದು ಹಮಾಸ್ ಬಂಡುಕೋರರು ಇಸ್ರೆಲ್​ನ ಗಡಿದಾಟಿ ದಾಳಿ ಆರಂಭಿಸಿ ಹಲವಾರು ಮಂದಿಯನ್ನು ಕೊಂದಿರುವುದು ದೊಡ್ಡ ಕದನಕ್ಕೆ ಕಾರಣವಾಗಿದೆ. ಅದಕ್ಕೆ ಪ್ರತಿಕಾರವಾಗಿ ಇಸ್ರೇಲ್​ ಗಾಜಾ ಪಟ್ಟಿಯನ್ನು ಬಹುತೇಕ ಧ್ವಂಸ ಮಾಡಿದೆ. ಏತನ್ಮಧ್ಯೆ, ಹಮಾಸ್ ದಾಳಿಯ ವೇಳೆ ಶವಗಳ ರಾಶಿಯ ಕೆಳಗೆ ಅಡಗಿಕೊಂಡು ಬದುಕುಳಿದಿರುವ ಇಸ್ರೇಲ್ ಯುವತಿಯೊಬ್ಬಳು ತನ್ನ ಪ್ರಿಯತಮನಿಗಾಗಿ (War and Love ) ಆರು ತಿಂಗಳಿಂದ ಕಾಯುತ್ತಿದ್ದಾಳೆ. ಪ್ರಿಯತಮ ಈಗ ಹಮಾಸ್ ಉಗ್ರರ ಒತ್ತೆಯಾಳುವಾಗಿದ್ದಾನೆ.

26 ವರ್ಷದ ಜಿವ್ ಅಬುದ್​ ಗೆಳೆಯನಿಗಾಗಿ ಕಾಯುತ್ತಿರುವ ಯುವತಿ. ಹಮಾಸ್ ಬಂದೂಕುಧಾರಿಗಳಿಂದ ದಾಳಿಗೊಳಗಾದ ನೋವಾ ಉತ್ಸವಕ್ಕೆ ಅಬುದ್ ಮತ್ತು ಆಕೆಯ ಗೆಳೆಯ ಎಲಿಯಾ ಕೋಹೆನ್ ಹೋಗಿದ್ದರು. ಅಲ್ಲಿ ಕೋಹೆನ್ ಹಮಾಸ್​ಗೆ ಸೆರೆಯಾಗಿದ್ದರೆ ಅಬುದ್ ಶವಗಳ ಅಡಿಯಲ್ಲಿ ಅವಿತು ಬಚಾವಾಗಿದ್ದಳು. ಹಮಾಸ್ ಬಂಧನದಲ್ಲಿರುವ 130ಕ್ಕೂ ಕ್ಕೂ ಹೆಚ್ಚು ಜನರಲ್ಲಿ ಕೋಹೆನ್ ಕೂಡ ಒಬ್ಬರು. ಹೀಗಾಗಿ ಅವರು ವಾಪಸ್ ಬರುತ್ತಾರೆ ಎಂಬ ನಂಬಿಕೆಯಲ್ಲಿ ಅಬುದ್ ಕಾಯುತ್ತಿದ್ದಾಳೆ.

ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಅವರೆಲ್ಲರನ್ನೂ ಬಿಡುಗಡೆ ಮಾಡಲು ನಾವು ನಿಜವಾಗಿಯೂ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ” ಎಂದು ಟೆಲ್ ಅವೀವ್​​ನ ಚೌಕದಲ್ಲಿ ಅಬುದ್​​ ಹೇಳಿದ್ದಾರೆ, ಆಕೆ ಸೇರಿದಂತೆ ಒತ್ತೆಯಾಳುಗಳ ಕುಟುಂಬಗಳು ಮತ್ತು ಅವರ ಬೆಂಬಲಿಗರು ಅವಿವ್​ನಲ್ಲಿ ಪ್ರತಿಭಟನಡೆ ನಡೆಸುತ್ತಿದ್ದಾರೆ.

ಅವರು ಈಗ ಜೀವಂತವಾಗಿ ಮನೆಗೆ ಬರುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ, ಏಕೆಂದರೆ ಶವಪೆಟ್ಟಿಗೆಗಳಲ್ಲಿ ಒತ್ತೆಯಾಳುಗಳನ್ನು ಹಿಂದಿರುಗಿಸುವುದು ವಿಜಯದ ಕ್ಷಣವಲ್ಲ ಎಂದು ಅಬುದ್ ಹೇಳುತ್ತಿದ್ದಾರೆ.

ಏನಾದರೂ ಮಾಡಿ ಒತ್ತೆಯಾಳುಗಳ ಬಿಡಿಸಿ

ಗಾಝಾದಿಂದ ತಮ್ಮ ಬಿಡುಗಡೆಗಾಗಿ ಇಸ್ರೇಲಿ ಸರ್ಕಾರವು ಏನು ಬೇಕಾದರೂ ಮಾಡಬೇಕೆಂದು ಅನೇಕ ಒತ್ತೆಯಾಳುಗಳ ಕುಟುಂಬಗಳು ಒತ್ತಾಯಿಸುತ್ತಿವೆ. ಬೀದಿ ಪ್ರತಿಭಟನೆಗಳನ್ನು ಹೆಚ್ಚಿಸುವ ಮೂಲಕ ಒತ್ತಡವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಗಾಝಾ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದವನ್ನು ಸಾಧಿಸುವ ಉದ್ದೇಶದಿಂದ ಈಜಿಪ್ಟ್ ಭಾನುವಾರ ಹೊಸ ಸುತ್ತಿನ ಮಾತುಕತೆಗಳನ್ನು ಆಯೋಜಿಸಲಿದೆ.

ತನ್ನ ಗೆಳೆಯನ ಚಿತ್ರವಿರುವ ಟೀ ಶರ್ಟ್ ಧರಿಸಿದ ಅಬುದ್, ಹಮಾಸ್ ದಾಳಿಯಿಂದ ತಾನು ಹೇಗೆ ಬದುಕುಳಿದೆ ಎಂಬುದನ್ನು ವಿವರಿಸಿದ್ದಾಳೆ.

ಇದನ್ನೂ ಓದಿ: Abu Dhabi police: ಯುಎಇಯಲ್ಲಿ 1.5 ಕೋಟಿ ರೂ. ವಂಚಿಸಿದ ಕೇರಳ ಮೂಲದ ವ್ಯಕ್ತಿಯ ಬಂಧನ

ನಾನು ಆರು ಗಂಟೆಗಳ ಕಾಲ ಶವಗಳ ಅಡಿಯಲ್ಲಿ ಮಲಗಿದ್ದೆ. ಆರು ಗಂಟೆಗಳ ನಂತರ ಒಬ್ಬ ವ್ಯಕ್ತಿ ತನ್ನ ಮಗನನ್ನು ಹುಡುಕಲು ಬಂದಿದ್ದರು. ಅವರ ಮಗ ಕಳುಹಿಸಿದ ಮಾಹಿತಿ ಆಧಾರದ ಮೇಲೆ, ಅವರು ನನ್ನನ್ನು ಮತ್ತು ಇತರ ಐದು ಜನರ ಜೀವ ಉಳಿಸಿದರು ಎಂದು ಅವರು ರಾಯಿಟರ್ಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ..

“ಅವನು ಬರದಿದ್ದರೆ, ನಾನು ಇಂದು ಜೀವಂತವಾಗಿರುತ್ತಿರಲಿಲ್ಲ.” ಎಂದು ಹೇಳಿದ್ದಾಳೆ.

ನಾನು ಸ್ವತಃ ಭಯಾನಕತೆ ಸಂದರ್ಭವನ್ನು ಅನುಭವಿಸಿದ್ದೇನೆ. ನನ್ನ ಕುಟುಂಬಕ್ಕಾಗಿ ನಾನು ಶೋಕಿಸುತ್ತಿದ್ದೇನೆ, ಮತ್ತು ಈ ಎಲ್ಲದರೊಂದಿಗೆ ನಾನು ಪ್ರತಿದಿನ ಬೆಳಿಗ್ಗೆ ಪ್ರಾರ್ಥಿಸುತ್ತಿದ್ದೇನೆ. ಗಾಜಾದಿಂದ ನನ್ನ ಸಂಗಾತಿಯನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದೇನೆ ಎಂದು ಆಕೆ ಹೇಳಿದ್ದಾಳೆ.

Exit mobile version