Site icon Vistara News

Lok Sabha Election : ಬಂಗಾಳದ ಚುನಾವಣಾ ಕಣದಲ್ಲಿ ತೊಡೆ ತಟ್ಟಿದ ವಿಚ್ಛೇದಿತ ದಂಪತಿ!

Sujata mondal

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣಾ (Lok Sabha Election) ಕಣದಲ್ಲಿ ವಿಚ್ಛೇದಿತ ದಂಪತಿಯೊಂದು ಮುಖಾಮುಖಿಯಾಗಲಿದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಿದ್ದಂತೆ ಈ ಮಾಜಿ ಗಂಡ- ಹೆಂಡತಿ ರಾಜ್ಯದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಸುಜಾತಾ ಮೊಂಡಲ್ ಅವರು ತಮ್ಮ ಮಾಜಿ ಪತಿ ಸೌಮಿತ್ರ ಖಾನ್ ಕಣದಲ್ಲಿರುವವರು. ಬಂಡಾಲ್​​ನ ಬಂಕುರಾ ಜಿಲ್ಲೆಯ ಬಿಷ್ಣುಪುರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಮೊಂಡಲ್​ ಕಣಕ್ಕಿಳಿದಿದ್ದರೆ, ಸೌಮಿತ್ರ ಅವರಿಗೆ ಬಿಜೆಪಿ ಟಿಕೆಟ್​ ಸಿಕ್ಕಿದೆ.

2021 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸುಜಾತಾ ಮತ್ತು ಸೌಮಿತರ ಬೇರ್ಪಟ್ಟಿದ್ದರು. ಅದೂ ರಾಜಕೀಯ ಕಾರಣಕ್ಕೆ. ತಮ್ಮ ಪತ್ನಿ ತೃಣಮೂಲ ಕಾಂಗ್ರೆಸ್ ಸದಸ್ಯರಾಗಿ ರಾಜಕೀಯಕ್ಕೆ ಸೇರಿದಾಗ ಕೋಪಗೊಂಡ ಸೌಮಿತ್ರ ವಿಡಿಯೊ ಮೂಲಕ ವಿಚ್ಛೇದನ ಘೋಷಿಸಿದ್ದರು.

ಬಿಷ್ಣುಪುರದ ಹಿರಿಯ ನಾಯಕರಾಗಿದ್ದ ಇಮ್ರಾನ್ ಖಾನ್ 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ತೃಣಮೂಲ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರಿದ್ದರು. ಆ ಸಮಯದಲ್ಲಿ ಅವರ ಸುಜಾತಾ ಅವರು ಪತಿ ಪರವಾಗಿ ಪ್ರಚಾರವೂ ಮಾಡಿದ್ದರು. ತೃಣಮೂಲ ಕಾಂಗ್ರೆಸ್ ಭಾನುವಾರ ಬಂಗಾಳದ 42 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು ರಾಜ್ಯದಲ್ಲಿ ಏಕಾಂಗಿಯಾಗಿ ಸೆಣಸುವ ಉದ್ದೇಶ ಹೊಂದಿದೆ.

ಚುನಾವಣಾ ಫಲಿತಾಂಶಗಳ ಬಳಿಕ ಮಾತ್ರ ಕಾಂಗ್ರೆಸ್ ಜತೆ ಕೈಜೋಡಿಸುವ ಅಥವಾ ಇಂಡಿಯಾ ಬ್ಲಾಕ್ ಜತೆ ಕೈಜೋಡಿಸುತ್ತೇವೆ ಎಂದು ಮಮತಾ ಹೇಳಿದ ಹಿನ್ನಲೆಯಲ್ಲಿ ಇಂಡಿಯಾ ಬ್ಲಾಕ್​ಗೆ ಹಿನ್ನಡೆ ಉಂಟಾಗಿದೆ.

“ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯೊಂದಿಗೆ ಗೌರವಾನ್ವಿತ ಸ್ಥಾನ ಹಂಚಿಕೆ ಒಪ್ಪಂದವನ್ನು ಹೊಂದುವ ಬಯಕೆಯನ್ನು ಕಾಂಗ್ರೆಸ್ ಪದೇ ಪದೇ ಘೋಷಿಸಿತ್ತು. ಅಂತಹ ಒಪ್ಪಂದವನ್ನು ಮಾತುಕತೆಗಳ ಮೂಲಕ ಅಂತಿಮಗೊಳಿಸಬೇಕು ಮತ್ತು ಏಕಪಕ್ಷೀಯ ಪ್ರಕಟಣೆಗಳ ಮೂಲಕ ಅಲ್ಲ ಎಂದು ಕಾಂಗ್ರೆಸ್​ ಹೇಳಿದೆ.

ಇದನ್ನೂ ಓದಿ : Shiv Sena : ಇಡಿ ದಾಳಿಗೆ ಒಳಗಾಗಿದ್ದ ಉದ್ಧವ್​ ಬಣದ ಶಾಸಕ, ಶಿಂಧೆ ಬಣಕ್ಕೆ ಸೇರ್ಪಡೆ

ತೃಣಮೂಲ ಕಾಂಗ್ರೆಸ್ ಎಂಟು ಹಾಲಿ ಸಂಸದರನ್ನು ಕೈಬಿಟ್ಟು ಮಾಜಿ ಕ್ರಿಕೆಟಿಗರಾದ ಯೂಸುಫ್ ಪಠಾಣ್ ಮತ್ತು ಕೀರ್ತಿ ಆಜಾದ್ ಅವರಂತಹ ಹಲವಾರು ಹೊಸ ಮುಖಗಳನ್ನು ತಂದಿದೆ.

ಯೂಸುಫ್ ಪಠಾಣ್ ಬಹರಾಂಪುರ ಲೋಕಸಭಾ ಕ್ಷೇತ್ರದಿಂದ ತೃಣಮೂಲದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಐದು ಬಾರಿ ಈ ಸ್ಥಾನವನ್ನು ಗೆದ್ದಿರುವ ಚೌಧರಿ, ಯಾವುದೇ ರಾಜಕೀಯ ಪಕ್ಷವು ಮಮತಾ ಬ್ಯಾನರ್ಜಿ ಅವರನ್ನು ನಂಬಬಾರದು ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಬಿಜೆಪಿಯ “ಬಿ ಟೀಮ್” ಎಂದು ಅಧಿರ್ ಹೇಳಿದ್ದಾರೆ.

Exit mobile version