ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (Unique Identification Authority of India -UIDAI) ಬಹುತೇಕ ಬಳಕೆದಾರರು ಆಧಾರ್ ಕಾರ್ಡ್ ಸಂಖ್ಯೆಗೆ ಸಂಬಂಧಿಸಿ ಎದುರಿಸುತ್ತಿದ್ದ ಸಮಸ್ಯೆಯನ್ನು ಬಗೆಹರಿಸಿದೆ. ಇನ್ನು ಮುಂದೆ ಬಳಕೆದಾರರು ಆಧಾರ್ ಜತೆಗೆ ಲಿಂಕ್ ಆಗಿರುವ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸಲು (verify) ಅವಕಾಶ ಕಲ್ಪಿಸಿದೆ.
ಬಳಕೆದಾರರಿಗೆ ಪರಿಶೀಲನೆಯ ಏಕೆ ಅಗತ್ಯ?
ಯುಐಡಿಎಐ ಪ್ರಕಾರ ಹಲವು ಸಂದರ್ಭಗಳಲ್ಲಿ ಬಳಕೆದಾರರಿಗೆ ತಮ್ಮ ಮೊಬೈಲ್ ಸಂಖ್ಯೆಯು ಆಧಾರ್ ಜತೆಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಿರುವುದಿಲ್ಲ. ಹೀಗಾಗಿ ಒಟಿಪಿ ಬೇರೆ ಯಾರದ್ದೋ ಮೊಬೈಲ್ ಸಂಖ್ಯೆಗೆ ಹೋದರೆ ಏನು ಮಾಡುವುದು ಎಂಬ ಆತಂಕ ಅವರಲ್ಲಿ ಉಂಟಾಗುತ್ತದೆ. ಇದೀಗ ವೆರಿಫೈ ಮಾಡಲು ಅವಕಾಶ ಮಾಡಿರುವುದರಿಂದ ಈ ಗೊಂದಲ ಪರಿಹಾರವಾಗಲಿದೆ.
ಆಧಾರ್ ಜತೆ ಮೊಬೈಲ್, ಇ-ಮೇಲ್ ಲಿಂಕ್ ಆಗಿದೆಯೇ -ಪರಿಶೀಲಿಸುವ ವಿಧಾನ:
ಯುಐಡಿಎಐ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸೌಲಭ್ಯ ಸಿಗುತ್ತದೆ. https://myaadhaar.uidai.gov.in ಅಥವಾ mAadhaar ಆ್ಯಪ್ ಮೂಲಕ ಪರಿಶೀಲಿಸಬಹುದು. ಇದರ ಮೂಲಕ ನಿಮ್ಮ ಆಧಾರ್ ಜತೆಗೆ ಮೊಬೈಲ್, ಇ-ಮೇಲ್ ಲಿಂಕ್ ಆಗಿದೆಯೇ ಎಂದು ದೃಢಪಡಿಸಿಕೊಳ್ಳಬಹುದು.
ನಿಮ್ಮ ಮೊಬೈಲ್ ಸಂಖ್ಯೆ/ ಇ-ಮೇಲ್ ಐಡಿ ಈಗಾಗಲೇ ಆಧಾರ್ ಜತೆಗೆ ಲಿಂಕ್ ಆಗಿದ್ದರೆ, ನೀವು the mobile number you have enterd is already verified with our records ಎಂಬ ಸಂದೇಶವನ್ನು ಸ್ಕ್ರೀನ್‌ನಲ್ಲಿ ಕಾಣಬಹುದು.
ಇದನ್ನೂ ಓದಿ: Aadhaar card : ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸುವುದು ಹೇಗೆ?
ಆಧಾರ್ ಜತೆಗೆ ನಿಮ್ಮ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡುವುದು ಹೇಗೆ?
ಯಾರಾದರೂ ಇ-ಮೇಲ್, ಮೊಬೈಲ್ ಸಂಖ್ಯೆಯನ್ನು ಆಧಾರ್ ಜತೆಗೆ ಅಪ್ ಡೇಟ್ ಮಾಡಲು ಬಯಸಿದರೆ, ಸಮೀಪದ ಆಧಾರ್ ಸೆಂಟರ್‌ಗೆ ಹೋಗಿ ಮಾಡಬಹುದು.