Site icon Vistara News

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Aadhaar Crads For Dog

ದೆಹಲಿ: ಸಾಮಾನ್ಯವಾಗಿ ಜನಸಾಮಾನ್ಯರು ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು ಎಂಬ ನಿಯಮ ದೇಶದಾದ್ಯಂತ ಜಾರಿಯಲ್ಲಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್ ಗಳನ್ನು ಪಡೆಯಲು ಸೈಬರ್ ಸೆಂಟರ್, ಸರ್ಕಾರಿ ಕಚೇರಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ ಇದೀಗ ನಾಯಿಗಳು ಆಧಾರ್ ಕಾರ್ಡ್ (Aadhaar Crads For Dog) ಹೊಂದಿರಬೇಕು ಎಂಬ ನಿಯಮ ಜಾರಿಗೆ ಬಂದಿದೆ.

ಹೌದು. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೂ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ. ದಾರಿತಪ್ಪಿದ ನಾಯಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಸ್ಥಳಾಂತರ ಮಾಡಲು ಎನ್ ಜಿಓ ಈ ಕ್ರಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ತಮ್ಮದೇ ಆದ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಮಾಧ್ಯಮದ ವರದಿ ಪ್ರಕಾರ ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ.

ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇಂದು ಮುಂಜಾನೆಯಿಂದ ಈ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ ಎಂದು ತಿಳಿಸಿದ್ದಾರೆ. “ಇಂದು ಈ ಕ್ಯೂಆರ್ ಆಧಾರಿತ ಟ್ಯಾಗ್ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ನಾಯಿಗಳಿಗೆ ನೀಡಿದ ಆಧಾರ್ ಕಾರ್ಡ್ ಕ್ಯೂ ಆರ್ ಆಧಾರಿತವಾಗಿದೆ. ಇದನ್ನು Pawfriend.in ಎಂಬ ಎನ್ ಜಿಒ ಆವಿಷ್ಕಾರ ಮಾಡಿದೆ. ಕಂಪೆನಿಯ ಪ್ರಕಾರ, ಬೀದಿ ನಾಯಿಗಳ ಆರೈಕೆಗೆ ಇದು ಉತ್ತಮ ಪರಿಹಾರವಾಗಿದೆ. ಇದು ಮೈಕ್ರೋಚಿಪ್ ಗಳನ್ನು ಒಳಗೊಂಡಿದ್ದು, ಈ ಟ್ಯಾಗ್ ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಯಾರಾದರೂ ಸ್ಕ್ಯಾನ್ ಮಾಡಿದರೆ ಆ ನಾಯಿಗಳ ಬಗ್ಗೆ ವಿವರಗಳು ಮತ್ತು ತುರ್ತು ಸಂಪರ್ಕಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಇದರಿಂದ ಕಳೆದುಹೋದ ನಾಯಿಗಳನ್ನು ಅವುಗಳ ಯಜಮಾನನೊಂದಿಗೆ ಸೇರಿಸಲು ಸಹಾಯ ಮಾಡುತ್ತದೆಯಂತೆ.

ಇದನ್ನೂ ಓದಿ:Wedding Eye Makeup Tips: ಮದುವೆಯಲ್ಲಿ ಮದುಮಗಳ ಐ ಮೇಕಪ್‌ಗೆ 5 ಸಿಂಪಲ್‌ ಸೂತ್ರ

Pawfriend.inನ ಸ್ಥಾಪಕ ಅಕ್ಷಯ್ ರಿದ್ಲಾನ್ , ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಸಂಸ್ಥೆಯ ಬದ್ಧತೆಯನ್ನು ಎತ್ತಿ ತೋರಿಸಿದರು. ಈ ಬಗ್ಗೆ ಮಾತನಾಡಿದ ಅವರು, “ನಾವು ಭಾರತದಾದ್ಯಂತ ಸರಿಸುಮಾರು 6350 ಟ್ಯಾಗ್ ಗಳನ್ನು ವಿತರಿಸಿದ್ದೇವೆ ಮತ್ತು ವರ್ಷದೊಳಗೆ ಇದನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ ಮಾತ್ರವಲ್ಲದೇ ಸಾಕು ನಾಯಿಗಳು ದಾಳಿ ಮಾಡುತ್ತಿವೆ. ಅಲ್ಲದೇ ದೆಹಲಿಯಲ್ಲಿ ಕೆಲವರು ಪಿಟ್ ಬುಲ್ಡಾ ಗ್ ಗಳನ್ನು ಸಾಕಿದ್ದು, ಅವುಗಳ ದಾಳಿ ಮಾಡುತ್ತಿರುವ ವಿಡಿಯೋ ನೋಡಿದ ಅಧಿಕಾರಿಗಳು ಇನ್ನು ಮುಂದೆ ಈ ತಳಿಯ ನಾಯಿಗಳನ್ನು ಸಾಕಬಾರದು ಎಂದು ಆದೇಶ ಹೊರಡಿಸಿದ್ದಾರೆ. ಹಾಗೇ ಇನ್ನೂ ಕೆಲವು ತಳಿಗಳ ನಾಯಿಗಳನ್ನು ಸಹ ನಿಷೇಧಿಸಿದ್ದಾರೆ.

Exit mobile version