ಕೋಲ್ಕತ್ತಾ: ಅಪಘಾತವೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಸ್ವತಃ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಎಕ್ಸ್‌ನಲ್ಲಿ ಚಿತ್ರಗಳ ಸಹಿತ ಪೋಸ್ಟ್ ಮಾಡಿದೆ.
ಮಮತಾ ಬ್ಯಾನರ್ಜಿ ಅವರು ತಮ್ಮ ಮನೆಯಲ್ಲೇ ಜೋಲಿ ತಪ್ಪಿ ಬಿದ್ದಿದ್ದು, ಈ ಸಂದರ್ಭದಲ್ಲಿ ಪೀಠೋಪಕರಣ ಅಂಚು ತಗುಲಿ ಮಮತಾ ಅವರ ಹಣೆಗೆ ಏಟು ಬಿದ್ದಿದೆ. ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
Our chairperson @MamataOfficial sustained a major injury.
— All India Trinamool Congress (@AITCofficial) March 14, 2024
Please keep her in your prayers 🙏🏻 pic.twitter.com/gqLqWm1HwE
ಮಮತಾ ಬ್ಯಾನರ್ಜಿ ಅವರು ಕಳೆದ ಬಾರಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೂ ಗಾಯಗೊಂಡಿದ್ದರು. ಕಾಲು ಮುರಿತಕ್ಕೊಳಗಾಗಿದ್ದ ಅವರು ಕಾಲಿಗೆ ಪ್ಲಾಸ್ಟರ್ ಧರಿಸಿಕೊಂಡೇ ಚುನಾವಣೆ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: ಇದೇ ಮೊದಲ ಬಾರಿ ರಾಮ ನವಮಿಗೆ ರಜೆ ಪ್ರಕಟಿಸಿದ ಮಮತಾ ಬ್ಯಾನರ್ಜಿ; ರಾಮಮಂದಿರ ಎಫೆಕ್ಟ್!