ಬೆಂಗಳೂರು: ತನ್ನ ಗೆಳತಿ ಪವಿತ್ರಾ ಗೌಡಗೆ ಮರ್ಮಾಂಗದ ಪೋಟೋ ಕಳುಹಿಸಿದ ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ದರ್ಶನ್ ಸಿಟ್ಟಿನಿಂದ ಬೂಟು ಕಾಲಿನಿಂದ ಒದ್ದಿದ್ದಾರೆ. ದರ್ಶನ್ ವಿಚಾರಣೆ ವೇಳೆ (Actor Darshan Arrested) ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರೇಣುಕಾ ಸ್ವಾಮಿಯನ್ನು ಭಯಂಕರವಾಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು ಮತ್ತು ಪೋಸ್ಟ್ ಮಾರ್ಟಂ ರಿಪೋರ್ಟ್ ಕೂಡ ಅದನ್ನೇ ಹೇಳಿತ್ತು. ಇದೀಗ ಸ್ವತಃ ದರ್ಶನ್ ಸಿಟ್ಟಿನ ಭರದಲ್ಲಿ ಮಾಡಿರುವ ಕ್ರೌರ್ಯವನ್ನು ಒಂದೊಂದಾಗಿ ಒಪ್ಪಿಕೊಂಡಿದ್ದಾರೆ.
ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಯರ್ರಾಬಿರ್ರಿ ಹಲ್ಲೆ ಮಾಡಿದ್ದರು. ಹೀಗಾಗಿ ಒಂಟಿ ಮನೆಯಲ್ಲಿಯೇ ಪ್ರಾಣ ಬಿಟ್ಟಿದ್ದರು. ಇದನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. ನನ್ನ ಗೆಳತಿಗೆ ಮರ್ಮಾಂಗದ ಫೋಟೋ ಕಳುಹಿಸ್ತಿಯಾ ಎಂದು ಬಂದ ದರ್ಶನ್, ರೇಣುಕಾ ಸ್ವಾಮಿಯ ಕಾಲು ಅಗಲಿಸಿ ಬೂಟುಗಾಲಿನಲ್ಲಿ ಮರ್ಮಾಂಗವನ್ನು ಹೊಸಕಿದ್ದ. ಇದು ರೇಣುಕಾ ಸ್ವಾಮಿಯ ಅರ್ಧ ಪ್ರಾಣವನ್ನು ತೆಗೆದಿತ್ತು.
ದರ್ಶನ್ ಮತ್ತು ಬಳಗದ ಏಟಿನ ಆಘಾತಕ್ಕೆ ನೆಲದಲ್ಲಿ ಬಿದ್ದಿದ್ದ ರೇಣುಕಾ ಸ್ವಾಮಿ ತಪ್ಪಾಯ್ತು ಎಂದು ದರ್ಶನ್ ಕಾಲು ಹಿಡಿಲು ಹೋಗಿದ್ದರು. ಈ ವೇಳೆ ಇನ್ನಷ್ಟು ಸಿಟ್ಟಿಗೆದ್ದಿದ್ದ ದರ್ಶನ್ ಮುಖದ ಮೇಲೆಯೂ ಹಲ್ಲೆ ಮಾಡಿದ್ದರು. ಒದ್ದ ರಭಸಕ್ಕೆ ರೇಣುಕಾ ಸ್ವಾಮಿಯ ತಲೆ ಗೋಡೌನ್ನಲ್ಲಿ ನಿಲ್ಲಿಸಿದ್ದ ಟೆಂಪೊಗೆ ತಗುಲಿತ್ತು. ಹೀಗಾಗಿ ಮಂಡೆಗೂ ಸರಿಯಾಗಿ ಪೆಟ್ಟು ಬಿದ್ದಿತ್ತು. ಬಳಿಕ ಮತಿ ತಪ್ಪುವ ತನಕ ಸಿಕ್ಕಾಪಟ್ಟೆ ಹೊಡೆದಿದ್ದರು.
ಆ ಬಳಿಕ ರಿಪೀಸ್, ದೊಣ್ಣೆ ಸೇರಿದಂತೆ ನಾನಾ ವಸ್ತುಗಳಿಂದ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ. ಹಲವಾರು ಹೊಡೆತಗಳನ್ನು ತಿಂದ ಬಳಿಕ ರೇಣುಕಾಸ್ವಾಮಿ ಸತ್ತಿದ್ದಾರೆ ಎಂಬುದಾಗಿ ಪ್ರದೂಷ್ ಫೋನ್ ಮಾಡಿ ದರ್ಶನ್ಗೆ ತಿಳಿಸಿದ್ದ. ನಂತರ ಅವರು ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿ ಮೀಟಿಂಗ್ ಮಾಡಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿದ್ದರು.
ನಂತರ ಅವರು ಮೃತದೇಹವನ್ನು ಮೋರಿಗೆ ಎಸೆದು ಸುಮ್ಮನಾಗುವ ಪ್ರಯತ್ನ ಮಾಡಿದ್ದರು. ಆದರೆ, ಮೋರಿಗೆ ಬೀಳದ ದೇಹ ಸೀದಾ ತಟದಲ್ಲಿ ಬಿದ್ದಿತ್ತು.
ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್ ಆ್ಯಂಡ್ ಗ್ಯಾಂಗ್ ಫೋನ್ ಮಾಡಿದ್ದು ಯಾರಿಗೆ?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಸ್ಟಡಿಯಲ್ಲಿರುವ ನಟ ದರ್ಶನ್ (Actor Darshan), ಪವಿತ್ರಾ ಗೌಡ (Pavitra Gowda) ಸೇರಿ ಇತರ ಆರೋಪಿಗಳ ತೀವ್ರ ವಿಚಾರಣೆಯು ನಡೆಯುತ್ತಿದೆ. ಈ ಮಧ್ಯೆ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಭಾಗಿಯಾಗಿರುವ ಗುಮಾನಿಯು ಶುರುವಾಗಿದೆ.
ಇದನ್ನೂ ಓದಿ :Actor darshan Arrested : ದರ್ಶನ್ಗೆ ಎಣ್ಣೆ ಹೊಡೆಯಲು, ಸಿಗರೇಟ್ ಸೇದಲು ಪೊಲೀಸ್ ಠಾಣೆಗೆ ಶಾಮಿಯಾನವೇ?
ರೇಣುಕಾಸ್ವಾಮಿ ಕೊಲೆಯಾದ ಬಳಿಕ ಆರೋಪಿಗಳು ಒರ್ವ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆರ್‌ಆರ್ ನಗರದಲ್ಲಿ ನಡೆದ ಕೊಲೆ ನಂತರ ಮೃತದೇಹವನ್ನು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದು ಯಾಕೆ? ಎಲ್ಲಿಯೂ ಜಾಗ ಇಲ್ಲವೆಂದು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡೆಡ್‌ಬಾಡಿ ಹಾಕಬೇಡಿ ಎಂದಿದ್ದರಾ? ಆರೋಪಿಗಳು ಪೊಲೀಸ್ ಅಧಿಕಾರಿ ಸೂಚನೆ ಮೇರೆಗೆ ಮೃತದೇಹ ಕಾಮಾಕ್ಷಿಪಾಳ್ಯಕ್ಕೆ ತಂದು ಎಸೆಯಲಾಗಿದೆ. ಮೃತ ದೇಹ ಎಸೆದ ಬಳಿಕ ಸಹ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.