Site icon Vistara News

Actor Darshan: ರಾತ್ರಿ ಕಳೆಯೊದ್ರೊಳಗೆ ಮತ್ತೆ ಟ್ರೆಂಡ್ ಆಗ್ತಿದೆ ದರ್ಶನ್ ಖೈದಿ ನಂಬರ್ !!

Actor Darshan

ಬಳ್ಳಾರಿ: ರಾಜಾತಿಥ್ಯ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬಳ್ಳಾರಿ ಜೈಲಿಗೆ (Bellary Jail) ಸ್ಥಳಾಂತರಿಸಲ್ಪಟ್ಟಿರುವ ನಟ ದರ್ಶನ್ (Actor Darshan) ಅವರಿಗೆ ಹೊಸ ಖೈದಿ ನಂಬರ್ ನೀಡಲಾಗಿದ್ದು, ರಾತ್ರಿ ಕಳೆಯೊದ್ರೊಳಗೆ ಇದು ಮತ್ತೆ ಹೊಸ ಟ್ರೆಂಡ್ (New trend) ಸೃಷ್ಟಿ ಮಾಡಿದೆ. ದರ್ಶನ್ ಖೈದಿ ನಂಬರ್ ಅನ್ನು ಅಭಿಮಾನಿಗಳು ತಮ್ಮ ಆಟೋ, ಬೈಕ್, ಟ್ಯಾಟೂ ಮೇಲೆ ಬರೆಯಲಾರಂಭಿಸಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್ ಗೆ 511 ಖೈದಿ ನಂಬರ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಹೊಸ ನಂಬರ್ ಟ್ರೆಂಡ್ ಶುರುವಾಗಿದೆ. ದರ್ಶನ್ ಅಭಿಮಾನಿಗಳು ಈ ನಂಬರ್ ಅನ್ನು ತಮ್ಮ ಆಟೋ ಮೇಲೆ ಬರೆಯಲು ಪ್ರಾರಂಭಿಸಿದ್ದಾರೆ. ಬಳ್ಳಾರಿ ಖೈದಿ 511 ಎಂದು ಅನೇಕ ಅಭಿಮಾನಿಗಳು ಬರೆಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ 6106 ಖೈದಿ ನಂಬರ್ ನೀಡಲಾಗಿತ್ತು. ಇದು ಕೂಡ ಟ್ರೆಂಡ್ ಸೃಸ್ತಿಸಿತ್ತು. ಅನೇಕರು ಬೈಕ್, ಆಟೋ, ಟ್ಯಾಟು, ಹಾಗೂ ಮಗುವಿಗೆ ಖೈದಿ ನಂಬರ್ ಬಟ್ಟೆ ಹಾಕಿಸಿ ಫೋಟೋ ಶೂಟ್ ಮಾಡಿದ್ದರು. ಇದೀಗ ಬೆಳಗಾಗೊದ್ರೊಳಗೆ 511 ಖೈದಿ ನಂಬರ್ ಟ್ರೆಂಡಿಂಗ್ ಶುರುವಾಗಿದೆ.

ಮತ್ತೊಂದು ದೂರು ದಾಖಲು

ನಟ ದರ್ಶನ್ ಗೆ ರಾಜಾತಿಥ್ಯ ಪ್ರಕರಣದ ಹಿನ್ನೆಲೆಯಲ್ಲಿ ಅಭಿಮಾನಿ ಪಾಲಿನ ‘ಡಿ’ ಬಾಸ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿ ಈ ದೂರು ನೀಡಿದ್ದಾರೆ.

ರೌಡಿ ಶೀಟರ್ ಬೇಕರಿ ರಘು ಜೊತೆಗೆ ಬೆಡ್ ಮೇಲೆ ಕುಳಿತಿದ್ದ ದರ್ಶನ್ ಮತ್ತು ಬೇಕರಿ ರಘು ಜೊತೆಗಿನ ಫೋಟೊ ಕೂಡ ವೈರಲ್ ಆಗಿತ್ತು. ಆ ಫೋಟೊ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಜೈಲಾಧಿಕಾರಿ ಗುರುವಾರ ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಜೈಲು ನಿಯಮ ಉಲ್ಲಂಘನೆ

ದರ್ಶನ್ ವಿರುದ್ಧ ಈಗಾಗಲೇ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅದೇ ಎಫ್ಐಆರ್ ಗೆ ಈ ದೂರನ್ನು ಸೇರಿಸಿಕೊಂಡು ತನಿಖೆ ನಡೆಸಲಾಗುತ್ತದೆ. ದರ್ಶನ್ ವಿರುದ್ಧ ಇನ್ನೂ ಪೂರ್ಣಗೊಳ್ಳದ ಜೈಲು ನಿಯಮ ಉಲ್ಲಂಘನೆ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ತೆರಳಿ ತನಿಖಾಧಿಕಾರಿ ಮಾಹಿತಿ ಕಲೆ ಹಾಕಲಿದ್ದಾರೆ. ನಟ ದರ್ಶನ್ ರಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದ್ದಾರೆ.

ಹಳೆ ಫೋಟೋಗಳು ವೈರಲ್

ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ ಫೋಟೋ ವೈರಲ್ ಆಗ್ತಿದ್ದಂತೆ ಜೈಲಿನ ಹಳೆ ಪೋಟೋ ಗಳೂ ವೈರಲ್ ಆಗುತ್ತಿದೆ.

ಪರಪ್ಪನ ಅಗ್ರಹಾರದಲ್ಲಿ ದರ್ಶನ್, ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನ ಪೋಟೋ ವೈರಲ್ ಆಗ್ತಿದ್ದಂತೆ ಹಳೆ ಪೋಟೋಗಳು ವೈರಲ್ ಆಗುತ್ತಿದೆ. ಇತ್ತೀಚೆಗೆ ಕುಳ್ಳ ಸೀನ ಬರ್ತಡೇ ಫೋಟೋ ವೈರಲ್ ಆಗಿದ್ದು ಇದು ಏಳು ವರ್ಷಗಳ ಹಿಂದಿನ ಫೋಟೋ ಎನ್ನಲಾಗಿದೆ.

ಇದನ್ನೂ ಓದಿ: Karwar Jail: ನಟ ದರ್ಶನ್‌ಗೆ ಐಷಾರಾಮಿ ಸವಲತ್ತು! ಕಾರವಾರ ಜೈಲಿನಲ್ಲಿ ತಂಬಾಕಿಗೆ ಬೇಡಿಕೆ ಇಟ್ಟ ಖೈದಿಗಳಿಂದ ಗಲಾಟೆ

ಸದ್ಯ ಅದೇ ಸಾಲಿಗೆ ಈಗ ಮತ್ತೊಂದಷ್ಟು ಪೋಟೋಗಳು ಸೇರ್ಪಡೆಯಾಗಿವೆ. ಸದ್ಯ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದು, ಕೊರೋನ ಕಾಲದ ಒಂದೆರಡು ಜೈಲಿನ ಫೋಟೋಗಳು ಈಗ ಹೊರ ಬಂದಿವೆ.

ಬಳ್ಳಾರಿ ಜೈಲಲ್ಲಿ ರೌಡಿಗಳು ಮೊಬೈಲ್ ಬಳಕೆ ಮಾಡುವ, ಅಡುಗೆಗೆ ಚಿಕನ್, ಮಟನ್ ರೆಡಿ ಮಾಡಿಕೊಳ್ಳುವ ಒಂದಷ್ಟು ಮೂರ್ನಾಲ್ಕು ವರ್ಷದ ಹಳೆ ಪೋಟೋಗಳು ವೈರಲ್ ಆಗುತ್ತಿದೆ. ಫೋಟೋದಲ್ಲಿರುವ ವ್ಯಕ್ತಿಗಳು ಬೇಲ್ ಪಡೆದು ಹೊರ ಹೋಗಿ ವರ್ಷಗಳೇ ಕಳೆದಿವೆ ಎನ್ನಲಾಗಿದೆ.

Exit mobile version