Site icon Vistara News

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Actor Darshan

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಬಂಧನವಾಗಿರುವ ಬಗ್ಗೆ ನಟ ಕಿಚ್ಚ ಸುದೀಪ್‌ (Kiccha Sudeep) ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕೊಲೆ ಕೇಸ್‌ನಲ್ಲಿ ಬಂಧನವಾಗಿರುವ ದರ್ಶನ್‌ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬ್ಯಾನ್ ಅನ್ನೋದಕ್ಕಿಂತ ನ್ಯಾಯ ಮುಖ್ಯ. ಫಿಲ್ಮ್‌ ಚೇಂಬರ್ ಇರುವುದು ನಿರ್ಮಾಪಕ, ಕಲಾವಿದರಿಗೆ ನ್ಯಾಯ ಕೊಡಿಸಲು. ರೇಣುಕಾಸ್ವಾಮಿ ಸಾವಿಗೂ ನ್ಯಾಯ ಬೇಕು, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.

ದರ್ಶನ್‌ ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ನೀವು ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರಿ ಅಷ್ಟು ಮಾತ್ರ ನನಗೆ ಗೊತ್ತು. ಮಾಧ್ಯಮ, ಪೊಲೀಸ್ ಸಿಬ್ಬಂದಿ ಪ್ರಯತ್ನದಿಂದ ಸತ್ಯಾಂಶಗಳು ಬೆಳಕಿಗೆ ಬಂದಿವೆ. ಸಿಎಂ ಸಿದ್ದರಾಮಯ್ಯ ಹಠ ಹಿಡಿದು ಕುಳಿತ ಮೇಲೆ ಈ ಕೇಸ್ ಎಫೆಕ್ಟ್ ಗೊತಾಗ್ತಿದೆ. ಆ ಕುಟುಂಬದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿಗೆ ನ್ಯಾಯ ಬೇಕು. ನ್ಯಾಯದ ಮೇಲೆ ನಂಬಿಕೆ ಹುಟ್ಟಬೇಕೆಂದರೆ ನ್ಯಾಯ ಸಿಗಬೇಕು. ಚಿತ್ರರಂಗಕ್ಕೂ ನ್ಯಾಯ ಸಿಗಬೇಕು ತಿಳಿಸಿದರು.

ದರ್ಶನ್ ಬ್ಯಾನ್ ಕುರಿತು ಮಾತನಾಡಿ, ನ್ಯಾಯ ಬೇರೆ, ಫ್ರೆಂಡ್‌ಶಿಪ್‌ ಬೇರೆ. ಚಿತ್ರರಂಗದ ಮೇಲೆ ಕಪ್ಪು ಚುಕ್ಕೆ ಬರುವುದು ನಮಗೂ ಇಷ್ಟವಿಲ್ಲ. ಯಾರೋ ಒಬ್ಬರಿಂದ ಚಿತ್ರರಂಗ ಹಾಳಾಗಬಾರದು. ನಾವು ಯಾರೂ ಕಾನೂನು ಅಲ್ಲ. ಈ ಕೇಸ್‌ನಿಂದ ಹೊರಬಂದರೆ ಬ್ಯಾನ್ ಅನ್ನೋದು ಬರೋದಿಲ್ಲ. ಬ್ಯಾನ್ ಅನ್ನೋದಕ್ಕಿಂತ ನ್ಯಾಯ ಮುಖ್ಯ. ಚೇಂಬರ್ ಇರುವುದು ನಿರ್ಮಾಪಕ, ಕಲಾವಿದರಿಗೆ ನ್ಯಾಯ ಕೊಡಿಸಲು. ಬ್ಯಾನ್ ಅನ್ನೋ ಪದ ಕಟ್ಟಬೇಡಿ. ಪೊಲೀಸ್ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿ ಅಷ್ಟು ಸಾಕು ಎಂದು ಕೋರಿದರು.

ಇದನ್ನೂ ಓದಿ | Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ?

ಚಿತ್ರರಂಗದಲ್ಲಿ ಹಿರಿಯರು ಇದ್ದಾರೆ. ಒಳ್ಳೆ ಸಿನಿಮಾ ಬಂದರೆ ಜನ ಥಿಯೇಟರ್‌ಗೆ ಬಂದೇ ಬರುತ್ತಾರೆ. ಪ್ರಯತ್ನ ಮಾಡೋಣ, ಚಿತ್ರರಂಗ ಬೆಳಿಯುತ್ತದೆ. ಮ್ಯಾಕ್ಸ್ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ಆಗಸ್ಟ್‌ನಲ್ಲಿ ತೆರೆಗೆ ಬರೋ ಸಾಧ್ಯತೆ ಇದೆ ಎಂದು ಹೇಳಿದರು.

Exit mobile version