Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ? - Vistara News

ಸ್ಯಾಂಡಲ್ ವುಡ್

Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ?

Actor Darshan: ದರ್ಶನ್‌ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇನ್ನು ಕೌಟುಂಬಿಕ ಕಲಹದಲ್ಲಿಯೂ 28 ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದರು. 2011ರಲ್ಲಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. 2016ರಲ್ಲಿ ಮತ್ತೊಮ್ಮೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದ ಘಟನೆಯೂ ನಡೆದಿತ್ತು. ಮಗನನ್ನು ಹತ್ಯೆ ಮಾಡುವುದಾಗಿಯೂ ದರ್ಶನ್‌ ಬೆದರಿಸುವುದಾಗಿ ಕೇಳಿ ಬಂದಿತ್ತು.

VISTARANEWS.COM


on

Vijayalakshmi Darshan Reactivated Instagram Account
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ (Actor Darshan) ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾ ಖಾತೆಯನ್ನು ಡಿಲಿಟ್‌ ಮಾಡಿದ್ದರು. ಈಗ ಮತ್ತೆ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ. ಮಾತ್ರವಲ್ಲ ವಿಜಯಲಕ್ಷ್ಮಿ ಅವರೇ ದರ್ಶನ್‌ ಪರ ವಕೀಲ ಅನಿಲ್ ಬಾಬು ಅವರನ್ನು ನೇಮಿಸಿದ್ದಾರೆ. ಇನ್ನು ದರ್ಶನ್‌ ಜೈಲು ಸೇರಿದಾಗಿನಿಂದ ಅವರ ಸಹೋದರ ಆಗಲಿ, ತಾಯಿಯಾಗಲಿ ದರ್ಶನ್‌ ಅವರನ್ನು ಠಾಣೆಗೆ ಭೇಟಿ ನೀಡಿಲ್ಲ.

ಇದೀಗ ವಿಜಯಲಕ್ಷ್ಮಿ ಹಳೆಯ ಖಾತೆಯನ್ನೇ ಮುಂದುವರಿಸಿದ್ದಾರೆ. ಎಲ್ಲ ಪೋಸ್ಟ್​ಗಳನ್ನು ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದವರನ್ನು ಸಹ ಅನ್​ಫಾಲೋ ಮಾಡಿದ್ದಾರೆ.ಖಾತೆ ಹೆಸರು ‘ವಿಜಿ ದರ್ಶನ್’ ಎಂದೇ ಇದೆ. ಬಯೋನಲ್ಲಿ ವಿಜಯಲಕ್ಷ್ಮಿ ದರ್ಶನ್ ಎಂದಿದೆ. ಆದರೆ ಪ್ರೊಫೈಲ್ ಚಿತ್ರ, ಮಾಡಲಾಗಿದ್ದ ಪೋಸ್ಟ್​ಗಳೆಲ್ಲವನ್ನೂ ಸಹ ವಿಜಯಲಕ್ಷ್ಮಿ ಡಿಲೀಟ್ ಮಾಡಿದ್ದಾರೆ.

ವಕೀಲ ಅನಿಲ್ ಬಾಬು ಮಾಧ್ಯಮದವರ ಮುಂದೆ ಮಾತನಾಡಿ ʻʻವಿಜಯಲಕ್ಷ್ಮಿ ಅವರ ಪತ್ನಿಗೆ ಬೇಜಾರು ಆಗಿದ್ದು, ಪವಿತ್ರಾ ಗೌಡ ಅವರು ದರ್ಶನ್‌ ಹೆಂಡತಿ ಎಂದು ಎಲ್ಲ ಮೀಡಿಯಾಗಳು ತೋರಿಸಿದ್ದರು. ದರ್ಶನ್‌ ಅವರಿಗೆ ಇರವ ಏಕೈಕ ಪತ್ನಿ ಎಂದರೆ ಅದು ವಿಜಯಲಕ್ಷ್ಮಿ. ದಂಪತಿಗೆ ವಿನೀಶ್‌ ಎಂಬ ಪುತ್ರನಿದ್ದಾನೆ. ಮಾಧ್ಯಮಗಳು ಪವಿತ್ರಾ ಅವರನ್ನು ದರ್ಶನ್​ರ ಪತ್ನಿ ಎಂದು ಸಂಭೋದಿಸಬಾರದು’ ಎಂದಿದ್ದರು. ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಸದ್ಯಕ್ಕೆ ಅವರಿಗೆ ಸಮಯದ ಅಗತ್ಯವಿದೆ. ಆದಷ್ಟು ಬೇಗ ಅವರು ಎಲ್ಲರ ಮುಂದೆ ಬರಲಿದ್ದಾರೆ ಎಂದಿದ್ದರು.

ಇದನ್ನೂ ಓದಿ: V Cinemas: ರಮೇಶ್ ಅರವಿಂದ್ – ಡಾಲಿ ಧನಂಜಯರಿಂದ ‘ವಿ ಸಿನಿಮಾಸ್’ ಮಲ್ಟಿಪ್ಲೆಕ್ಸ್ ಉದ್ಘಾಟನೆ

ಕೌಟುಂಬಿಕ ಕಲಹದಲ್ಲಿ ʼದಾಸʼ

ದರ್ಶನ್‌ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇನ್ನು ಕೌಟುಂಬಿಕ ಕಲಹದಲ್ಲಿಯೂ 28 ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದರು. 2011ರಲ್ಲಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. 2016ರಲ್ಲಿ ಮತ್ತೊಮ್ಮೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದ ಘಟನೆಯೂ ನಡೆದಿತ್ತು. ಮಗನನ್ನು ಹತ್ಯೆ ಮಾಡುವುದಾಗಿಯೂ ದರ್ಶನ್‌ ಬೆದರಿಸುವುದಾಗಿ ಕೇಳಿ ಬಂದಿತ್ತು. ಮಾತ್ರವಲ್ಲ ವಿಜಯಲಕ್ಷ್ಮಿ ಅವರಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದರು. ಅಂಬರೀಶ್ ಮಧ್ಯಪ್ರವೇಶದಿಂದ ವಿಜಯಲಕ್ಷ್ಮಿ ಎಲ್ಲವನ್ನೂ ಮರೆತು ರಾಜಿ ಸಂಧಾನಕ್ಕೆ ಒಪ್ಪಿದ್ದರು.

ಇದಾದ ಬಳಿಕ ದರ್ಶನ್‌ ಕುಡಿದು ಬಂದು ವಿಜಯಲಕ್ಷ್ಮಿ ವಿರುದ್ಧ ಕೂಗಾಡಿರುವ ಆಡಿಯೊ ವೈರಲ್‌ ಆಗಿತ್ತು. ಸ್ವತಃ ವಿಜಯಲಕ್ಷ್ಮಿ ಅವರೇ ಆಡಿಯೊ ಸುಳ್ಳು ಎಂದು ಹೇಳಿಕೆ ನೀಡಿದ್ದರು. ಹೀಗೆ ಸಿಹಿ-ಕಹಿ ಜೀವನ ನಡೆಸುತ್ತಿದ್ದ ದಂಪತಿ ಮಧ್ಯೆ ಮತ್ತೆ ಬಿರುಗಾಳಿಯಂತೆ ಬಂದಿದ್ದು ಪವಿತ್ರಾ ಗೌಡ.

ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ದರ್ಶನ್‌

ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ನಟ ದರ್ಶನ್‌ ಸ್ನೇಹಿತರು ಹುಟ್ಟುಹಬ್ಬವನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದರು. ಪಾರ್ಟಿಯೊಂದರಲ್ಲಿ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮಸ್ತ್‌ ಡಾನ್ಸ್ ‌ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿರ್ಮಾಪಕ ಉಮಾಪತಿ ಗೌಡ ಹಾಗೂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪದಗಳ ಬಳಕೆ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಸೇರಿ ವಿವಿಧ ಸಂಘಗಳು, ನಟನ ವಿರುದ್ಧ ಅಸಮಾಧಾನ ಹೊರಹಾಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದವು. ಆದರೆ, ವಿವಾದಗಳಿಗೆ ಸೊಪ್ಪು ಹಾಕದ ದರ್ಶನ್‌, ಪಾರ್ಟಿಯೊಂದರಲ್ಲಿ ಭಾಗಿಯಾಗಿ ಪತ್ನಿ ಜತೆ ಕುಣಿದು ಕುಪ್ಪಳಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ ನೂತನ ಚಿತ್ರ ‘ಈ ಪಾದ ಪುಣ್ಯ ಪಾದ’ ಶೀರ್ಷಿಕೆ ಅನಾವರಣ

Kannada New Movie: ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಚಿತ್ರ “ಈ ಪಾದ ಪುಣ್ಯ ಪಾದ”. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆಯನ್ನು ಖ್ಯಾತ ನಿರ್ದೇಶಕ ಶಶಾಂಕ್ ಅನಾವರಣ ಮಾಡಿ ಶುಭ ಕೋರಿದರು. “ದಾರಿ ಯಾವುದಯ್ಯಾ ವೈಕುಂಠಕೆ”, “ಬ್ರಹ್ಮ ಕಮಲ”, “ತಾರಿಣಿ” ಮುಂತಾದ ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಸಿದ್ದು ಪೂರ್ಣಚಂದ್ರ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

VISTARANEWS.COM


on

Kannada New movie Ee Pada Punya Pada title unveiling
Koo

ಬೆಂಗಳೂರು: ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಚಿತ್ರ “ಈ ಪಾದ ಪುಣ್ಯ ಪಾದ”. ಇತ್ತೀಚಿಗೆ ಈ ಚಿತ್ರದ (Kannada New Movie) ಶೀರ್ಷಿಕೆಯನ್ನು ಖ್ಯಾತ ನಿರ್ದೇಶಕ ಶಶಾಂಕ್ ಅನಾವರಣ ಮಾಡಿ ಶುಭ ಕೋರಿದರು.

“ದಾರಿ ಯಾವುದಯ್ಯಾ ವೈಕುಂಠಕೆ”, “ಬ್ರಹ್ಮ ಕಮಲ”, “ತಾರಿಣಿ” ಮುಂತಾದ ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ “ಸಿದ್ದು ಪೂರ್ಣಚಂದ್ರ” ರವರು ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಈ ಕಥೆಯ ವಿಶೇಷವೇನೆಂದರೆ ಕಾಲುಗಳ ಮೇಲೆ ಕಥೆ ಬರೆಯಲಾಗಿದೆ. ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಮಗುವಿನ ಪಾದ, ದೊಡ್ಡವರ ಪಾದ, ವಯಸ್ಸಾದ ಪಾದ, ದಣಿದ ಪಾದ, ಖುಷಿಯ ಪಾದ, ಪಾಪದ ಪಾದ, ಆನೆಕಾಲು ರೋಗಿಯ ಪಾದ ಹೀಗೆ ನಾನಾ ಪಾದಗಳಿಂದ ಕೂಡಿದ ವಿನೂತನ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ.

ಇದನ್ನೂ ಓದಿ: JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ

ಮುಖ್ಯಪಾತ್ರದಲ್ಲಿ ಆಟೋ ನಾಗರಾಜ್, ಮಮತಾ ರಾಹುತ್, ಪ್ರಭಾಕರ್ ಬೋರೇಗೌಡ, ಪ್ರಮಿಳಾ ಸುಬ್ರಹ್ಮಣ್ಯಂ, ಹರೀಶ್ ಕುಂದೂರ್, ಸನ್ನಿ, ಇನ್ನೂ ಮುಂತಾದವರ ತಾರಾಗಣವಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಸಂಗೀತ ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪಕ್ ಸಂಕಲನ, ನಾಗರತ್ನ ಕೆ ಹೆಚ್ವಸ್ತ್ರ ವಿನ್ಯಾಸ, ದಿಲೀಪ್ ಎಚ್.ಆರ್. ಪ್ರೊಡಕ್ಷನ್ ಡಿಸೈನ್ ಹಾಗೂ ಬಸವರಾಜ್ ಆಚಾರ್ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಪುಟ್ಟರಾಜು ಎ.ಕೆ. ಆಲಗೌಡನ ಹಳ್ಳಿ.

ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನಿಂದ ಮ್ಯೂಸಿಕ್ ಫ್ರೇಮ್ ಬಿಡುಗಡೆ; ವಿಶೇಷತೆ ಏನು, ಬೆಲೆ ಎಷ್ಟು?

ಆಗಸ್ಟ್‌ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ಬೆಂಗಳೂರು ರಾಮನಗರ, ಚನ್ನಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಯಲಿದೆ.

Continue Reading

ಕರ್ನಾಟಕ

Kannada New Movie: ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ʼಚಿನ್ನಮ್ಮʼ ಹಾಡಿಗೆ ಗೋಲ್ಡನ್ ಸ್ಟಾರ್ ಅಭಿಮಾನಿಗಳು ಫಿದಾ

Kannada New Movie: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು‌ ಇತ್ತೀಚಿಗೆ ಮಂತ್ರಿ‌ ಮಾಲ್‌ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್‌ 15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

VISTARANEWS.COM


on

Chinnamma song from Krishnam Pranaya Sakhi released
Koo

ಬೆಂಗಳೂರು: ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ (Kannada New Movie) “ಚಿನ್ನಮ್ಮ” ಹಾಡು‌ ಇತ್ತೀಚಿಗೆ ಮಂತ್ರಿ‌ ಮಾಲ್‌ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು.

ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್‌ 15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಸುಪ್ರೀಂ ಹೀರೋ ಶಶಿಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.‌ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಶಶಿಕುಮಾರ್ ಅಭಿನಯಿಸಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಈ ಹಾಡನ್ನು ವೀಕ್ಷಿಸಬಹುದು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದನ್ನೂ ಓದಿ: krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

ನಮ್ಮ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಿಸಿರುವ ಒಟ್ಟು ಏಳು ಹಾಡುಗಳಿವೆ. ಆ ಪೈಕಿ ಎರಡನೇ ಹಾಡು ಇಂದು ಬಿಡುಗಡೆಯಾಗಿದೆ‌. ಮೈಸೂರಿನಲ್ಲಿ ಬಿಡುಗಡೆಯಾದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ “ಚಿನ್ನಮ್ಮ” ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದರು.

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ನಾನು ಬಹಳ ಇಷ್ಟಪಡುವ ಗೀತರಚನೆಕಾರರಾದ ಕವಿರಾಜ್ ಅವರು ಬರೆದಿರುವ “ಚಿನ್ನಮ್ಮ” ಹಾಡು ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ, ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಅವರ ಗಾಯನ ಮತ್ತು ಶೇಖರ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ವೆಂಕಟ್ ರಾಮಪ್ರಸಾದ್ ಅವರ ಛಾಯಾಗ್ರಹಣ ಎಲ್ಲವೂ ಸೊಗಸಾಗಿದೆ. ಈ ಹಾಡು ಚಿತ್ರೀಕರಣವಾದ ಜಾಗ ಕೂಡ ಅದ್ಭುತವಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಅವರ ಜತೆ ನಟಿಸಿದ್ದು ಖುಷಿಯಾಗಿದೆ ಎಂದು ತಿಳಿಸಿದರು.

ಚಿತ್ರತಂಡದ ಸದಸ್ಯರ ಸಹಕಾರದಿಂದ ನಮ್ಮ‌ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಡು ಬರೆದಿರುವ ಕವಿರಾಜ್, ನಟಿ ಶರಣ್ಯ ಶೆಟ್ಟಿ, ನಟ ಶಿವಧ್ವಜ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಇದನ್ನೂ ಓದಿ: Job Alert: ಗಮನಿಸಿ; GTTCಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ; ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

ಬಹು ನಿರೀಕ್ಷಿತ “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.

Continue Reading

ಪ್ರಮುಖ ಸುದ್ದಿ

Sandalwood Drugs Case: ಡ್ರಗ್ಸ್‌ ಕೇಸ್‌; ನಟಿ ಸಂಜನಾ ಗಲ್ರಾನಿ, ಶಿವ ಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್!

Sandalwood Drugs Case: ಮಾದಕ ವಸ್ತು ಜಾಲದ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ಸೇರಿ ಹಲವರ ಬಂಧನವಾಗಿತ್ತು. ಇದೀಗ ಸಂಜನಾ ಹಾಗೂ ಶಿವಪ್ರಕಾಶ್ ವಿರುದ್ಧ ಹೈಕೋರ್ಟ್‌ ಎಫ್‌ಐಆರ್ ರದ್ದು ಮಾಡಿದೆ.

VISTARANEWS.COM


on

Sandalwood Drugs Case
Koo

ಬೆಂಗಳೂರು: ಸ್ಯಾಂಡಲ್‌ ವುಡ್ ಡ್ರಗ್ಸ್ ಕೇಸ್‌ನಲ್ಲಿ (Sandalwood Drugs Case) ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಸಿಬಿಯಿಂದ ನಟಿಯರು ಸೇರಿ ಡ್ರಗ್ ಪೆಡ್ಲರ್‌ಗಳ ಬಂಧನವಾಗಿತ್ತು. ಇದೀಗ ಇಬ್ಬರ ವಿರುದ್ಧ ಎಫ್‌ಐಆರ್ ರದ್ದುಗೊಳಿಸಿ ಹೈಕೋರ್ಟ್ ಅದೇಶ ನೀಡಿದೆ. ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ನಿರಾಳರಾಗುವಂತಾಗಿವೆ.

ಮಾದಕ ವಸ್ತು ಜಾಲದ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ಸೇರಿ ಹಲವರ ಬಂಧನವಾಗಿತ್ತು. ನಂತರ ಜೈಲು ಸೇರಿದ್ದ ಸಂಜನಾಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಜಾಮೀನು ಸಿಕ್ಕಿತ್ತು. ಆದರೆ, ಎಫ್‌ಐಆರ್ ರದ್ದು ಕೋರಿ ಸಂಜನಾ ಹಾಗೂ ಶಿವಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ ಎಫ್‌ಐಆರ್ ರದ್ದುಗೊಳಿಸಿದೆ.

2020ರ ಆಗಸ್ಟ್ 26ರಂದು ಸೆಲಿಬ್ರಿಟಿಗಳು, ಸಿನಿ ನಟ, ನಟಿಯರು ಹಾಗೂ ಉದ್ಯಮಿಗಳ ಮಕ್ಕಳು ಡ್ರಗ್ಸ್‌ ಪಾರ್ಟಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಆಗ ಅಪಾರ ಪ್ರಮಾಣದ ಮಾದಕ ವಸುಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಅನೂಪ್, ರವೀಂದ್ರನ್ ಹಾಗೂ ಡಿ. ಅಂಕಿತ ಎಂಬ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ನಂತರ ತನಿಖೆ ವೇಳೆ ಇವರು ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಮಾದಕ ವಸ್ತು ಪೂರೈಕೆ ಮಾಡಲಾಗುತ್ತಿದ್ದರು ಎಂಬ ಸ್ಫೋಟಕ ಸಂಗತಿ ಹೊರಬಿದ್ದಿತ್ತು. ಬಳಿಕ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ | Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

ಒಗ್ಗದ ಜೈಲೂಟ, ದರ್ಶನ್- ಪವಿತ್ರಾ ಗೌಡ ಪರದಾಟ

Actor Darshan Judicial Custody Jailer Gave UTP Number

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲು ಸೇರಿರುವ ನಟ ದರ್ಶನ್‌ (Actor Darshan), ಜೈಲೂಟ ಸೇರದೆ ಪರದಾಡುತ್ತಿದ್ದಾನೆ. ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಸಹ ಜೈಲಿನ ಆಹಾರ ಇಷ್ಟವಾಗದೆ ಒದ್ದಾಡುತ್ತಿದ್ದಾರೆ.

ಮೊದಲೇ ಫಿಟ್ನೆಸ್ ಮೇಂಟೇನ್ ಮಾಡಲು‌ ಚಿಕನ್, ಮಟನ್, ಪ್ರೂಟ್ಸ್, ಜೂಸ್ ಸೇವಿಸುತ್ತಿದ್ದ ದರ್ಶನ್, ಜೈಲಿನಲ್ಲಿ ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ಕಷ್ಟಪಡುತ್ತಿದ್ದಾನೆ. ರಾತ್ರಿ ಸಹ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದಾರೆ. ಜೈಲೂಟ ತಿನ್ನಲಾಗದೆ ದರ್ಶನ್ ಪರದಾಟ ಅನುಭವಿಸಿದ್ದಾನೆ.

ಸರಿಯಾಗಿ ಊಟ ಸೇರದೆ, ನಿದ್ದೆಯೂ ಬಾರದೆ ದರ್ಶನ್ ವಿಲವಿಲ ಒದ್ದಾಡಿದ್ದು ಕಂಡುಬಂತು. ರಾತ್ರಿ ಸಹ ತಡವಾಗಿ ನಿದ್ರೆಗೆ ಜಾರಿದ ದರ್ಶನ್ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದು, ಕಾಫಿ ಸೇವಿಸದೆ ಬಿಸಿ ನೀರು ಕೇಳಿ ಪಡೆದಿದ್ದಾನೆ. ಸಹಕೈದಿಗಳು ಮಾತನಾಡಲು ಯತ್ನಿಸಿದರೂ ಅಷ್ಟಾಗಿ ಅವರ ಜೊತೆ ಬೆರೆಯಲಿಲ್ಲ. ʼನಿಮ್ಮ ಸಹವಾಸ ಸಾಕಪ್ಪ. ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿʼ ಎಂದು ಕೊಠಡಿಯಲ್ಲಿ ಸುಮ್ಮನೆ ಕೂತಿದ್ದಾನೆ ಎಂದು ಗೊತ್ತಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಶೇಷ ಬ್ಯಾರಕ್‌ನಲ್ಲಿ ದರ್ಶನ್ ಇದ್ದಾನೆ. ಧನರಾಜ್, ವಿನಯ್, ಪ್ರದೂಶ್ ಜೊತೆ ಒಂದೇ ‌ಕೊಠಡಿಯಲ್ಲಿಡಲಾಗಿದೆ. ಸೆರೆವಾಸದಲ್ಲಿ ನಟ ಚಡಪಡಿಸುತ್ತಿದ್ದು, ಮೌನಕ್ಕೆ ಜಾರಿದ್ದಾನೆ. ಸಹ ಬಂದಿಗಳ ಜೊತೆ ಭದ್ರತಾ ವಿಭಾಗದ ಬ್ಯಾರಕ್‌ನಲ್ಲಿ ಸೆರೆವಾಸದಲ್ಲಿಡಲಾಗಿದೆ. ಸೊಳ್ಳೆಕಾಟದಿಂದ ದರ್ಶನ್‌ ಹಾಗೂ ಪವಿತ್ರಾ ಇಬ್ಬರೂ ನಲುಗಿದ್ದಾರೆ.

ನಿನ್ನೆ ಭಾನುವಾರ ಆಗಿದ್ದರಿಂದ ಕುಟುಂಬಸ್ಥರು ಮತ್ತು ಆಪ್ತರ ಭೇಟಿಗೆ ಅವಕಾಶ ನೀಡಿಲ್ಲ. ಇಂದು ದರ್ಶನ್ ಮತ್ತು ಪವಿತ್ರಾ ಕುಟುಂಬಸ್ಥರು ಹಾಗೂ ಆಪ್ತರ ಭೇಟಿ ಸಾಧ್ಯತೆ ಇದೆ. ಪವಿತ್ರಾ ಗೌಡ ಕೂಡ ಜೈಲು ಮೆನುವಿನಂತೆ ಚಪಾತಿ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ ಸೇವನೆ ಮಾಡಿದ್ದು, ಸಹಖೈದಿಗಳ ಜೊತೆ ಬೆರೆಯದೆ ಬೇಸರದಲ್ಲಿಯೇ ದಿನ ಕಳೆಯುತ್ತಿದ್ದಾರೆ. ರಾತ್ರಿ ಬೇಗ ಮಲಗಿದರೂ ಪದೇ ಪದೆ ಎಚ್ಚರಗೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.

ನಿನ್ನೆ ದರ್ಶನ್ ಭೇಟಿಗೆ ರಾಯಚೂರಿನ ಲಿಂಗಸಗೂರಿನಿಂದ ಆಗಮಿಸಿದ ಅಭಿಮಾನಿಗಳು ಭೇಟಿಗೆ ಅವಕಾಶ ಸಿಗದೆ ಜೈಲಿನ ಬಳಿ ಕಣ್ಣೀರು ಹಾಕಿದರು. ಎದೆಯ ಮೇಲೆ ದರ್ಶನ್ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿ, ʼನಮ್ಮ ಬಾಸ್ ಕೆಟ್ಟದ್ದು ಮಾಡಿರಬಹುದು. ಆದರೆ ನಮ್ಮ ಬಾಸ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಕೆಟ್ಟದಾಗಿ ತೋರಿಸಲಾಗುತ್ತಿದೆʼ ಎಂದಿದ್ದಾರೆ. ʼಇಂದು ರಜೆ ಹಿನ್ನೆಲೆ ಬಾಸ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ನಾವು ನಾಳೆ ಬಾಸ್ ಭೇಟಿ ಮಾಡಿಯೇ ವಾಪಸ್ ಹೊರಡುವುದುʼ ಎಂದಿದ್ದಾರೆ.

ಹೇಗಿದೆ ಕೊಠಡಿ?

ಜೈಲಿನ ಮೂರನೇ ಸೆಕ್ಟರ್ ಭಾಗದಲ್ಲಿ ಇರುವ ಭದ್ರತಾ ವಿಭಾಗದಲ್ಲಿ ಒಂದು ಕೊಠಡಿ ದರ್ಶನ್‌ಗೆ ನೀಡಲಾಗಿದೆ. ಇಲ್ಲಿ ಹೊರಗಿನ ಕೈದಿಗಳಿಗೆ ಬರಲು ಅವಕಾಶ ಇಲ್ಲ. ಭದ್ರತಾ ವಿಭಾಗದ ಸಿಬ್ಬಂದಿ ಹಾಗೂ ಕೈದಿಗಳಿಗೆ ಅಷ್ಟೇ ಅವಕಾಶ ನೀಡಲಾಗಿದೆ. ದರ್ಶನ್ ಹಾಗೂ ವಿನಯ್ ಒಂದೇ ಕೊಠಡಿಯಲ್ಲಿ ಇದ್ದಾರೆ. ಪ್ರದೂಷ್ ಹಾಗೂ ಧನರಾಜ್ ಮತ್ತೊಂದು ಕೊಠಡಿಯಲ್ಲಿ ಸೆರೆವಾಸದಲ್ಲಿದ್ದಾರೆ. ಕೊಠಡಿಯ ಒಳಗೆ ಅಟ್ಯಾಚ್ ಬಾತ್ ರೂಮ್ ಕೂಡ ಇದೆ. ಮಲಗಲು ಚಾಪೆ ಹಾಗೂ ಬೆಡ್ ಶೀಟ್ ನೀಡಲಾಗಿದೆ. ದರ್ಶನ್ ಇರುವ ಕೊಠಡಿಯಲ್ಲಿ ಯಾವುದೇ ಟಿವಿ ವ್ಯವಸ್ಥೆ .ಇಲ್ಲ. ಕೊಠಡಿಯ ಒಳಗೆ ಬೇರೆ ಯಾವುದೇ ವ್ಯವಸ್ಥೆ ಇಲ್ಲ ಯಾರಾದರೂ ಭೇಟಿಗೆ ಬಂದರೆ ಅವರನ್ನು ಸಿಬ್ಬಂದಿ ಕರೆದೊಯ್ದು ಭೇಟಿ ಮಾಡಿಸುತ್ತಾರೆ. ಭದ್ರತಾ ವಿಭಾಗದ ಸುತ್ತಮುತ್ತ ಯಾವಾಗಲೂ ಪೊಲೀಸ್ ಕಣ್ಗಾವಲು ಇರುತ್ತದೆ.

ಇದನ್ನೂ ಓದಿ | Actor Darshan: ಪತ್ನಿ, ಮಗ ನೋಡುತ್ತಿದ್ದಂತೆ ಕಣ್ಣೀರಿಟ್ಟ ನಟ ದರ್ಶನ್; ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ʻದಾಸʼ!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹನ್ನೆರಡು ದಿನಗಳ ಪೊಲೀಸ್‌ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್, ಪ್ರದೋಶ್ ಮತ್ತು ಧನರಾಜ್‌ನನ್ನು 24ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ಇದರಿಂದ 13 ವರ್ಷಗಳ ನಂತರ ನಟ ದರ್ಶನ್ ಮತ್ತೆ‌ ಜೈಲು ಸೇರುವಂತಾಗಿದೆ.

Continue Reading

ಸ್ಯಾಂಡಲ್ ವುಡ್

Actor Darshan: ಪತ್ನಿ, ಮಗ ನೋಡುತ್ತಿದ್ದಂತೆ ಕಣ್ಣೀರಿಟ್ಟ ನಟ ದರ್ಶನ್; ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ʻದಾಸʼ!

Actor Darshan: ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ ಧೈರ್ಯ ತುಂಬಿದರು. . ಮಗ ವಿನೀಶ್ ನನ್ನು ತಬ್ಬಿಕೊಂಡೇ ಅಳುತ್ತಾ ಮಾತನಾಡಿದ್ದಾರೆ. ಅರ್ಧ ಘಂಟೆಯ ಭೇಟಿಯಲ್ಲಿ ದರ್ಶನ್ ಭಾವುಕದಿಂದಲೇ ಮಾತನಾಡಿದರು. ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯವನ್ನು ಮಗನ ಜೊತೆಗೆ ಕಳೆದರು.

VISTARANEWS.COM


on

Actor Darshan crying In Jail while seeing wife and son
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Actor Darshan) ಬಂಧನವಾಗಿರುವ ನಟ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಸೋಮವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಇವರಷ್ಟೇ ಅಲ್ಲದೇ ದರ್ಶನ್‌ ಆಪ್ತ ವಿನೋದ್‌ ಪ್ರಭಾಕರ್‌ ಕೂಡ ಸ್ನೇಹಿತರ ಜತೆ ಆಗಮಿಸಿ ಭೇಟಿ ಮಾಡಿದರು. ಈ ವೇಳೆ ದರ್ಶನ್‌ ಅವರು ಮಗನನ್ನು ನೋಡಿ ಕಣ್ಣೀರಿಟ್ಟರು. ಮಗ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ದರ್ಶನ್ ಭಾವುಕರಾದರು.

ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್‌ ಕಣ್ಣೀರಿಟ್ಟರು. ಪತ್ನಿ ಬಳಿ ನಡೆದ ಘಟನೆಯ ಬಗ್ಗೆ ದರ್ಶನ್‌ ಕೆಲ ಮಾತುಗಳನ್ನಾಡಿದರು. ಕಾನೂನು ಹೋರಾಟದ ಬಗ್ಗೆ ಪತ್ನಿ ದರ್ಶನ್‌ಗೆ ಮಾಹಿತಿ ನೀಡಿದರು. ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ ಧೈರ್ಯ ತುಂಬಿದರು. . ಮಗ ವಿನೀಶ್ ನನ್ನು ತಬ್ಬಿಕೊಂಡೇ ಅಳುತ್ತಾ ಮಾತನಾಡಿದ್ದಾರೆ. ಅರ್ಧ ಘಂಟೆಯ ಭೇಟಿಯಲ್ಲಿ ದರ್ಶನ್ ಭಾವುಕದಿಂದಲೇ ಮಾತನಾಡಿದರು. ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯವನ್ನು ಮಗನ ಜೊತೆಗೆ ಕಳೆದರು.

ಇದನ್ನೂ ಓದಿ: Actor Darshan: ಜೈಲಿನಲ್ಲಿ ನಟ ದರ್ಶನ್‌ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್‌

ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮೊದಲು ಜೈಲಿನ ಚೆಕ್ ಪೋಸ್ಟ್ ಸಮೀಪ ಕಾರು ನಿಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಕ್ಯಾಮೆರಾ ಕಂಡು ವಿಜಯಲಕ್ಷ್ಮಿ, ವಿನೀಶ್ ವಾಪಸ್ ತೆರಳಿದರು. ನಂತರ ಬೇರೊಂದು ಕಾರಿನಲ್ಲಿ ಜೈಲಿನ ಬಳಿ ಬಂದರು. ಆಗ ಮಾಧ್ಯಮಗಳ ಕಣ್ತಪ್ಪಿಸಿ ಜೈಲಿನ ಒಳಗೆ ದರ್ಶನ್‌ ಪತ್ನಿ, ಪುತ್ರನನ್ನು ಪೊಲೀಸರು ಕರೆದೊಯ್ದರು.

ಇನ್ನು ಜೈಲಿನಲ್ಲಿದ್ದರೂ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾಗಿದೆ. ಸಾಮಾನ್ಯ ಕೈದಿಗಳನ್ನು ಭೇಟಿಯಾಗಲು ಬಂದರೆ ನೂರೊಂದು ಕಂಡಿಷನ್ಸ್‌ ವಿಧಿಸುವ ಪೊಲೀಸರು, ಸೆಲೆಬ್ರಿಟಿ, ರಾಜಕಾರಣಿಗಳು, ಬಲಾಢ್ಯರಿಗೆ ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ದರ್ಶನ್‌ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದರು. ನಂತರ ಮಾತನಾಡಿದ ವಿನೋದ್ ಪ್ರಭಾಕರ್ ಅವರು, ಮೃತ ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.

ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಆಗಿತ್ತು. ಅವರ ಹುಟ್ಟುಹಬ್ಬದಂದು ಭೇಟಿ ಮಾಡಿದ್ದೆ. ಮಾಧ್ಯಮಗಳಲ್ಲಿ ಬರುವುದನ್ನು ನೋಡಿ ವಿಚಾರ ತಿಳಿದುಕೊಂಡೆ, ಪೊಲೀಸ್ ಸ್ಟೇಷನ್ ಹತ್ತಿರ ಹೋಗಿ ಭೇಟಿಯಾಗಲು ಪ್ರಯತ್ನಪಟ್ಟೆ, ಆದರೆ ಸಾಧ್ಯವಾಗಿರಲಿಲ್ಲ. ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿ ಮಾಡಿದ್ದೇನೆ. ದರ್ಶನ್ ಅವರು ಮೌನವಾಗಿದ್ದರು, ಏನ್ ಟೈಗರ್ ಅಂತ ಹೇಳಿದರು ಅಷ್ಟೇ… ಅವರಿಗೆ ಶೆಕ್ ಹ್ಯಾಂಡ್ ಮಾಡಿ ಬಂದೆ ಎಂದು ತಿಳಿಸಿದರು.

ಪ್ರಕರಣದ ಬಗ್ಗೆ ಎಲ್ಲೂ ಪ್ರತಿಕ್ರಿಯಿಸಿಲ್ಲ ಎಂಬ ಬಗ್ಗೆ ಸ್ಪಂದಿಸಿ, ಎಲ್ಲಾ ಕಡೆ ವಿನೋದ್ ಪ್ರಭಾಕರ್ ಪೋಸ್ಟ್ ಮಾಡಿಲ್ಲ, ಮಾತನಾಡಿಲ್ಲ ಎನ್ನುತ್ತಿದ್ದರು. ಪೋಸ್ಟ್ ಹಾಕಿ ಈ ಪ್ರಾಬ್ಲಮ್ ಸರಿಹೋಗುತ್ತೆ ಎಂದರೆ ನಾನೇ ಸಾವಿರ ಪೋಸ್ಟ್ ಹಾಕುತ್ತಿದ್ದೆ. ಈ ಪ್ರಕರಣ ಬಹಳ ಗಂಭೀರವಾಗಿದೆ. ಪೊಲೀಸ್ ತನಿಖೆಯಲ್ಲಿ ಕೇಸ್ ಇದೆ. ಏನು ಮಾತನಾಡಬೇಕು ಎನ್ನುವ ಕ್ಲ್ಯಾರಿಟಿ ನನಗಿಲ್ಲ. ಅದಕ್ಕೆ ಅವರನ್ನು ಭೇಟಿ ಮಾಡುವವರೆಗೆ ಮಾತನಾಡಬಾರದು ಅಂದುಕೊಂಡಿದ್ದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ, ಎಲ್ಲರಿಗೂ ನ್ಯಾಯ ಸಿಗಲಿ ಎಂದರು.

Continue Reading
Advertisement
Rashid Khan
ಕ್ರಿಕೆಟ್4 mins ago

Rashid Khan: ರನ್​ ಓಡದ ಸಿಟ್ಟಿನಲ್ಲಿ ಸಹ ಆಟಗಾರನ್ನತ್ತ ಬ್ಯಾಟ್​ ಎಸೆದ ರಶೀದ್​ ಖಾನ್​; ವಿಡಿಯೊ ವೈರಲ್​

Amarnath Yatra
ದೇಶ6 mins ago

Amarnath Yatra: ಆಗಸ್ಟ್‌ನಲ್ಲಿ ಪಾಕ್‌ ನಡೆಸುತ್ತಾ ಡೆಡ್ಲಿ ಅಟ್ಯಾಕ್‌? ಎರಡೆರಡು ಉಗ್ರ ಸಂಘಟನೆಗಳಿಂದ ದೊಡ್ಡ ಪ್ಲ್ಯಾನ್‌!

Gold Rate Today
ಚಿನ್ನದ ದರ21 mins ago

Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

milk price hike
ಪ್ರಮುಖ ಸುದ್ದಿ39 mins ago

Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

Viral News
ಕ್ರೈಂ47 mins ago

ಜಮೀನಿನಲ್ಲಿ ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೇಲೆ ಹಲ್ಲೆ; ಖಾಸಗಿ ಅಂಗಕ್ಕೆ ಖಾರದ ಪುಡಿ ಎರಚಿ ವಿಕೃತಿ ಮೆರೆದ ಸಂಬಂಧಿಕರು

AFG vs BAN
ಕ್ರೀಡೆ49 mins ago

AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್​ ಆಟಗಾರರಿಗೆ ಸಲಹೆ ನೀಡಿದ ಕೋಚ್​; ವಿಡಿಯೊ ವೈರಲ್​

cm siddaramaiah DK Shivakumar power fight
ಪ್ರಮುಖ ಸುದ್ದಿ1 hour ago

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

Viral Video
Latest1 hour ago

Viral Video: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

LeT Associate killed
ದೇಶ1 hour ago

LeT Associate killed: ಪ್ರಚೋದನಕಾರಿ ಧರ್ಮ ಪ್ರಚಾರಕ ಖ್ವಾರಿ ಇದ್ರಿಸ್‌ ಹತ್ಯೆ; ವಿಷಪೂರಿತ ಸೂಜಿಯಿಂದ ದಾಳಿ!

Udhayanidhi Stalin
ಕರ್ನಾಟಕ2 hours ago

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ18 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌