Site icon Vistara News

Actor Pradeep: ಹೃದಯಾಘಾತದಿಂದ ರಂಗಭೂಮಿ, ಕಿರುತೆರೆ ನಟ ಪ್ರದೀಪ್ ವಿಧಿವಶ

actor Pradeep

ಬೆಂಗಳೂರು: ರಂಗಭೂಮಿ ಮತ್ತು ಕಿರುತೆರೆ ನಟ ಪ್ರದೀಪ್ (73) ಭಾನುವಾರ ಹೃದಯಾಘಾತದಿಂದ ನಿಧನರಾದರು. ಕಳೆದ 10 ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆ ಒಳಗಾಗಿದ್ದ ಪ್ರದೀಪ್‌(ಸುಬ್ಬರಾಮು) ಅವರು ಭಾನುವಾರ ಸಂಜೆ ಮತ್ತೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಾಳೆ ನಟ ಪ್ರದೀಪ್ ಅವರು ಅಂತ್ಯಕ್ರಿಯೆ ನಡೆಯಲಿದೆ. ಇವರು ರಂಗಭೂಮಿ ಹಾಗೂ ಕಿರುತೆರೆ ನಟಿಯಾದ ಪತ್ನಿ ಕಲ್ಯಾಣಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬೆಂಗಳೂರಿನ ಹಲವು ರಂಗತಂಡಗಳಲ್ಲಿ ಕಳೆದ 4 ದಶಕಗಳಿಂದ ತೊಡಗಿಸಿಕೊಂಡಿದ್ದ ಪ್ರದೀಪ್ ಅವರು ತಮ್ಮ ಅದ್ಭುತ ನಟನೆಯಿಂದ ರಂಗಾಸಕ್ತರ ಗಮನ ಸೆಳೆದಿದ್ದರು.

ರಂಗಭೂಮಿಯ ಬೇಡಿಕೆ ಕಡಿಮೆಯಾದ ನಂತರ ಕಿರುತೆರೆಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ಅವರು ಅಭಿನಯಿಸುತ್ತಿದ್ದರು. ಸಾಕ್ರೆಟೀಸ್, ಬಂಜೆತೊಟ್ಟಿಲು, ಸಾಯಿನಮನ ಇತ್ಯಾದಿ ನಾಟಕಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು.

ಇದನ್ನೂ ಓದಿ | Soundarya Jagadish: ಸೌಂದರ್ಯ ಜಗದೀಶ್ ನಿವಾಸಕ್ಕೆ ನಟ ದರ್ಶನ್‌ ಸಹಿತ ಚಿತ್ರರಂಗದ ಗಣ್ಯರ ಭೇಟಿ; ಅಂತಿಮ ನಮನ

ಖ್ಯಾತ ನಿರ್ಮಾಪಕ, ಜೆಟ್ ಲ್ಯಾಗ್‌ ಮಾಲೀಕ ಸೌಂದರ್ಯ ಜಗದೀಶ್ ಆತ್ಮಹತ್ಯೆ

ಬೆಂಗಳೂರು: ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಮಹಾಲಕ್ಷ್ಮಿ ಲೇಔಟ್‌ನ ತಮ್ಮ ನಿವಾಸದಲ್ಲಿ (ಏ.14) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಗುಣ ಆಸ್ಪತ್ರೆಯಲ್ಲಿ ಸೌಂದರ್ಯ ಜಗದೀಶ್ ಮೃತದೇಹವಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ʻಅಪ್ಪು ಆ್ಯಂಡ್‌ ಪಪ್ಪುʼ ಸಿನಿಮಾ ಮೂಲಕ ಮಗ ಸ್ನೇಹಿತ್‌ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಬೆಂಗಳೂರಿನ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಮಗಳ ಹೆಸರಿನಲ್ಲೇ ಉದ್ಯಮ ಶುರು ಮಾಡಿದ್ದರು. ‘ರಾಮಲೀಲಾ’ ಚಿತ್ರ ಅವರ ಕೊನೆಯ ನಿರ್ಮಾಣದ ಸಿನಿಮಾವಾಗಿತ್ತು. ಅನೇಕ ಕನ್ನಡ ಚಿತ್ರರಂಗದವರ ಜತೆ ಆಪ್ತರಾಗಿದ್ದರು ಸೌಂದರ್ಯ ಜಗದೀಶ್. ಹಣಕಾಸಿನ ವಿಚಾರದಲ್ಲಿ ಇತ್ತೀಚೆಗೆ ತುಂಬ ಕುಗ್ಗಿ ಹೋಗಿದ್ದರು ಎಂದೂ ವರದಿಯಾಗಿದೆ. ಕೆಲವು ವಿವಾದದಿಂದ ಸಾರ್ವಜನಿಕ ಜೀವನದಿಂದ ದೂರವಿದ್ದರು ಎನ್ನಲಾಗಿದೆ.

ಚಿತ್ರ ನಿರ್ಮಾಣದ ಜತೆಗೆ ಉದ್ಯಮಿ, ಬಿಲ್ಡರ್‌ ಕೂಡ ಆಗಿರುವ ಸೌಂದರ್ಯ ಜಗದೀಶ್ ʻಅಪ್ಪು ಆ್ಯಂಡ್‌ ಪಪ್ಪು, ʻಮಸ್ತ್ ಮಜಾ ಮಾಡಿʼ, ʻರಾಮ್‌ಲೀಲಾʼ, ʻಸ್ನೇಹಿತರುʼ ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಅವರ ಮಗಳ ಮದುವೆಯನ್ನು ನೆರವೇರಿಸಿದ್ದರು.

ಇದನ್ನೂ ಓದಿ: Kaatera  Movie: `ಕಾಟೇರ’ ಸಿನಿಮಾಗೆ 100 ದಿನ: ಕೇಕ್‌ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ!

ಇತ್ತೀಚೆಗೆ ಇವರ ಒಡೆತನದ ಜೆಟ್‌ ಲ್ಯಾಗ್‌ ರೆಸಾರ್ಟ್ ʻಕಾಟೇರʼ ಸಿನಿಮಾ ಪಾರ್ಟಿ ಪ್ರಕರಣದಿಂದ ದೊಡ್ಡ ಮಟ್ಟದ ಸುದ್ದಿಗೆ ತುತ್ತಾಗಿತ್ತು. ಈ ವಿವಾದದ ಬಳಿಕ ಜೆಟ್‌ ಲ್ಯಾಗ್‌ ರಸ್ಟೋ ಬಾರ್‌ ಲೈಸನ್ಸ್ 25 ದಿನಗಳ ಕಾಲ ರದ್ದು ಮಾಡಲಾಗಿತ್ತು. ಪತ್ನಿ ರೇಖಾ ಜಗದೀಶ್ ಈ ಬಾರ್‌ನ ಸಂಸ್ಥಾಪಕರು ಮತ್ತು ಡೈರೆಕ್ಟರ್ ಆಗಿದ್ದಾರೆ.

Exit mobile version