Site icon Vistara News

Air India : ಸೇಫ್ಟಿ ಫಸ್ಟ್​​; ಏರ್ ಇಂಡಿಯಾಗೆ 80 ಲಕ್ಷ ದಂಡ

Air India

ನವದೆಹಲಿ: ವಿಮಾನ ಕರ್ತವ್ಯದ ಸಮಯ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾಗೆ (Air India) ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 80 ಲಕ್ಷ ರೂ.ಗಳ ದಂಡ ವಿಧಿಸಿದೆ. ಜನವರಿ ತಿಂಗಳಲ್ಲಿ ಏರ್ ಇಂಡಿಯಾದ (Air India) ಸ್ಪಾಟ್ ಆಡಿಟ್ ನಡೆಸಿದ ನಂತರ ಈ ಉಲ್ಲಂಘನೆಗಳು ಬೆಳಕಿಗೆ ಬಂದಿದ್ದವು. ಹೀಗಾಗಿ ಮಾರ್ಚ್ 1ರಂದು ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿತ್ತು. ಇದೀಗ ದೊಡ್ಡ ಮೊತ್ತ ದಂಡ ವಿಧಿಸಿದೆ.

ಆಪರೇಟರ್ ಸಲ್ಲಿಸಿದ ತೃಪ್ತಿಕರವಲ್ಲದ ಆಡಿಟ್​ ರಿಪೋರ್ಟ್​ಗೆ ಅನುಗುಣವಾಗಿಏ ಇಂಡಿಯಾಗೆ ₹ 80,00,000 (ರೂ. 80 ಲಕ್ಷ) ದಂಡ ವಿಧಿಸಲಾಗಿದೆ ಎಂದು ವಿಮಾನ ಯಾನ ನಿರ್ವಹಣೆಯ ವಾಚ್​ಡಾಗ್​ ಮಅಹಿತಿ ನೀಡಿದೆ.

“ವರದಿಗಳು ಮತ್ತು ಪುರಾವೆಗಳ ವಿಶ್ಲೇಷಣೆಯ ಪ್ರಕಾರ ಏರ್ ಇಂಡಿಯಾ ಲಿಮಿಟೆಡ್ 60 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರೂ ವಿಮಾನ ಸಿಬ್ಬಂದಿಯೊಂದಿಗೆ ಕೆಲವು ಸಂದರ್ಭಗಳಲ್ಲಿ ಹಾರಾಟ ನಡೆಸುತ್ತಿದೆ ಎಂಬುದು ಬಹಿರಂಗಗೊಂಡಿದೆ. ಇದು ವಿಮಾನ ನಿಯಮಗಳು, 1937 ರ ನಿಯಮ 28 ಎ ಯ ಉಪ ನಿಯಮ (2) ರ ಉಲ್ಲಂಘನೆಯಾಗಿದೆ” ಎಂದು ವಾಚ್​ಡಾಗ್ ಹೇಳಿದೆ.

ಇದನ್ನೂ ಓದಿ : Namma Metro : ಮಾ.24ರಂದು ಮೆಟ್ರೋ ಓಡಾಟ ಬೆಳಗ್ಗೆ 4:30ಕ್ಕೆ ಆರಂಭ; ಐಪಿಎಲ್‌ ಪಂದ್ಯದಂದು ಸಮಯ ವಿಸ್ತರಣೆ

“ಅಲ್ಟ್ರಾ-ಲಾಂಗ್ ರೇಂಜ್ (ಯುಎಲ್ಆರ್) ವಿಮಾನಗಳ ಮೊದಲು ಮತ್ತು ನಂತರ ವಿಮಾನದ ಸಿಬ್ಬಂದಿಗೆ ಲೇಓವರ್​ನಲ್ಲಿ ಸಾಕಷ್ಟು ವಿಶ್ರಾಂತಿ ನೀಡಲಾಗುತ್ತಿಲ್ಲ. ಈ ಕೊರತೆಯೂ ಕಂಡುಬಂದಿದೆ, ಇದು ಎಫ್​ಡಿಎಲ್​ಗೆ ಸಂಬಂಧಿಸಿದ ನಾಗರಿಕ ವಿಮಾನಯಾನ ಅವಶ್ಯಕತೆಗಳ ಅಸ್ತಿತ್ವದಲ್ಲಿರುವ ನಿಬಂಧನೆ ಉಲ್ಲಂಘನೆ” ಎಂದು ಅದು ಹೇಳಿದೆ.

ಕರ್ತವ್ಯದ ಅವಧಿಯನ್ನು ಮೀರುವುದು, ತಪ್ಪಾಗಿ ಗುರುತಿಸಲಾದ ತರಬೇತಿ ದಾಖಲೆಗಳನ್ನು ಲೆಕ್ಕಪರಿಶೋಧನೆಯ ಸಮಯದಲ್ಲಿ ಗಮನಿಸಲಾಗಿದೆ ಎಂದು ಅದು ಹೇಳಿದೆ. “ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಮತ್ತು ಈ ಜಾರಿ ಕ್ರಮವು ಅದರ ಬದ್ಧತೆಗೆ ಅನುಗುಣ” ಎಂದು ವಾಚ್​ಡಾಗ್​ ಒತ್ತಿಹೇಳಿದೆ.

Exit mobile version