Site icon Vistara News

Radhika Merchant : ಭಾವಿ ಸೊಸೆಗೆ ದುಬಾರಿ ಗಿಫ್ಟ್ ಕೊಟ್ಟ ಅಂಬಾನಿ ಕುಟುಂಬ; ಏನೇನಿವೆ ಅದರಲ್ಲಿ?

Ananat Ambani

ಬೆಂಗಳೂರು : ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ರಿಲಾಯನ್ಸ್​ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಕುಟುಂಬದಲ್ಲಿ ಅದ್ಧೂರಿ ಮದುವೆಯೊಂದು ನಡೆಯಲಿದೆ. ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ನಡೆಯಲಿದೆ. ವಿವಾಹ ಪ್ರಕ್ರಿಯೆಗಳು ಆರಂಭಗೊಂಡಿದ್ದು, ರಾಧಿಕಾ ಮರ್ಚೆಂಟ್ (Radhika Merchant) ಅವರನ್ನು ಅಂಬಾನಿ ಕುಟುಂಬ ತಮ್ಮ ಮನೆಗೆ ಬರಮಾಡಿಕೊಳ್ಳಲು ಸಿದ್ದತೆ ನಡೆಸಿದೆ.

2023ರ ಜನವರಿಯಲ್ಲಿ ಅನಂತ್​ ಹಾಗೂ ರಾಧಿಕಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಮದುವೆಗೆ ಸಿದ್ಧತೆಗಳು ಜೋರಾಗಿವೆ. ಮದುವೆ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ದುಬಾರಿ ಉಡುಗೊರೆಗಳನ್ನು ನೀಡುವುದು ಅಂಬಾನಿ ಕುಟುಂಬದ ಸಂಪ್ರದಾಯ. ಅಂತೆಯೇ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ತಮ್ಮ ಮನೆಗೆ ಬರುವ ಸೊಸೆ ರಾಧಿಕಾಗೆ ಈಗಾಗಲೇ ಭರ್ಜರಿ ಗಿಫ್ಟ್​ಗಳನ್ನು ಕೊಡಲು ಆರಂಭಿಸಿದ್ದಾರೆ.

ನೀತಾ ಅಂಬಾನಿ ಭಾವಿ ಸೊಸೆ ರಾಧಿಕಾಗೆ ಬೆಳ್ಳಿಯ ಲಕ್ಷ್ಮಿ ಹಾಗೂ ಗಣೇಶನ ವಿಗ್ರಹವಿರುವ ಗಿಫ್ಟ್ ಹ್ಯಾಂಪರ್ ನೀಡಿದ್ದಾರೆ. ಇದರಲ್ಲಿ ಎರಡು ಬೆಳ್ಳಿಯ ತುಳಸಿ ಪಾತ್ರೆಗಳು. ಲಕ್ಷ್ಮಿ-ಗಣೇಶ ವಿಗ್ರಹಗಳ ಒಂದು ಸೆಟ್ ಇದೆ. ಇವೆಲ್ಲವೂ ಬಿಳಿ ಹೂವುಗಳಿಂದ ತುಂಬಿಕೊಂಡಿದ್ದವು.

ಐಷಾರಾಮಿ ಕಾರು

ನಿಶ್ಚಿತಾರ್ಥದ ವೇಳೆ ಮುಖೇಶ್ ಅಂಬಾನಿ ಸುಮಾರು 4.5 ಕೋಟಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದರು. 6.0-ಲೀಟರ್ W12 ಎಂಜಿನ್ ಹೊಂದಿರುವ ಭಾರತದ ಸೆಲೆಬ್ರಿಟಿಗಳ ಪಾಲಿನ ನೆಚ್ಚಿನ ವಾಹನವಾಗಿದೆ

ಉಡುಗೊರೆಯಿಂದಲೇ ಗಮನ ಸೆಳೆವ ಅಂಬಾನಿ ಕುಟುಂಬ

ಅಂಬಾನಿ ಕುಟುಂಬವು ತಮ್ಮ ವಲಯದಲ್ಲಿ ತಮ್ಮ ಅತಿರಂಜಿತ ಉಡುಗೊರೆ ನೀಡಿಕೆಗಾಗಿ ನಿರಂತರವಾಗಿ ಗಮನ ಸೆಳೆಯುತ್ತದೆ. ಮುಖೇಶ್ ಮತ್ತು ನೀತಾ ಅಂಬಾನಿ ಅವರ ವಿಶೇಷ ಉಡುಗೊರೆಗಳನ್ನು ನೀಡುವ ಸಂಪ್ರದಾಯವನ್ನು ಹೊಂದಿದ್ದಾರೆ. 2019 ರಲ್ಲಿ ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾಗೆ ಮೌವಾದ್ ಎಲ್’ ಇನ್​ ಕಂಪಾರೇಬಲ್​ ‘ ಎಂದು ಕರೆಯಲ್ಪಡುವ ವಿಶ್ವದ ಅತಿಯಾದ ದುಬಾರಿ ಹಾರವನ್ನು ಉಡುಗೊರೆಯಾಗಿ ನೀಡಿದ್ದರು. ಅಪರೂಪದ ಹಳದಿ ವಜ್ರದಿಂದ ಅಲಂಕರಿಸಲ್ಪಟ್ಟ ಅದರ ಮೌಲ್ಯವು 451 ಕೋಟಿ ರೂ.! ಈ ಹಾರವು ವಿಶ್ವದ ಅತ್ಯಂತ ದುಬಾರಿ ಹಾರಗಳಲ್ಲಿ ಒಂದು. ಇದು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಮಾನ್ಯತೆ ಪಡೆದಿದೆ.

2007 ರಲ್ಲಿ ನೀತಾ ಅಂಬಾನಿ ಅವರ 44 ನೇ ಹುಟ್ಟುಹಬ್ಬದಂದು ಅವರು 240 ಕೋಟಿ ರೂ.ಗಳ ಮೌಲ್ಯದ ಅತಿರಂಜಿತ ಖಾಸಗಿ ಜೆಟ್ ಅನ್ನು ಪತಿಯಿಂದ ಉಡುಗೊರೆಯಾಗಿ ಪಡೆದುಕೊಂಡಿದ್ದರು. ಅದ್ದೂರಿ ಕ್ಯಾಬಿನ್ ಮತ್ತು ಸ್ಕೈ-ಬಾರ್ ಸೇರಿದಂತೆ ಸಕಲ ಸೌಲಭ್ಯಗಳನ್ನು ಹೊಂದಿದೆ ಈ ವಿಮಾನ.

ಇದನ್ನೂ ಓದಿ : Byju Raveendran: ಸಿಇಒ ಸ್ಥಾನದಿಂದ ಬೈಜು ರವೀಂದ್ರನ್‌ನನ್ನು ಕಿತ್ತು ಹಾಕಿದ ಷೇರುದಾರರು!

ದೀಪಾವಳಿ ವೇಳೆ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಗೆ 10 ಕೋಟಿ ರೂ.ಗಳ ಮೌಲ್ಯದ ಡೀಲಕ್ಸ್ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್ ಯುವಿ ಉಡುಗೊರೆಯಾಗಿ ಕೊಟ್ಟಿದದ್ರು. ಇದು ಲಿಮಿಟೆಡ್ ಎಡಿಷನ್​ ಕಾರು.

ಮೊಮ್ಮಕ್ಕಳಿಗೂ ಭರ್ಜರಿ ಗಿಫ್ಟ್​

ಮುಖೇಶ್ ಮತ್ತು ನೀತಾ ಅಂಬಾನಿ ತಮ್ಮ ಮೊಮ್ಮಕ್ಕಳಿಗೂ ಭರ್ಜರಿ ಗಿಫ್ಟ್​ಗಳನ್ನು ಕೊಟ್ಟಿದ್ದಾರೆ. ಇಶಾ ಅಂಬಾನಿಯ ಅವಳಿ ಮಕ್ಕಳಿಗೆ ಕಸ್ಟಮ್ ಕ್ಲೋಸೆಟ್ ಗಳನ್ನು ಕೊಟ್ಟಿದ್ದರು.

ಅಂಬಾನಿ ಕುಟುಂಬವು. ದುಬಾರಿ ಆಭರಣಗಳಿಂದ ಹಿಡಿದು ಉನ್ನತ ದರ್ಜೆಯ ಕಾರುಗಳು ಮತ್ತು ವಿಮಾನಗಳವರೆಗೆ ನಿಜವಾಗಿಯೂ ಅದ್ದೂರಿ ಉಡುಗೊರೆಗಳನ್ನು ನೀಡಲು ಇಷ್ಟಪಡುತ್ತದೆ. ತಮ್ಮ ಕುಟುಂಬದೊಂದಿಗೆ ಸಂಭ್ರಮದ ಕ್ಷಣಗಳನ್ನು ಆಚರಿಸುವಾಗ ದೊಡ್ಡ ಗಿಫ್ಟ್​​ಗಳನ್ನು ನೀಡಲು ಮರೆಯುವುದಿಲ್ಲ.

Exit mobile version