Site icon Vistara News

Amith Shah : ಇಟಲಿ ಸಂಸ್ಕೃತಿಗೆ ಭಾರತ ಅರ್ಥವಾಗುವುದಿಲ್ಲ; ಖರ್ಗೆ ವಿರುದ್ಧ ಅಮಿತ್​ ಶಾ ವಾಗ್ದಾಳಿ

Amit Shah

Amit Shah claims Arvind Kejriwal's campaign remark clear contempt of Supreme Court

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ನೇ (Artical 370) ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ರಾಜಸ್ಥಾನ ತಮ್ಮ ಭಾಷಣದ ವೇಳೆ ಪ್ರಸ್ತಾಪಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಬಿಜೆಪಿ ಶನಿವಾರ ತರಾಟೆಗೆ ತೆಗೆದುಕೊಂಡಿದೆ. ಅಮಿತ್ ಶಾ (Amith Shah) ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಎಕ್ಸ್ ನಲ್ಲಿ ಖರ್ಗೆ ಅವರ ಭಾಷಣದ ಸಣ್ಣ ತುಣುಕನ್ನು ಹಂಚಿಕೊಂಡಿದ್ದಾರೆ. ಅಮಿತ್​ ಶಾ ಅವರು ಈ ಬಗ್ಗೆ ನೇರವಾಗಿ ಟೀಕೆ ಮಾಡಿದ್ದು, ಇಟಲಿ ಸಂಸ್ಕೃತಿಯವರಿಗೆ ನಿಜವಾದ ಭಾರತದ ಬಗ್ಗೆ ಏನೂ ಗೊತ್ತಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಖರ್ಗೆ ಹೇಳಿಕೆ ನಾಚಿಕೆಗೇಡು ಎಂದು ಆರ್ ಶಾ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಕೇಂದ್ರಾಡಳಿತ ಪ್ರದೇಶದ ಜನರಿಗೆ ದೇಶದ ಉಳಿದ ಭಾಗಗಳ ಮೇಲೆ ಹಕ್ಕಿರುವಂತೆ ಪ್ರತಿ ರಾಜ್ಯ ಮತ್ತು ನಾಗರಿಕರಿಗೆ ಅದರ ಮೇಲೆ ಹಕ್ಕಿದೆ ಎಂದು ಅವರು ಕಾಂಗ್ರೆಸ್​ಗೆ ಸ್ಮರಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ರಾಜಸ್ಥಾನದ ಅನೇಕ ಧೈರ್ಯಶಾಲಿ ಪುತ್ರರು ಕಾಶ್ಮೀರದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಕಾಂಗ್ರೆಸ್​ ಪಕ್ಷಕ್ಕೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಅವರ ತಪ್ಪಲ್ಲ, ಸಂಸ್ಕೃತಿಯ ತಪ್ಪು

ಇದು ಕೇವಲ ಕಾಂಗ್ರೆಸ್ ನಾಯಕರ ತಪ್ಪಲ್ಲ. ಭಾರತದ ಕಲ್ಪನೆಯನ್ನೇ ಅರ್ಥಮಾಡಿಕೊಳ್ಳದಿರುವುದಕ್ಕೆ ಕಾಂಗ್ರೆಸ್ ಪಕ್ಷದ ಇಟಾಲಿಯನ್ ಸಂಸ್ಕೃತಿಯೇ ಕಾರಣ. ಇಂತಹ ಹೇಳಿಕೆಗಳು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬ ದೇಶಭಕ್ತ ನಾಗರಿಕನನ್ನು ನೋಯಿಸುತ್ತವೆ. ಜನರು ಖಂಡಿತವಾಗಿಯೂ ಕಾಂಗ್ರೆಸ್​​​ಗೆ ಉತ್ತರಿಸುತ್ತಾರೆ” ಎಂದು ಅವರು ಪೋಸ್ಟ್​ನಲ್ಲಿ ತಿಳಿಸಿದ್ದಾರೆ

ಕಾಂಗ್ರೆಸ್​ನ ಮಾಹಿತಿಗಾಗಿ, ಮೋದಿ ಸರ್ಕಾರವು 371 ನೇ ವಿಧಿಯನ್ನು ರದ್ದುಪಡಿಸಲಿಲ್ಲ, ಆದರೆ 370 ನೇ ವಿಧಿಯನ್ನು ರದ್ದುಪಡಿಸಿತು” ಎಂದು ಅವರು ಹೇಳಿದ್ದಾರೆ. ತಮ್ಮ ಮಾತಿನ ದಾಳಿಯನ್ನು ಮುಂದುವರಿಸಿದ ಗೃಹ ಸಚಿವರು, ಕಾಂಗ್ರೆಸ್ ಇಂತಹ ಭಯಾನಕ ತಪ್ಪುಗಳನ್ನು ಮಾಡುವುದು ನಿರೀಕ್ಷಿತ ಎಂದರು.

ಇದನ್ನೂ ಓದಿ: Rajnath Singh : ಭಾರತದ ರಾಜಕೀಯದ ಬೆಸ್ಟ್​ ಫಿನಿಶರ್​! ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ ರಾಜ್​ನಾಥ್​ ಸಿಂಗ್​

ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಈ ವಿಷಯವನ್ನು ಬಳಸಿಕೊಂಡಿದ್ದಾರೆ.

ಎಕ್ಸ್​ ಪೋಸ್ಟ್​ನಲ್ಲಿ “ಮತ್ತೊಂದು ದಿನ, ಕಾಂಗ್ರೆಸ್​ನಿಂದ ಮತ್ತೊಂದು ರತ್ನ! ಜಮ್ಮು ಮತ್ತು ಕಾಶ್ಮೀರವು ಭಾರತದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಳ್ಳಬೇಕೆಂದು ಬಯಸಿದ ಕಾಂಗ್ರೆಸ್ ಮನಸ್ಥಿತಿಯನ್ನು ಖರ್ಗೆ ಜಿ ಪ್ರದರ್ಶಿಸಿದ್ದಾರೆ. ಅದು 370ನೇ ವಿಧಿಯೇ ಹೊರತು 371ನೇ ವಿಧಿಯಲ್ಲ ಎಂಬುದೂ ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.

Exit mobile version