Site icon Vistara News

Viral Video : ಇವನೆಂಥಾ ದುಷ್ಟ ಮಗ; ಆಸ್ತಿಗಾಗಿ ಅಮ್ಮನನ್ನೇ ದರದರ ಎಳೆದು ಥಳಿಸಿದ

viral video

ವಿಶಾಖಪಟ್ಟಣಂ: ಆಸ್ತಿ ಆಸೆ ಮತ್ತು ದುರಾಸೆ ಮನುಷ್ಯನ ಕೈಯಲ್ಲಿ ಕೆಟ್ಟ ಕೆಲಸ ಮಾಡಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಣ್ಣ, ತಮ್ಮ, ಅಪ್ಪ, ಅಮ್ಮ ಎಂಬುದನ್ನು ಮರೆತು ದುಷ್ಟತನ ಮೆರೆಯುತ್ತಾರೆ. ಅಂಥದ್ದೇ ಒಂದು ಘಟನೆ ಆಂಧ್ರದಲ್ಲಿ ನಡೆದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ಹೆತ್ತವರನ್ನು ನಿರ್ದಯವಾಗಿ ಥಳಿಸುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಷಾದ ವ್ಯಕ್ತಗೊಂಡಿದೆ. ಪೊಲೀಸರು ಆತನನ್ನು ಬಂಧಿಸಿ ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.

ದುಷ್ಟ ತನ್ನ ತಾಯಿಯ ಕೂದಲನ್ನು ಹಿಡಿದು ಎಳೆದಿದ್ದಾನೆ, ಆಕೆ ಅಳುತ್ತಿರುವ ನಡುವೆಯೂ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾನೆ. ಆಕೆ ಹೊಡೆಯುವುದನ್ನು ನಿಲ್ಲಿಸುವಂತೆ ಬೇಡಿಕೊಂಡರೂ ಮನ ಕರಗುವುದಿಲ್ಲ ಒಂದು ಹಂತದಲ್ಲಿ ಎಷ್ಟು ಬಲವಾಗಿ ಒದೆಯುತ್ತಾನೆ ಎಂದರೆ ಆಕೆ ಎಗರಿ ಬೀಳುತ್ತಾಳೆ. ನಂತರವೂ ನಿಲ್ಲಿಸದ ಆತ ಹಲ್ಲೆ ಮಾಡಿದ್ದಾನೆ.

ತಾಯಿ ಅಳುತ್ತಾ ನೆಲದ ಮೇಲೆ ಮಲಗಿದ್ದಾಗ ಆತ ತನ್ನ ತಂದೆಯ ಕಡೆಗೆ ತಿರುಗಿ ಅವರಿಗೆ ಕಪಾಳಮೋಕ್ಷ ಮಾಡುತ್ತಾನೆ. ಪುಟ್ಟ ಹುಡುಗಿಯೊಬ್ಬಳು ಆ ವ್ಯಕ್ತಿಯ ಪಕ್ಕದಲ್ಲಿ ನಿಂತು ಈ ದೃಶ್ಯವನ್ನು ನೋಡಿ ಗಾಬರಿ ಬೀಳುತ್ತಾಳೆ,

ವೀಡಿಯೊದಲ್ಲಿ ಕೆಲವು ಮೂಕ ಪ್ರೇಕ್ಷಕರೂ ಇದ್ದಾರೆ. ಅವರಲ್ಲಿ ಯಾರೂ ದಂಪತಿಗಳಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ ಎಂಬುದೇ ಅಚ್ಚರಿ.

ಪ್ರಕರಣ ದಾಖಲು

ಅನ್ನಮಯ್ಯ ಜಿಲ್ಲೆಯಲ್ಲಿ ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸುಲು ರೆಡ್ಡಿ ಎಂದು ಗುರುತಿಸಲ್ಪಟ್ಟ ವ್ಯಕ್ತಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : ಯುಪಿ ಬಿಜೆಪಿ ಸಂಸದನ ಅಶ್ಲೀಲ ವಿಡಿಯೋ ವೈರಲ್; ಪ್ರಕರಣ ದಾಖಲು

ಶ್ರೀನಿವಾಸುಲು ತನ್ನ ಹಿರಿಯ ಸಹೋದರ ಮನೋಹರ್ ರೆಡ್ಡಿಗೆ ನೀಡಿದ ಮೂರು ಎಕರೆ ಜಮೀನಿನ ಬಗ್ಗೆ ಅಸಮಾಧಾನ ಹೊಂದಿದ್ದ. ಹೆತ್ತವರಾದ ಲಕ್ಷ್ಮಮ್ಮ ಮತ್ತು ವೆಂಕಟರಮಣಗೆ ಜಮೀನು ವಾಪಸ್​ ಕೊಡುವಂತೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಆತ ಪತ್ರಗಳನ್ನು ತೆಗೆದುಕೊಂಡು ಬಂದು ಸಹಿ ಮಾಡಿಸಲು ಹಲ್ಲೆ ಮಾಡಿದ್ದ. ಥಳಿಥಕ್ಕೆ ಹೆದರಿ ಅವರು ಸಹಿ ಮಾಡಲು ಒಪ್ಪಿಕೊಂಡ ನಂತರವೂ ಹೊಡೆಯುವುದನ್ನು ಮುಂದುವರಿಸಿದ್ದ.

ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಯುವರಾಜು ಮಾತನಾಡಿ, “ಪೋಷಕರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಯಾರಾದರೂ ಶಿಕ್ಷೆಗೆ ಗುರಿಯಾಗುತ್ತಾರೆ. ಪೋಷಕರು ಮತ್ತು ಹಿರಿಯರು ಅಂತಹ ಯಾವುದೇ ಘಟನೆ ಕುರಿತು ಮಾಹಿತಿ ನೀಡಬೇಕು ಎಂದು ಮನವಿ ಮಾಡಬೇಕು.

Exit mobile version