ಬೆಂಗಳೂರು: 16ನೇ ವಿಧಾನಸಭೆಯ ಮಳೆಗಾಲದ ಅಧಿವೇಶನಕ್ಕೆ (Vidhan Sabha Session, Assembly monsoon session) ) ಮುನ್ನವೇ ವಿಧಾನಸೌಧವನ್ನು (Vidhana Soudha) ಹೊಸದಾಗಿ ಶೃಂಗರಿಸಲಾಗಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣವನ್ನು (renovation) ನವೀಕರಣಗೊಳಿಸಲಾಗಿದೆ. ಸ್ಪೀಕರ್ ಯು.ಟಿ ಖಾದರ್ (Speaker UT Khader) ಅವರು ಮುತುವರ್ಜಿ ವಹಿಸಿ ಈ ನವೀಕರಣ ನಡೆಸಿದ್ದು, ಇದೀಗ ಒಳಾಂಗಣ ಹೈಟೆಕ್ ಸ್ಪರ್ಶದಿಂದ ಕಂಗೊಳಿಸುತ್ತಿದೆ.
ವಿಧಾನಸಭೆ ಒಳಾಂಗಣ ರೋಸ್‌ವುಡ್ ಡೋರ್, ಕಾರ್ಪೆಟ್, ಫ್ಲೋರ್ ಮ್ಯಾಟ್, ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಸೇರಿದಂತೆ ರೀ ಫರ್ನಿಶಿಂಗ್ ಮಾಡಲಾಗಿದೆ. ಸ್ಪೀಕರ್ ಕಚೇರಿಗೆ ಹೊಸ ಬಾಗಿಲು, ಫ್ಲೋರ್ ಮ್ಯಾಟ್, ಇತರೆ ನವೀಕರಣ ಮಾಡಲಾಗಿದೆ. PWD ಕೆಲಸವನ್ನು ಸ್ಪೀಕರ್ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗಿದೆ.
ಮಧ್ಯಾಹ್ನ ಹೊತ್ತು ಊಟದ ಲಾಂಜ್‌ನಲ್ಲಿ ಶಾಸಕರಿಗೆ ವಿಶ್ರಾಂತಿ ಪಡೆಯಲು ಅಳವಡಿಸಲಾದ ರಿಕ್ಲೈನರ್‌ಗಳ ಬಗೆಗೆ ನಿನ್ನೆ ಸ್ಪೀಕರ್ ಕಲಾಪದಲ್ಲಿ ಹೇಳಿದ್ದರು. ಶಾಸಕರ ಗೈರುಹಾಜರು ತಪ್ಪಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು.
ಯಾವುದಕ್ಕೆ ಎಷ್ಟೆಷ್ಟು ಖರ್ಚು?
ವಿಧಾನಸೌಧದ ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶದ್ವಾರ, ಅಸೆಂಬ್ಲಿ ಪ್ರವೇಶದ ಮುಂಭಾಗ ಮತ್ತು ಹಿಂಭಾಗದ ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಮತ್ತು ಮುಂಭಾಗದ ಪಿಲ್ಲರ್ ಮತ್ತು ಹೊಸ ಬಾಗಿಲಿನ ನಡುವೆ 1 ವಾಲ್ ಕ್ಲಾಡಿಂಗ್ ಹಾಕಲು- 43 ಲಕ್ಷ
ಅಸೆಂಬ್ಲಿ ಪ್ರವೇಶ, ಆಡಳಿತ ಮತ್ತು ವಿರೋಧ ಪಕ್ಷದ ಲಾಂಜ್ ಪ್ರವೇಶ ಕಾರಿಡಾರ್, ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶ ಹಂತಗಳಿಗೆ ನೆಲದ ಕಾರ್ಪೆಟ್ ಹಾಕಲು- 32 ಲಕ್ಷ 50 ಸಾವಿರ
ಪಾಲಿಕಾರ್ಬೊನೇಟ್ ಶೀಟ್‌ನಿಂದ ಒಳಗಿನ ಕಾರಿಡಾರ್ ಓಪನ್ನಿಂಗ್‌ನ 3 ಅಸೆಂಬ್ಲಿ ಪ್ರವೇಶದ್ವಾರದ ಸುತ್ತಲೂ 10 ರಿಂದ 12 ಮಿಮೀ ದಪ್ಪದ ಟಫನ್ ಗ್ಲಾಸ್ ವಿಭಾಗವನ್ನು ಒದಗಿಸುವುದು ಮತ್ತು ಪ್ಯಾರಪೆಟ್ ರಂಧ್ರಗಳನ್ನು ಮುಚ್ಚುವುದು- 8 ಲಕ್ಷ 90 ಸಾವಿರ
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಕ್ಕೆ ಯಾಂತ್ರಿಕೃತ ರಿಕ್ಲೈನರ್ ಕುರ್ಚಿಗಳನ್ನು ಒದಗಿಸುವುದು- 23 ಲಕ್ಷ 60 ಸಾವಿರ
ಅಸೆಂಬ್ಲಿ ಪ್ರವೇಶ ಕಾರಿಡಾರ್ ಮತ್ತು ಪೂರ್ವ ಭಾಗದ ಸೆಂಟ್ರಲ್ ಹಾಲ್ ಮತ್ತು ಗ್ರ್ಯಾಂಡ್ ಸ್ಟೆಪ್ ಪ್ರವೇಶ ಗೋಡೆಗಳಿಗೆ ಪೇಂಟಿಂಗ್ ಮತ್ತು ಪಾಲಿಶಿಂಗ್ ಮಾಡುವುದು- 14 ಲಕ್ಷ 80 ಸಾವಿರ
ಸಿಎಂ ಚೇಂಬರ್, ಪ್ರೆಸ್ ಲಾಂಜ್, ಸಚಿವರ ಲಾಂಜ್ ಮತ್ತು ಮಹಿಳಾ ಲಾಂಜ್‌ನ ಶೌಚಾಲಯ ನವೀಕರಣ- 18 ಲಕ್ಷ 50 ಸಾವಿರ
ಮೊದಲ ಮಹಡಿಯ ಸೆಂಟ್ರಲ್ ಹಾಲ್‌ನಲ್ಲಿ ತಾತ್ಕಾಲಿಕ ಅಡಿಗೆ, ಊಟ, ಕುರ್ಚಿಗಳು, ಟೇಬಲ್‌ಗಳು, ವಿಭಜನೆ, ಬ್ಯಾರಿಕೇಡ್‌ಗಳನ್ನು ಹಾಕುವುದು ಮತ್ತು ಊಟದ ಟೇಬಲ್, ಟ್ಯಾಪ್ ಕ್ಲಾತ್‌ಗಳು, ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಕುರ್ಚಿಗಳನ್ನು ಹಾಕುವುದು ಅಧಿವೇಶನದಲ್ಲಿ ಅಸೆಂಬ್ಲಿಗೆ ಇತರ ಸಂಬಂಧಿತ ಕೆಲಸಗಳಿಗೆ- 27 ಲಕ್ಷ 75 ಸಾವಿರ
ಕಾರ್ಪೆಟ್, ಕುರ್ಚಿಗಳು, ಸೋಫಾಗಳು ಮತ್ತು ಅವುಗಳನ್ನು ತೊಳೆಯುವುದು, ನೀರು ಸರಬರಾಜು, ಪೇಂಟಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳಿಗೆ- 10 ಲಕ್ಷ 35 ಸಾವಿರ
ಮೊದಲನೇ ಮಹಡಿಗೆ ಸ್ಟೇನ್‌ಲೆಸ್ ಸ್ಟೀಲ್ ನೇಮ್ ಬೋರ್ಡ್‌ಗಳಲ್ಲಿ ಅಸೆಂಬ್ಲಿ ಪ್ರವೇಶ ಕಾರಿಡಾರ್‌ನ ಎರಡೂ ಬದಿಗಳಿಗೆ ಸ್ಟೇನ್‌ಲೆಸ್ ಸ್ಟೀಲ್ ಗ್ರಿಲ್‌ಗಳನ್ನು ಒದಗಿಸುವುದು, ಅಸೆಂಬ್ಲಿ ಪ್ರವೇಶ ನಾಮ ಫಲಕ ಅಳವಡಿಕೆಗೆ- 16 ಲಕ್ಷ 60 ಸಾವಿರ
ಒಟ್ಟು 1 ಕೋಟಿ 96 ಲಕ್ಷ ವ್ಯಯ ಮಾಡಲಾಗಿದ್ದು, ಈ ಮೂಲಕ ವಿಧಾನಸೌಧ ಹೈಟೆಕ್ ಜೊತೆ ಆಧುನಿಕ ಮಾಡಲಾಗಿದೆ.