Site icon Vistara News

BBK SEASON 10 : ಬಿಗ್ ಬಾಸ್‌ ಮನೆಯಿಂದ ಅವಿನಾಶ್ ಶೆಟ್ಟಿ ಔಟ್

Avinash Shetty

ಬೆಂಗಳೂರು: ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಬಿಗ್​ಬಾಸ್​ ಕನ್ನಡದ 10ನೇ ಆವೃತ್ತಿಯು (BBK SEASON 10) 77 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗುತ್ತಿದೆ. ಇದೀಗ ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಅಸ್ತಿಕ್ ಅವಿನಾಶ್ ಶೆಟ್ಟಿ (Avinash Shetty) ಹೊರಕ್ಕೆ ಬಂದಿದ್ದಾರೆ.

ಬಿಗ್​ಬಾಸ್ ಶೋ 50 ದಿನ ಪೂರೈಸಿದ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಂಗಳೂರಿನ ಅವಿನಾಶ್ ಶೆಟ್ಟಿ ಪ್ರವೇಶ ಪಡೆದಿದ್ದರು ಎಂಟ್ರಿ ಕೊಟ್ಟಾಗಲೇ ಆನೆ ವಿನಯ್‌ಗೆ ಮಾವುತನಾಗಿ ಆತನನ್ನು ಪಳಗಿಸುತ್ತೇನೆ ಎಂದು ಅವಿನಾಶ್ ಡೈಲಾಗ್ ಹೊಡೆದಿದ್ದರು. ಅದು ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿತ್ತು. ಆದರೆ, ಮತ್ತೆ ಮೂರೇ ವಾರದಲ್ಲಿ ಬಿಗ್ ಬಾಸ್ ಮನೆ ಆಟದಿಂದ ಅವಿನಾಶ್​ ಹೊರಕ್ಕೆ ಬರುವಂತಾಗಿದೆ.

ಹಿಂದಿನ ವಾರ ವೈಲ್ಡ್ ಕಾರ್ಡ್ ಎಂಟ್ರಿ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದರು. ಇದೀಗ ಈ ವಾರ ಅವಿನಾಶ್‌ಗೆ ದೊಡ್ಮನೆ ಆಟ ಅಂತ್ಯವಾಗಿದೆ. ಡಬಲ್ ಎಲಿಮಿನೇಷನ್‌ನ (Elimination) ಮೊದಲ ಸ್ಪರ್ಧಿ ಅವಿನಾಶ್ ಎಂದು ತಿಳಿದು ಬಂದಿದ್ದು, ಮತ್ತೊಬ್ಬ ಸ್ಪರ್ಧಿ ಯಾರು ರಿವೀಲ್ ಆಗಿಲ್ಲ. ಕಳೆದ ವಾರ ಅವಿನಾಶ್ ಶೆಟ್ಟಿ ಆಟ ಚೆನ್ನಾಗಿ ಆಡಿದ್ದರು. ಹೀಗಾಗಿ ಅವಿನಾಶ್ ಎಲಿಮಿನೇಟ್ ಆಗಿರೋದು ಅಭಿಮಾನಿಳಿಗೆ ಆಘಾತಕಾರಿ ಸಂಗತಿ ಎನಿಸಿದೆ.

ಹೀಗಿತ್ತು ಎಲಿಮಿನೇಷನ್​

ಬಿಗ್‌ಬಾಸ್‌ ಮನೆಯೊಳಗೆ ಎರಡು ಕಾರುಗಳು ಬಂದಿತ್ತು ಆ ಕಾರಿನೊಳಗೆ ಅವಿನಾಶ್ ಮತ್ತು ಮೈಕಲ್ ಹೋಗಿದ್ದರು . ಈ ಎರಡು ಕಾರುಗಳಲ್ಲಿ ಒಂದು ಕಾರು ತಡವಾಗಿ ಬರುತ್ತದೆ. ಆ ಬಂದ ಕಾರಿನಲ್ಲಿರವರರು ಸೇಫ್. ಅದರಂತೆ ಮೈಕಲ್ ಸೇಫ್ ಆಗಿ ಅವಿನಾಶ್ ಎಲಿಮಿನೇಟ್ ಆಗಿದ್ದಾರೆ.

ಇದನ್ನೂ ಓದಿ : BBK SEASON 10: ವಿನಯ್‌ ತುಂಬ ಸ್ವೀಟ್‌ ಎಂದ ಸಂಗೀತಾ; ಗಾಬರಿಗೊಂಡ ಶೈನ್‌ ಶೆಟ್ಟಿ!

ಯಾರು ಅವಿನಾಶ್​ ಶೆಟ್ಟಿ?

ಆಸ್ತಿಕ್ ಅವಿನಾಶ್ ಶೆಟ್ಟಿ ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಸಕ್ರಿಯ ನಟ. ಅವರು ಕ್ರಿಕೆಟಿಗ ಮತ್ತು ಮಾಡೆಲ್ ಕೂಡ ಹೌದು. ಇವರು ಮೂಲತಃ ಮಂಗಳೂರು ನಗರ ಸಮೀಪದ ಸುರತ್ಕಲ್‌ನವರು. ಇವರ ತಂದೆ ಶ್ರೀಧರ್ ಶೆಟ್ಟಿ ಹಾಗೂ ತಾಯಿ ಸುಕನ್ಯಾ. ಅವಿನಾಶ್​​ ಎಸ್‌ಡಿಎಂ ಕಾಲೇಜ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.

ಶೈನ್​​, ಶುಭಾ ಸೂಪರ್ ಸಂಡೆ

ಸೂಪರ್ ಸಂಡೇ ಕಾರ್ಯಕ್ರಮ ನಡೆಸಿಕೊಡಲು ಸುದೀಪ್ ಬಂದಿಲ್ಲ. ಬದಲಾಗಿ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ದೊಡ್ಮನೆಗೆ ಆಗಮಿಸಿದ್ದರು. ಈ ಇಬ್ಬರ ಆಗಮನ ಎಲ್ಲ ಸ್ಪರ್ಧಿಗಳ ಮುಖದಲ್ಲೂ ಸಂತಸ ತರಿಸಿತ್ತು. ಆದರೆ, ಈ ಮಧ್ಯೆ ಎಲಿಮಿನೇಷನ್ ಕೂಡ ನಡೆದಿದೆ.

Exit mobile version