ಬೆಂಗಳೂರು: ಇಂದು ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಬಿ.ಆರ್ ಅಂಬೇಡ್ಕರ್ (B.R.Ambedkar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೇಶದ ಪ್ರಗತಿಗೆ ಅಂಬೇಡ್ಕರ್ ಅವರು ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ಅವರು ಏಪ್ರಿಲ್ 14, 1891ರಂದು ಮಧ್ಯಪ್ರದೇಶದ ಇಂದೋರ್ ನ ಮೊವ್ ನಲ್ಲಿ ದಲಿತ ಮಹಾರ್ ಕುಟುಂಬದಲ್ಲಿ ಜನಿಸಿದರು. ಹಾಗಾಗಿ ಪ್ರತಿವರ್ಷ ಏಪ್ರಿಲ್ 14 ರಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿ ಎಂದೂ ಕರೆಯಲಾಗುತ್ತದೆ.
ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಬಾಬಾ ಸಾಹೇಬ್ ಡಾ. ಭೀಮ ರಾವ್ ಅಂಬೇಡ್ಕರ್ ಎಂದು ಕರೆಯಲಾಗುತ್ತದೆ. ಇವರು ವಿಶ್ವದ ಖ್ಯಾತ ವಕೀಲರು, ಸಮಾಜ ಸುಧಾರಕರು ಮತ್ತು ಖ್ಯಾತ ವಿದ್ವಾಂಸರು ಆಗಿದ್ದರು. ಇಂತಹ ಮಹಾನ್ ವ್ಯಕ್ತಿ ಡಿಸೆಂಬರ್ 6, 1956ರಂದು ದೆಹಲಿಯಲ್ಲಿ ನಿಧನರಾದರು.
ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳು :
- 1. ಡಾ. ಬಿ.ಆರ್ ಅಂಬೇಡ್ಕರ್ ಅವರು ಪೋಷಕರ 14ನೇ ಮತ್ತು ಕೊನೆಯ ಮಗುವಾಗಿದ್ದರು.
- 2. ಡಾ. ಬಿ.ಆರ್ ಅಂಬೇಡ್ಕರ್ ಅವರ ನಿಜವಾದ ಉಪನಾಮ ಅಂಬಾವಾಡೇಕರ್. ಆದರೆ ಅವರ ಶಿಕ್ಷಕ ಮಹಾದೇವ ಅಂಬೇಡ್ಕರ್ ಅವರು ಶಾಲೆಯ ದಾಖಲೆಗಳಲ್ಲಿ ಅಂಬೇಡ್ಕರ್ ಎಂಬ ಉಪನಾಮವನ್ನು ಅವರಿಗೆ ನೀಡಿದರು.
- 3. ಡಾ. ಬಿ.ಆರ್ ಅಂಬೇಡ್ಕರ್ ಅವರು ವಿದೇಶದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್ ಡಿ) ಪದವಿ ಪಡೆದ ಮೊದಲ ಭಾರತೀಯರೆನಿಸಿಕೊಂಡಿದ್ದಾರೆ.
- 4. ಇವರು ಲಂಡನ್ ನ ಮ್ಯೂಸಿಯಂ ನಲ್ಲಿ ಕಾರ್ಲ್ ಮಾರ್ಕ್ಸ್ ಪ್ರತಿಮೆಯನ್ನು ಲಗತ್ತಿಸಿರುವ ಏಕೈಕ ಭಾರತೀಯರಾಗಿದ್ದಾರೆ.
- 5. ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ್ದು ಪಿಂಗಲಿ ವೆಂಕಯ್ಯ ಅವರಾದರೂ ಕೂಡ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರಕ್ಕೆ ಸ್ಥಾನ ನೀಡಿದ ಕೀರ್ತಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.
- 6. ನೊಬೆಲ್ ಪ್ರಶಸ್ತಿ ವಿಜೇತ ಪ್ರೊ.ಅಮರ್ತ್ಯ ಸೇನ್ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು “ಅರ್ಥಶಾಸ್ತ್ರದ ಪಿತಾಮಹಾ” ಎಂದು ಪರಿಗಣಿಸಿದ್ದಾರೆ.
- 7. ಡಾ. ಬಿ.ಆರ್ ಅಂಬೇಡ್ಕರ್ ಅವರು 50ರ ದಶಕದಲ್ಲಿ ಮಧ್ಯ ಪ್ರದೇಶ ಮತ್ತು ಬಿಹಾರದ ಅಭಿವೃದ್ಧಿಗಾಗಿ ಈ ರಾಜ್ಯಗಳ ವಿಭಜನೆಯ ವಿಚಾರವನ್ನು ಪ್ರಸ್ತಾಪಿಸಿದರು. ಆದರೆ 2000ರ ನಂತರ ಅವು ವಿಭಜನೆಯಾಗಿ ಛತ್ತೀಸ್ ಗಢ್ ಮತ್ತು ಜಾರ್ಖಂಡ್ ರಚನೆಯಾದವು.
- 8. ಡಾ. ಬಿ.ಆರ್ ಅಂಬೇಡ್ಕರ್ ಅವರ ವೈಯಕ್ತಿಕ ಗ್ರಂಥಾಲಯ “ರಾಜಗಿರಿ” ಯಲ್ಲಿ 50000ಕ್ಕೂ ಹೆಚ್ಚು ಪುಸ್ತಕಗಳಿವೆ ಮತ್ತು ಇದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯ ಎನಿಸಿಕೊಂಡಿದೆ.
- 9. ಡಾ. ಬಿ.ಆರ್ ಅಂಬೇಡ್ಕರ್ ಬರೆದ ಪುಸ್ತಕ “ವೀಸಾಗಾಗಿ ಕಾಯುವಿಕೆ” ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಠ್ಯ ಪುಸ್ತಕವಾಗಿದೆ. ಹಾಗೇ 2004ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ ರಚಿಸಿದ ವಿಶ್ವದ ಅಗ್ರ 100 ವಿದ್ವಾಂಸರ ಪಟ್ಟಿಯಲ್ಲಿ ಮೊದಲ ಹೆಸರು ಡಾ. ಬಿ.ಆರ್ ಅಂಬೇಡ್ಕರ್ ಅವರದಾಗಿದೆ.
- 10. ಡಾ. ಬಿ.ಆರ್ ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಮಾಸ್ಟರ್ ಎನಿಸಿಕೊಂಡಿದ್ದಾರೆ. ಹಾಗೇ ಅವರು ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಷಿಯನ್ ಮತ್ತು ಗುಜರಾತಿ ಮುಂತಾದ 9 ಭಾಷೆಗಳ ಜ್ಞಾನವನ್ನು ಹೊಂದಿದ್ದರು. ಇದಲ್ಲದೇ ಸುಮಾರು 21 ವರ್ಷಗಳ ಕಾಲ ವಿಶ್ವದ ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಿದ್ದಾರೆ.
- 11. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ದಿನಕ್ಕೆ 21 ಗಂಟೆಗಳ ಕಾಲ ಅಧ್ಯಯನ ಮಾಡಿ 8 ವರ್ಷಗಳ ಅಧ್ಯ ಯನವನ್ನು 2ವರ್ಷ 3 ತಿಂಗಳಿನಲ್ಲಿ ಪೂರ್ಣಗೊಳಿಸಿದರು.
ಇದನ್ನೂ ಓದಿ:BJP Manifesto: ಬಿಜೆಪಿ ಪ್ರಣಾಳಿಕೆ; ರೈತನಿಗೆ ಮೊದಲ ಪ್ರತಿ ನೀಡಿದ ಮೋದಿ, 14 ಗ್ಯಾರಂಟಿ ಘೋಷಣೆ
- 12. ಇವರು ತಮ್ಮ 8,50,000 ಬೆಂಬಲಿಗರೊಂದಿಗೆ ಬೌದ್ದ ಧರ್ಮಕ್ಕೆ ಐತಿಹಾಸಿಕವಾಗಿ ಪ್ರವೇಶಿಸಿದ್ದರಿಂದ ಇದು ವಿಶ್ವದ ಅತಿದೊಡ್ಡ ಮತಾಂತರ ಎನಿಸಿತು.
- 13. ಇವರು ತಮ್ಮನ್ನು ಬೌದ್ಧ ಧರ್ಮಕ್ಕೆ ದೀಕ್ಷೆ ನೀಡಿದ ಮಹಾನ್ ಬೌದ್ಧ ಸನ್ಯಾಸಿ “ಮಹಾಂತ್ ವೀರ ಚಂದ್ರಮಣಿ” ಅವರನ್ನು ಈ ಯುಗದ ಆಧುನಿಕ ಬುದ್ಧ ಎಂದು ಕರೆದರು.
- 14. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ “ಡಾಕ್ಟರ್ ಆಲ್ ಸೈನ್ಸ್ “ ಎಂಬ ಮೌಲ್ಯಯುತ ಡಾಕ್ಟರೇಟ್ ಪದವಿ ಪಡೆದ ವಿಶ್ವದ ಮೊದಲ ಮತ್ತು ಏಕೈಕ ವ್ಯಕ್ತಿ ಎನಿಸಿಕೊಂಡಿದ್ದಾರೆ.
- 15. ವಿಶ್ವದಾದ್ಯಂತ ಇವರ ಹೆಸರಿನಲ್ಲಿ ಅತಿ ಹೆಚ್ಚು ಹಾಡುಗಳು ಮತ್ತು ಪುಸ್ತಕಗಳನ್ನು ಬರೆಯಲಾಗಿದೆ ಎನ್ನಲಾಗಿದೆ.
- 16. ಗವರ್ನರ್ ಲಾರ್ಡ್ ಲಿನ್ಲಿತ್ಗೋ ಮತ್ತು ಮಹಾತ್ಮ ಗಾಂಧಿಯವರು ಡಾ. ಬಿ.ಆರ್ ಅಂಬೇಡ್ಕರ್ ಅವರು ಸಾವಿರಾರು ಪದವೀಧರರು ಮತ್ತು ವಿದ್ವಾಂಸರಿಗಿಂತ ಹೆಚ್ಚು ಬುದ್ಧಿವಂತರು ಎಂದು ತಿಳಿದಿದ್ದಾರೆ.
- 17. ಇವರು ಕುಡಿಯುವ ನೀರಿಗಾಗಿ ಸತ್ಯಾಗ್ರಹ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
- 18. 1954ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ‘ವಿಶ್ವ ಬೌದ್ಧ ಮಂಡಳಿ’ಯಲ್ಲಿ ಬೌದ್ಧ ಸನ್ಯಾಸಿಗಳು ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಬೌದ್ಧ ಧರ್ಮದ ಅತ್ಯುನ್ನತ ಬಿರುದು “ ಬೋಧಿಸತ್ವ” ವನ್ನು ನೀಡಿದರು.
- 19. ಡಾ. ಬಿ.ಆರ್ ಅಂಬೇಡ್ಕರ್ ಅವರು ಮೂವರು ಮಹಾಪುರುಷರಾದ ಭಗವಾನ್ ಬುದ್ದ, ಸಂತ ಕಬೀರ ಮತ್ತು ಮಹಾತ್ಮ ಫುಲೆ ಅವರನ್ನು ತಮ್ಮ ಬೋಧಕರು ಎಂದು ಪರಿಗಣಿಸಿದ್ದರು.
- 20. ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಯು ವಿಶ್ವದ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ.
- 21. ಹಿಂದುಳಿದ ವರ್ಗದಿಂದ ಬಂದ ಮೊದಲ ವಕೀಲರೆನಿಸಿಕೊಂಡಿದ್ದಾರೆ.
- 22. “ದಿ ಮೇಕರ್ಸ್ ಆಫ್ ದಿ ಯೂನಿವರ್ಸ್” ಎಂಬ ಜಾಗತಿಕ ಸಮೀಕ್ಷೆಯ ಆಧಾರದ ಮೇಲೆ ಆಕ್ಸ್ ಫರ್ಡ್ ಯೂನಿವರ್ಸಿಟಿ ತಯಾರಿಸಿದ ಅಗ್ರ 100 ಮಾನವತಾವಾದಿಗಳ ಪಟ್ಟಿಯಲ್ಲಿ 4ನೇ ಹೆಸರು ಡಾ. ಬಿ.ಆರ್ ಅಂಬೇಡ್ಕರ್ ಅವರದಾಗಿದೆ.
- 23. ಇವರು ಬರೆದ “ದಿ ಪ್ರಾಬ್ಲಮ್ ಆಫ್ ರುಪಿ-ಇಟ್ಸ್ ಒರಿಜಿನ್ ಆ್ಯನ್ಡ್ ಇಟ್ಸ್ ಸೊಲುಷನ್” ಪುಸ್ತಕದಲ್ಲಿ ನೋಟು ಅಮಾನ್ಯೀಕರಣದ ಬಗ್ಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ.
- 24. ಉತ್ತಮ ಚಿತ್ರಕಾರರಾದ ಇವರು ಬುದ್ಧನ ತೆರೆದ ಕಣ್ಣುಗಳ ಮೊದಲ ವರ್ಣ ಚಿತ್ರವನ್ನು ಬರೆದಿದ್ದರು.
- 25. ಬಾಬಾ ಸಾಹೇಬ್ ಅವರ ಮೊದಲ ಪ್ರತಿಮೆಯನ್ನು ಅವರು ಜೀವಂತವಿರುವಾಗಲೇ 1950ರಲ್ಲಿ ಕೊಲ್ಲಾಪುರದಲ್ಲಿ ಸ್ಥಾಪಿಸಲಾಗಿದೆ.
- 26. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಕಾರ ಡಾ. ಬಿ.ಆರ್ ಅಂಬೇಡ್ಕರ್ ಅವರು ವಿಶ್ವದ ಪ್ರತಿಭಾವಂತ ವ್ಯಕ್ತಿಗಳಲ್ಲಿ ಅಗ್ರಸ್ಥಾನದಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.
- 27. ಇವರು ಬರೆದ “ದಿ ಪ್ರಾಬ್ಲಮ್ ಆಫ್ ರುಪಿ-ಇಟ್ಸ್ ಒರಿಜಿನ್ ಆ್ಯನ್ಡ್ ಇಟ್ಸ್ ಸೊಲುಷನ್” ಪುಸ್ತಕದ ತತ್ವಗಳನ್ನು ಬಳಸಿಕೊಂಡು ಏಪ್ರಿಲ್ 1, 1935ರಂದು ಆರ್ ಬಿ ಐಯನ್ನು ಸ್ಥಾಪಿಸಲಾಗಿದೆ.
- 28. “ಯೂನಿವರ್ಸಲ್ ಅಡಲ್ಟ್ ಫ್ರಾಂಚೈಸ್ “ಗಾಗಿ ಸೌತ್ ಬರೋ ಆಯೋಗದ ಮುಂದೆ ವಾದಿಸಿದ ಮೊದಲ ಭಾರತೀಯ ವ್ಯಕ್ತಿ ಡಾ. ಬಿ.ಆರ್ ಅಂಬೇಡ್ಕರ್
- 29. ನವೆಂಬರ್ 27, 1942ರಂದು ನವದೆಹಲಿಯಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನದ 7ನೇ ಅಧಿವೇಶನದಲ್ಲಿ ಇವರು ಕೆಲಸದ ಅವಧಿಯನ್ನು 12ರಿಂದ 8 ಗಂಟೆಗೆ ಇಳಿಸಬೇಕೆಂಬ ವಾದ ಮಂಡಿಸಿದ್ದರು.
- 30. “ವೇತನ ಶ್ರೇಣಿ ಪರಿಷ್ಕರಣೆ”, “ಲೀವ್ ಬೆನಿಫಿಟ್” ಮತ್ತು “ಡಿಯರ್ನೆಸ್ ಭತ್ಯೆ” ಪರಿಕಲ್ಪನೆಯಲ್ಲೂ ಅಂಬೇಡ್ಕರ್ ಕೊಡುಗೆ ಇದೆ.