ಸೂರತ್: ಟೆರೇಸ್ ಮೇಲೆ ಆಟವಾಡುತ್ತಿದ್ದ ಮಗು ಆಯತಪ್ಪಿ ಕೆಳಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟಿದೆ. ನೀರಿನ ಬಕೆಟ್‌ಗೆ ಮಗು ಬಿದ್ದು ಸಾವು, ಕೊಳವೆ ಬಾವಿಗೆ ಬಿದ್ದು ಮಗು ಸಾವು ಇಂತಹ ಸುದ್ದಿಗಳನ್ನು ದಿನ ಬೆಳಗಾದರೆ ನಾವು ಪತ್ರಿಕೆಯಲ್ಲಿ, ಟಿವಿ ಮಾಧ್ಯಮದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಮಕ್ಕಳ ಈ ಸಾವಿಗೆ ಮೊದಲು ಹೊಣೆ ಮಾಡುವುದು ಪೋಷಕರ ನಿರ್ಲಕ್ಷ್ಯತನ. ಮಕ್ಕಳಿಗೆ ಜನ್ಮ ಕೊಡುವುದು ಮಾತ್ರ ಪೋಷಕರ ಕರ್ತವ್ಯವಾಗುವುದಿಲ್ಲ. ಜೊತೆಗೆ ಅವರನ್ನು ಕಾಳಜಿಯಿಂದ ನೋಡಿಕೊಳ್ಳುವುದು ಕೂಡ ಅವರ ಕರ್ತವ್ಯವಾಗಿರುತ್ತದೆ. ಆದರೆ ಕೆಲವು ಪೋಷಕರು ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದ ಜೀವಮಾನವಿಡೀ ಪಶ್ಚಾತ್ತಾಪ ಪಡುವ ಹಾಗೇ ಆಗುತ್ತದೆ. ಇಂತಹದೊಂದು ಘಟನೆ ಇದೀಗ ಗುಜರಾತ್‌ನಲ್ಲಿ ನಡೆದಿದೆ. ಕಟ್ಟಡದ 7ನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಎರಡು ವರ್ಷದ ಮಗು (Baby Death) ಸಾವನಪ್ಪಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದೆ.
ಮೃತ ಮಗುವಿನ ತಾಯಿ ಮತ್ತು ಚಿಕ್ಕಮ್ಮ ಆ ಪ್ರದೇಶದ ಮನೆಗಳಲ್ಲಿ ಮನೆಗೆಲಸ ಮಾಡಿ ಜೀವನ ನಡೆಸುತ್ತಿದ್ದರು. ಪ್ರತಿದಿನ ಅವರು ತಮ್ಮ ಜೊತೆ ಮಗುವನ್ನು ಕರೆದೊಯ್ಯುತ್ತಿದ್ದರು. ಅಂದು ಕೂಡ ಮಗುವಿನ ಜೊತೆ ತಾಯಿ ಮನೆಗೆಲಸಕ್ಕೆ ಹೋಗಿದ್ದಳು. ತಾಯಿ ಬಿ-ಬ್ಲಾಕ್ ನ ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಗುವಿನ ಚಿಕ್ಕಮ್ಮ ಏಳನೇ ಮಹಡಿಗೆ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಅವಳು ಕೆಲಸದಲ್ಲಿ ನಿರತಳಾಗಿದ್ದಾಗ ಮಗು ಬಾಲ್ಕನಿಯ ಗ್ರಿಲ್ ಬಳಿ ಆಟವಾಡುತ್ತಿತ್ತು. ಆಗ ಮಗು ಗ್ರಿಲ್ ಮೂಲಕ ನುಸುಳಿ ಅದರ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ. ಗ್ರಿಲ್ ಅಗಲವಾಗಿರುವುದರಿಂದ ಮಗು ಸುಲಭವಾಗಿ ಅದರಲ್ಲಿ ನುಸುಳಿ ಕೆಳಕ್ಕೆ ಬಿದ್ದಿದೆ.
માતા-પિતા ધ્યાન રાખજો! સુરતના પાલમાં સાતમાં માળેથી પડતા 2 વર્ષિય બાળકનું મોત, ભયાનક CCTV ફૂટેજ આવ્યા સામે #Surat #Gujarat #BreakingNews #News #CCTV pic.twitter.com/y1sngVSWYT
— Zee 24 Kalak (@Zee24Kalak) June 12, 2024
ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಘಟನೆಯ ಬಳಿಕ ಪಾಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದ್ದಾರೆ. ಹಾಗೂ ಇಂತಹ ಘಟನೆ ಮತ್ತೆ ಆಗದಂತೆ ತಡೆಯಲು ಈ ಗ್ರಿಲ್‌ಗಳನ್ನು ಸರಿಯಾಗಿ ಮರುವಿನ್ಯಾಸ ಮಾಡುವಂತೆ ಸೊಸೈಟಿ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: Yogi Adityanath: ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್! ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಯೋಗಿ ವಾರ್ನಿಂಗ್!
ಮೃತ ಮಗುವಿನ ಕುಟುಂಬ ವರಾಚಾ ಪ್ರದೇಶದಲ್ಲಿ ನೆಲೆಸಿತ್ತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.