Site icon Vistara News

Bajaj Freedom 125 CNG : ಬಜಾಜ್​ ಕಂಪನಿಯ ಸಿಎನ್​ಜಿ ಬೈಕ್​ ಬಿಡುಗಡೆ; ಕೆ.ಜಿಗೆ 102 ಕಿಲೋ ಮೀಟರ್​​ ಮೈಲೇಜ್​

Bajaj Freedom 125

ಬೆಂಗಳೂರು: ಬಜಾಜ್ ಕಂಪನಿಯ ಬಹುನಿರೀಕ್ಷಿತ ಫ್ರೀಡಂ 125 ಬೈಕ್ (Bajaj Freedom 125 CNG) ಶುಕ್ರವಾರ (ಜುಲೈ 5ರಂದು) ಬಿಡುಗಡೆಗೊಂಡಿದೆ. ಇದು ವಿಶ್ವದ ಮೊದಲ ಸಿಎನ್ ಜಿ ಬೈಕ್ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಮೈಲೇಜ್​ಗೆ ಬೇಡಿಕೆ ಇರುವ ಭಾರತದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಲು ಕಂಪನಿ ಮುಂದಾಗಿದೆ. ಇದರ ಬೆಲೆಗಳು ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ 95,000 ರೂಪಾಯಿಂದ ಪ್ರಾರಂಭವಾಗುತ್ತವೆ. ರೇಂಜ್ ಹಾಗೂ ವೇರಿಯೆಂಟ್ ಹಾಗೂ ಬಣ್ಣಗಳ​ ಪ್ರಕಾರ ಗರಿಷ್ಠ ರೂ.1.10 ಲಕ್ಷಗಳವರೆಗೆ ಬೆಲೆ ನಿಗದಿ ಮಾಡಲಾಗಿದೆ.

ಫ್ರೀಡಂ ಬೈಕ್​ 125 ಸಿಸಿ ಹಾರಿಜಾಂಟಲ್​ ಮೌಂಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ 8,000 ಆರ್ ಪಿಎಂನಲ್ಲಿ 9.5 ಬಿಹೆಚ್ ಪಿ ಪವರ್ ಮತ್ತು 6,000 ಆರ್ ಪಿಎಂನಲ್ಲಿ 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೋಟರ್ ಸ್ವಿಚ್ ಬದಲಾಯಿಸುವ ಮೂಲಕ ಸಿಎನ್ ಜಿ ಅಥವಾ ಪೆಟ್ರೋಲ್ ಆಯ್ಕೆಯೊಂದಿಗೆ ಸವಾರಿ ಮಾಡಬಹುದು. ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 2 ಲೀಟರ್ ಆಗಿದ್ದರೆ ಸಿಎನ್ ಜಿ 2 ಕೆ.ಜಿ ತುಂಬಿಸಬಹುದು. ಆದರೆ, ಸಿಎನ್​​ಜಿ ಟ್ಯಾಂಕ್ ೧8 ಕೆ.ಜಿ ತೂಕವಿರುತ್ತದೆ. ಕಂಪನಿಯು ಸಿಎನ್ ಜಿಯಲ್ಲಿ ಪ್ರತಿ ಕೆ.ಜಿ.ಗೆ 102 ಕಿ.ಮೀ ಮೈಲೇಜ್ ಮತ್ತು ಪೆಟ್ರೋಲ್​​ನಲ್ಲಿ 65 ಕಿ.ಮೀ ಮೈಲೇಜ್​ ನೀಡುತ್ತದೆ.

ಸಿಎನ್ ಜಿ ಟ್ಯಾಂಕ್ ಅನ್ನು ಟ್ರೆಲ್ಲಿಸ್ ಫ್ರೇಮ್ ನ ಸಹಾಯದಿಂದ ತಯಾರಿಸಲಅಗಿದೆ. ಇದು ಸಿಲಿಂಡರ್​​ನ ರಕ್ಷಣಾ ಪಂಜರವಾಗಿ ಕಾರ್ಯನಿರ್ವಹಿಸುತ್ತದೆ. 147 ಕೆಜಿ ತೂಕವನ್ನು ಹೊಂದಿರುವ ಫ್ರೀಡಂ 125 ಬೈಕ್​​ ಸಿಟಿ 125ಎಕ್ಸ್ ಗಿಂತ 16 ಕೆಜಿ ಭಾರ. ಇದು 785 ಎಂಎಂ ಉದ್ದದ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ. ಇದು ಬಜಾಜ್ ತನ್ನ ವಿಭಾಗದಲ್ಲಿ ಅತಿ ಉದ್ದದ ಸೀಟ್ ಎಂದು ಹೇಳಿಕೊಂಡಿದೆ. ಈ ಸೀಟ್ 825 ಎಂಎಂ ಎತ್ತರವಿದ್ದು, ಸಿಟಿ 125ಎಕ್ಸ್ ಗಿಂತ 15 ಎಂಎಂ ಹೆಚ್ಚಾಗಿದೆ. ಸಸ್ಪೆಂಷನ್ ಸಿಸ್ಟಂಗಳನ್ನು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಲಿಂಕ್ಡ್ ಮೊನೊಶಾಕ್ ಇದೆ.

ಹೇಗಿದೆ ನೋಟ?

ನೋಟದ ಬಗ್ಗೆ ಹೇಳುವುದಾದರೆ, ಬಜಾಜ್ ಫ್ರೀಡಂ 125 ರಲ್ಲಿ ದೃಢವಾದ ವಿನ್ಯಾಸವನ್ನು ಅನುಸರಿಸಲಾಗಿದೆ. ಇದು ಪೂರ್ಣ ಪ್ರಮಾಣದ ಎಲ್ಇಡಿ ಹೆಡ್ ಲೈಟ್ ಮತ್ತು ಟೈಲ್-ಲೈಟ್ ಹೊಂದಿದ್ದರೆ, ಹ್ಯಾಲೋಜೆನ್ ಇಂಡಿಕೇಟರ್​ಗಳಿವೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೊನೊಕ್ರೋಮ್ ಎಲ್​​ಸಿಡಿ ಡಿಸ್​ಪ್ಲೇ ಹೊಂದಿದೆ. ಮೊಬೈಲ್​ ಬ್ಲೂಟೂತ್ ಸಂಪರ್ಕ ಸಾಧಿಸಹುದು. ಫ್ಯೂಯಲ್ ಟ್ಯಾಂಕ್ ಗಳು ಮತ್ತು ಏರ್ ಫಿಲ್ಟರ್ ಎರಡನ್ನೂ ದೊಡ್ಡ ಫ್ಲಾಪ್ ಮೂಲಕ ನೀಡಲಾಗಿದೆ.

ಬ್ರೇಕಿಂಗ್​ ವ್ಯವಸ್ಥೆ

ಫ್ರೀಡಂ 125 ಬೈಕ್, ಡಿಸ್ಕ್ ಎಲ್ಇಡಿ, ಡ್ರಮ್ ಎಲ್ಇಡಿ ಮತ್ತು ಡ್ರಮ್ ಎಂಬ ಮೂರು ವೇರಿಯೆಂಟ್​​ಗಳಲ್ಲಿ ಲಭ್ಯವಿದೆ. ಈ ಬೈಕ್ ಒಟ್ಟು ಏಳು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಅವುಗಳನ್ನು ವೇರಿಯೆಂಟ್​ಗಳ ಪ್ರಕಾರ ವಿಂಗಡಿಸಲಾಗಿದೆ. ಎಲ್ಲಾ ಡೀಲರ್ ಶಿಪ್ ಗಳಲ್ಲಿ ಹಾಗೂ ಬಜಾಜ್ ವೆಬ್ ಸೈಟ್ ನಲ್ಲಿ ಬುಕಿಂಗ್ ಆರಂಭವಾಗಿದೆ.

ಈ ಬೈಕ್ ಉದ್ಯಮದ ಮಾನದಂಡಗಳು ಮತ್ತು ಬಜಾಜ್ ಕಂಪನಿಯ ಆಂತರಿಕ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲಾಗಿದ್ದು 11 ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಕಂಪನಿಯು ಫ್ರೀಡಂ 125 ಅನ್ನು ಈಜಿಪ್ಟ್, ಟಾಂಜಾನಿಯಾ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.

Exit mobile version