Site icon Vistara News

Viral Video : ಒಂದೇ ಓವರ್​​ನಲ್ಲಿ ಹಲವು ಬೌಲಿಂಗ್ ಆ್ಯಕ್ಷನ್; ಬಾಲಾಜಿ ಸ್ಪೆಷಲ್​ ವಿಡಿಯೊ ಇಲ್ಲಿದೆ

Bowling Action

ಬೆಂಗಳೂರು: ಟಿ20 ಕ್ರಿಕೆಟ್​ನ ಜನಪ್ರಿಯತೆಯೊಂದಿಗೆ ಬೌಲರ್​ಗಳು ಆಟದ ಕಿರು ಸ್ವರೂಪದಲ್ಲಿ ಯಶಸ್ವಿಯಾಗಲು ನವ ನವೀನ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ‘ಬ್ಯಾಟ್ಸ್​ಮನ್​ ಸ್ನೇಹಿ’ ಕ್ರಿಕೆಟ್​ ಸ್ವರೂಪದಲ್ಲಿ ಬ್ಯಾಟರ್​ಗಳು ಎಡ, ಬಲ ನೋಡದೇ ಬೌಲರ್​ಗಳನ್ನು ದಂಡಿಸುತ್ತಾರೆ. ಆದ್ದರಿಂದ ನಿರ್ದಯ ಬ್ಯಾಟಿಂಗ್ ಪ್ರದರ್ಶನವನ್ನು ಹಿಮ್ಮೆಟ್ಟಿಸಲು ಕೆಲವು ಬೌಲರ್​ಗಳು ಬೇರೆ ಬೇರೆ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಾರೆ. ಬ್ಯಾಟರ್​ಗಳನ್ನು ಗೊಂದಲಕ್ಕೆ ಬೀಳಿಸಲು ಯತ್ನಿಸುತ್ತಾರೆ. ಕೆಲವರು ಬ್ಯಾಟರ್​ಗಳ ಮೇಲೆ ವಿಭಿನ್ನ ಬೌಲಿಂಗ್ ತಂತ್ರಗಳನ್ನು ಪ್ರಯೋಗಿಸಿದರೆ. ಕೆಲವರು ನವೀನ ಬೌಲಿಂಗ್​ ಆ್ಯಕ್ಷನ್​ (Bowling Action) ಮೂಲಕ ಹಾದಿ ತಪ್ಪಿಸುತ್ತಾರೆ.

ಬಾಲಾಜಿ ಕೆ ಎಂಬ ಬೌಲರ್ ತನ್ನ ವಿಶಿಷ್ಟ ಬೌಲಿಂಗ್ ಶೈಲಿಯಿಂದಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಎಸ್ಎಸ್ ರಾಜನ್ ಟಿ 20 ಪಂದ್ಯಾವಳಿಯಲ್ಲಿ ಲೆಗ್ ಸ್ಪಿನ್ನರ್ ಹಲವು ರೀತಿಯಲ್ಲಿ ಬೌಲಿಂಗ್ ಮಾಡುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಲ್ಲಿ ಅವರು ತಮ್ಮ ಹಲವಾರು ವ್ಯತ್ಯಾಸಗಳೊಂದಿಗೆ ಬ್ಯಾಟರ್​ಗಳನ್ನು ಯಾಮಾರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಚೆಂಡನ್ನು ಎಸೆಯುವ ಮೊದಲು ಅವರ ವರ್ತನೆಗಳು ಅವರನ್ನು ಇತರ ಬೌಲರ್​ಗಿಂತ ಪ್ರತ್ಯೇಕವಾಗಿದೆ. ವಿಶೇಷವೆಂದರೆ, ಬಾಲಾಜಿ ತಮ್ಮ ಓವರ್​ನ ಎಲ್ಲಾ ಆರು ಎಸೆತಗಳನ್ನು ವಿಭಿನ್ನ ಬೌಲಿಂಗ್ ಕ್ರಮದೊಂದಿಗೆ ಎಸೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ, ಬ್ಯಾಟರ್​ ಗಮನವನ್ನು ಬೇರೆಡೆಗೆ ಸೆಳೆಯಲು ಅವನು ತನ್ನ ಕೈಗಳನ್ನು ಎಲ್ಲ ದಿಕ್ಕುಗಳಲ್ಲಿ ತಿರುಗಿಸುತ್ತಾರೆ. ಇತರ ಸಂದರ್ಭಗಳಲ್ಲಿ ಅವನು ತನ್ನ ಸ್ಕೂಟರ್ ಕಿಮ್ ಮಾಡಿದಂತೆ ಓಟ ಪ್ರಾರಂಭಿಸುತ್ತಾರೆ.

ಒಂದು ಸಂದರ್ಭದಲ್ಲಿ, ಅವರು ಬೌಲಿಂಗ್ ಕ್ರೀಸ್ ತಲುಪಲು ಬಸ್​ನ ಸ್ಟೇರಿಂಗ್ ಥರ ಕೈಯನ್ನು ತಿರುಗಿಸುತ್ತಾರೆ. ಮತ್ತೊಂದು ಬಾರಿ ಕುಂಟುತ್ತಾ ಸಾಗಿ ಬೌಲಿಂಗ್ ಮಾಡುತ್ತಾರೆ. ಬಾಲಾಜಿ ಅವರ ಚಮತ್ಕಾರಿ ಬೌಲಿಂಗ್ ಕ್ರಮಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿವೆ. ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ತಮ್ಮ ಆಕ್ಷನ್ ಹೊರತಾಗಿ, ಲೆಗ್ ಸ್ಪಿನ್ನರ್ ಕೇರಂ ಚೆಂಡುಗಳನ್ನು ಎಸೆಯುವ ಸಾಮರ್ಥ್ಯದ ಮೂಲಕ ಭಾರತದ ಲೆಜೆಂಡರಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಹೋಲಿಕೆಯನ್ನು ಪಡೆದುಕೊಂಡಿದ್ದಾರೆ.

ಒಂದು ವಿಕೆಟ್ ಪಡೆದ ಬಾಲಾಜಿ

ಎಸ್.ಎಸ್.ರಾಜನ್ ಟಿ 20 ಟ್ರೋಫಿಯಲ್ಲಿ ತಿರುವರೂರು ಪರ ಆಡಿದ ಬಾಲಾಜಿ ಮೂರು ಓವರ್​ಗಳಲ್ಲಿ 19 ರನ್​ ಗೆ ಒಂದು ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ, ಪಂದ್ಯಾವಳಿಯಲ್ಲಿ ತಿರುವರೂರ್ ತಂಡಕ್ಕೆ ಇದು ಏಕೈಕ ಗೆಲುವಾಗಿದೆ. ಆ ತಂಡ ನಾಲ್ಕು ಪಂದ್ಯಗಳಿಂದ ಒಂದು ಜಯದೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಅವರು 1/7 (1 ಓವರ್), 0/38 (4 ಓವರ್​ಗಳು ) 0/6 (2 ಓವರ್​ಗಳು) ಅಂಕಿಅಂಶಗಳನ್ನು ದಾಖಲಿಸಿದ್ದಾರೆ.

Exit mobile version