ಬೆಂಗಳೂರು : ಮಹಾನಗರ ಬೆಂಗಳೂರು ಹಾಗೂ ಗ್ರಾಮಾಂತರ ಪ್ರದೇಶದ ಕೆಲವು ವ್ಯಾಪ್ತಿಯನ್ನು ಒಳಗೊಂಡಿರುವ ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ (9,86,049 ಮತಗಳು) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಪಿ. ರಾಜೀವ್ ಗೌಡ (7,26,573 ಮತಗಳು) ವಿರುದ್ಧ 2,59,476 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಶೋಭಾ ಕರಂದ್ಲಾಜೆ (ಬಿಜೆಪಿ)- 9,86,049 ಮತಗಳು
ರಾಜೀವ್ಗೌಡ (ಕಾಂಗ್ರೆಸ್)- 7,26,573 ಮತಗಳು
ಗೆಲುವಿನ ಅಂತರ- 2,59,476
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಭಾರತೀಯ ಜನತಾ ಪಾರ್ಟಿ ಪಕ್ಷದ ಕೃಷ್ಣ ಬೈರೇಗೌಡ ಅವರನ್ನು 1,47,518 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.52.84ರಷ್ಟು ಮತಗಳನ್ನು ಪಡೆದಿತ್ತು.
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಕಾಂಗ್ರೆಸ್ನ ಸಿ.ನಾರಾಯಣ ಸ್ವಾಮಿ ಅವರನ್ನು 2,29,764 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.52.95ರಷ್ಟು ಮತಗಳನ್ನು ಗಳಿಸಿತ್ತು.
2009ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಡಿ .ಬಿ.ಚಂದ್ರೇಗೌಡ ಅವರು ಕಾಂಗ್ರೆಸ್ನ ಸಿ.ಕೆ.ಜಾಫರ್ ಷರೀಫ್ ಅವರನ್ನು 59,665 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.45.21ರಷ್ಟು ಮತಗಳನ್ನು ಪಡೆದಿತ್ತು.
ಕ್ಷೇತ್ರದ ವಿವರ
1962ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗುವ ಮೊದಲು ಬೆಂಗಳೂರು ಉತ್ತರ ಕ್ಷೇತ್ರ ಬೆಂಗಳೂರು ನಗರ ಕ್ಷೇತ್ರದ ವ್ಯಾಪ್ತಿಯಲ್ಲಿದೆ. 1957 ರಿಂದ 1962ರವರೆಗೆ ಬೆಂಗಳೂರು ಉತ್ತರ ಬೆಂಗಳೂರು ನಗರ ಕ್ಷೇತ್ರದ ಭಾಗವಾಗಿತ್ತು. 1951ರಲ್ಲಿ ಈ ಕ್ಷೇತ್ರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೇಶವ್ ಲಿಂಗಾರ್ ಗೆದ್ದರು. ಅಂದಿನಿಂದ 1996 ರವರೆಗೆ 45 ವರ್ಷಗಳ ಕಾಲ, ಕಾಂಗ್ರೆಸ್ ಪಕ್ಷ ಸತತವಾಗಿ ತನ್ನದಾಗಿಸಿಕೊಂಡಿತ್ತು. 1996ರಲ್ಲಿ ಜನತಾದಳದ ಸಿ. ನಾರಾಯಣಸ್ವಾಮಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ನಂತರ, ಬಿಜೆಪಿ ಇಲ್ಲಿ ಗೆಲ್ಲಲು ಪ್ರಾರಂಭಿಸಿತು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಈವರೆಗೆ ನಡೆದ 17 ಚುನಾವಣೆಗಳಲ್ಲಿ ಕಾಂಗ್ರೆಸ್ 12 ಬಾರಿ ಗೆಲುವು ಸಾಧಿಸಿದೆ. ಆದಾಗ್ಯೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಲ್ಲಿ ಬಿಜೆಪಿ ಪ್ರಭಾವ ಹೆಚ್ಚಿದೆ.
ಈ ಸ್ಥಾನದಲ್ಲಿ ಜನತಾದಳ ಕೂಡ ಒಮ್ಮೆ ಗೆದ್ದಿದೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ಈ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 1977-96 ರ ನಡುವೆ ಸತತ ಐದು ಗೆಲುವುಗಳು ಸೇರಿದಂತೆ ಏಳು ಬಾರಿ ಗೆದ್ದಿದ್ದರು. ಈ ಸ್ಥಾನವು ರಾಜ್ಯದ ಅತಿದೊಡ್ಡ ಮತ್ತು ದೇಶದ ಮೂರನೇ ಅತಿದೊಡ್ಡ ಲೋಕಸಭಾ ಸ್ಥಾನವಾಗಿದೆ.
ಕಣದಲ್ಲಿ ಇರುವವರು ಯಾರು?
2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರರಲ್ಲಿ ಸುಮಾರು 92% ರಷ್ಟಿದ್ದಾರೆ. ಕ್ಷೇತ್ರದ ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 78% ರಷ್ಟಿತ್ತು. ಎಸ್ಸಿ ಮತದಾರರು ಮತದಾರರಲ್ಲಿ ಸುಮಾರು 11% ರಷ್ಟಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿ 5 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 3 ಸ್ಥಾನಗಳನ್ನು ಹೊಂದಿದೆ.