ಢಾಕಾ: ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ನಡೆದ ಪ್ರತಭಟನೆ ವೇಳೆ ವ್ಯಕ್ತಿಯೊಬ್ಬನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ನ್ಯಾಯಾಲಯವು ಮಾಜಿ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಮತ್ತು ಅವರ ಆಡಳಿತದ ಆರು ಉನ್ನತ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. 76 ವರ್ಷದ ಹಸೀನಾ ಅವರು ಒಂದು ವಾರದ ಹಿಂದೆ ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಬಂದಿದ್ದರು. ದೇಶದಲ್ಲಿ ಉಂಟಾಗಿದ್ದ ಅಶಾಂತಿಯಿಂದ ತಮಗೆ ಆಗಬಹುದಾಗಿದ್ದ ಅಪಾಯವನ್ನು ಅರಿತು ಅವರು ಪಲಾಯನ ಮಾಡಿದ್ದರು.
🚨 JUST IN: A murder case has been filed accusing former prime minister Sheikh Hasina and six others, including the AL general secretary, former home minister and the former police IG. #ReformBangladesh pic.twitter.com/jDcbFVonAA
— Saif Ahmed (@saifahmed75) August 13, 2024
ಅದಕ್ಕಿಂತ ಮೊದಲು ಅವರ ವಿರುದ್ಧ ಪ್ರತಿಭಟನೆ ಹಾಗೂ ಕ್ಷೋಭೆಯಲ್ಲಿ 450ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದರು. ಶೇಖ್ ಹಸೀನಾ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲ ಮಾಮುನ್ ಮಿಯಾ ಹೇಳಿದ್ದಾರೆ.
ಬಾಂಗ್ಲಾದೇಶದ ಕಾನೂನಿನ ಅಡಿಯಲ್ಲಿ ಕ್ರಿಮಿನಲ್ ತನಿಖೆಯಡಿ “ಆರೋಪಿಗಳ ವಿರುದ್ಧದ ಕೊಲೆ ಪ್ರಕರಣವನ್ನು” ಸ್ವೀಕರಿಸುವಂತೆ ಢಾಕಾ ಮೆಟ್ರೋಪಾಲಿಟನ್ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ ಎಂದು ಅವರು ವಿವರಿಸಿದ್ದಾರೆ. ಮಿಯಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹಸೀನಾ ಅವರ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಮತ್ತು ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್ ಅವರ ಹೆಸರೂ ಇದೆ.
ಹಸೀನಾ ಅವರ ಸರ್ಕಾರ ನೇಮಿಸಿದ ನಾಲ್ವರು ಉನ್ನತ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಸಹ ಅದು ಪರಿಗಣಿಸಿದೆ. ಅವರೀಗ ತಮ್ಮ ಹುದ್ದೆಗಳನ್ನು ತೊರೆದಿದ್ದಾರೆ. ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕುತ್ತಿದ್ದ ಪೊಲೀಸರಿಂದ ಜುಲೈ 19 ರಂದು ಗುಂಡಿಕ್ಕಿ ಕೊಲ್ಲಲ್ಪಟ್ಟ ಕಿರಾಣಿ ಅಂಗಡಿ ಮಾಲೀಕರಾದ ಮಹಿಳೆಯೊಬ್ಬರ ಸಾವಿಗೆ ಏಳು ಮಂದಿ ಕಾರಣ ಎಂದು ಈ ಪ್ರಕರಣದಲ್ಲಿ ಆರೋಪಿಸಲಾಗಿದೆ.
ಗುಂಡಿನ ದಾಳಿ ನಡೆದ ಪ್ರದೇಶದ ನಿವಾಸಿ ಮತ್ತು ಸಂತ್ರಸ್ತೆಯ ಹಿತೈಷಿ ಅಮೀರ್ ಹಮ್ಜಾ ಶತಿಲ್ ಅವರು ಈ ಪ್ರಕರಣ ದಾಖಲಿಸಿದ್ದಾರೆ.
ನಾವು ಇದನ್ನು ಅಲ್ಲಗಳೆಯುವುದಿಲ್ಲ’
ಹಸೀನಾ ಅವರ ಸರ್ಕಾರವು ಸಾವಿರಾರು ರಾಜಕೀಯ ವಿರೋಧಿಗಳನ್ನು ಕಾನೂನುಬಾಹಿರವಾಗಿ ಹತ್ಯೆ ಮಾಡುವುದು ಸೇರಿದಂತೆ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಎದುರಿಸುತ್ತಿದೆ. ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ಅವರು ಪ್ರಜಾಪ್ರಭುತ್ವ ಸುಧಾರಣೆಗಳನ್ನು ಮುನ್ನಡೆಸುವ ದೊಡ್ಡ ಸವಾಲನ್ನು ಎದುರಿಸುತ್ತಿದ್ದು, ಅವರು ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ.
ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂದೂಗಳ ಪರ ಸೋಶಿಯಲ್ ಮೀಡಿಯಾ ಅಭಿಯಾನ; All eyes on hindus ಭಾರೀ ಟ್ರೆಂಡ್!
ಮೈಕ್ರೋಫೈನಾನ್ಸ್ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ 84 ವರ್ಷದ ಯೂನುಸ್ ಅವರು 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪುರಸ್ಕೃತರಾಗಿದ್ದಾರೆ. ಲಕ್ಷಾಂತರ ಬಾಂಗ್ಲಾದೇಶಿಗಳನ್ನು ಬಡತನದಿಂದ ಹೊರಬರಲು ಸಹಾಯ ಮಾಡಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಸೀನಾ ಅವರ ಅವಾಮಿ ಲೀಗ್ ಅನ್ನು ನಿಷೇಧಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಹುಸೇನ್ ಸೋಮವಾರ ಹೇಳಿದ್ದಾರೆ. ಪಕ್ಷವು ಬಾಂಗ್ಲಾದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ನಾವು ಇದನ್ನು ನಿರಾಕರಿಸುವುದಿಲ್ಲ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.