ಬೆಂಗಳೂರು: ಮಹಾನಗರದಲ್ಲಿ ಎರಡು ದಿನಗಳ ಹಿಂದೆ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ ಪ್ರಕರಣಕ್ಕೆ (Bengaluru Rape Attempt case) ಹೊಸ ತಿರುವು ಸಿಕ್ಕಿದ್ದು, ಸಂತ್ರಸ್ತೆಯ ವಿರುದ್ದವೇ ದೂರೊಂದು ದಾಖಲಾಗಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಆಕೆಯಿಂದ ಪೊಲೀಸರು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೇಳಿಕೆ ಪಡೆದುಕೊಳ್ಳಲಿದ್ದಾರೆ.
ಎಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಇದಾಗಿದೆ. ಪಾನಮತ್ತಳಾಗಿದ್ದ ಯುವತಿ ತನ್ನ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾಳೆ ಎಂಬುದಾಗಿ ಆಟೋ ಡ್ರೈವರ್ ದೂರು ನೀಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಪಬ್‌ನಲ್ಲಿ ಪಾರ್ಟಿ ಮಾಡಿದ್ದ ಯುವತಿ ಅಪರಿಚಿತ ವ್ಯಕ್ತಿಯ ಬೈಕ್‌ನಲ್ಲಿ ತೆರಳುವ ಮುನ್ನ ಈ ಘಟನೆ ನಡೆದಿದೆ. ಅಂದು ರಾತ್ರಿ ಕೊರಮಂಗಲಕ್ಕೆ ಗೆಳೆಯನ ಜೊತೆ ಬಂದಿದ್ದ ಸಂತ್ರಸ್ತೆ ಊಟ ಮುಗಿಸಿಕೊಂಡು ಗೆಳೆಯನ ಜೊತೆ ಕಾರ್ ವಾಪಸಾಗುತ್ತಿದ್ದಳು. ಈ ವೇಳೆ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗ್ತಿದ್ದಳು. ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ ಆಕೆ ಚಾಲನೆ ಮಾಡುತ್ತಿದ್ದ ಕಾರು ಸರಣಿ ಅಫಘಾತಕ್ಕೆ ಒಳಗಾಗಿದೆ. ಮೂರು ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಎರಡು ಆಟೋ ಹಾಗೂ ಒಂದು ಬೈಕ್ ಗೆ ಡಿಕ್ಕಿ ಹೊಡೆದು ಫೋರಂ ಮಾಲ್ ಕಡೆ ಆಕೆ ಸಾಗಿದ್ದಳು. ಆ ಬಗ್ಗೆ ಇದೀಗ ಪ್ರಕರಣ ದಾಖಲಾಗಿದೆ. ಅಜಾಗರೂಕತೆ ಮತ್ತು ಅತಿ ವೇಗದ ಚಾಲನೆ ಮಾಡಿದ್ದ ಆರೋಪದಲ್ಲಿ ಕೇಸ್ ದಾಖಲಾಗಿದೆ.
ಕಾರನ್ನು ಹಾನಿಗೊಳಲಾದ ಆಟೊ ಚಾಲಕರು ಬೆನ್ನಟ್ಟಿ ಪ್ರಶ್ನಿಸಿದ್ದರು. ಅವರು ಅಡ್ಡಗಟ್ಟುತ್ತಿದ್ದಂತೆ ಕಾರನ್ನು ಬಿಟ್ಟು ಆಕೆ ಅಲ್ಲಿಂದ ತೆರಳಿದ್ದಲು. ಆಕೆಯ ಸ್ನೇಹಿತ ಚಾಲಕರ ಜೊತೆ ವಾದ ಮಾಡುವಾಗ ಅಲ್ಲಿಂದ ಯುವತಿ ಪರಾರಿಯಾಗಿದ್ದಳು. ಪಬ್‌ನಲ್ಲಿ ಮರೆತು ಬಂದಿದ್ದು ಅದನ್ನು ತರಲು ಹೋಗಿದ್ದಳು ಎನ್ನಲಾಗಿದೆ. ಅಷ್ಟರಲ್ಲಿ ಆಕೆಯ ಸ್ನೇಹಿತ ಕಾರು ಬಿಟ್ಟು ಹುಡುಕಲು ಹೊರಟಿದ್ದ. ಈ ವೇಳೆ ಇಬ್ಬರೂ ಒಬ್ಬರಿಗೊಬ್ಬರು ತಪ್ಪಿಸಿಕೊಂಡಿದ್ದಾರೆ. ಬಳಿಕ ಯುವತಿ ಅಪರಿಚಿತ ವ್ಯಕ್ತಿ ಬಳಿ ಡ್ರಾಪ್ ಕೇಳಿದ್ದಳು.
ದಾರಿ ಮಧ್ಯೆ ವೇಳೆ ಯುವತಿಯ ಮೇಲೆ ಅತ್ಯಾಚಾರದ ಯತ್ನ ನಡೆದಿದೆ. ಇದೀಗ ಯುವತಿ ಹಾಗೂ ಆಕೆಯ ಸ್ನೇಹಿತ ಇಬ್ಬರ ವಿರುದ್ಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಾಗರೂಕತೆ ಮತ್ತು ಅತಿಯಾದ ವೇ ಗ ಮತ್ತು ಮದ್ಯಪಾನ ಮಾಡಿ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಆಟೋ ಚಾಲಕ ಅಜಾಜ್ ಎಂಬುವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Student Death : ಮೈಸೂರಿನ ಕಾಲೇಜಿನ ಹಾಸ್ಟೆಲ್‌ನಲ್ಲಿ 17 ವರ್ಷದ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವು
ಅತ್ಯಾಚಾರ ಯತ್ನ ನಡೆದಿದೆ ಎಂದು ಹೇಳಿರುವ ಯುವತಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾಳೆ. ಸಂತ್ರಸ್ತೆ ಚೇತರಿಕೆಯಾದ ಬಳಿಕ ಕೇಸ್ ಸಂಬಂಧ ವಿಚಾರಣೆ ನಡೆಯಲಿದೆ.
ಯುವತಿ ಪ್ರಾಣ ಉಳಿಸಿದ SOS ಬಟನ್
ಎಚ್ಎಸ್‌ಆರ್ ಲೇಔಟ್ ಯುವತಿ ಅತ್ಯಾಚಾರ ಪ್ರಕರಣದಲ್ಲಿ SOS ಬಟನ್ ಯುವತಿ ಪ್ರಾಣ ಉಳಿಸಿದೆ ಎಂಬ ವಿಷಯ ತಿಳಿದುಬಂದಿದೆ. ಮೊಬೈಲ್‌ನಲ್ಲಿ ಸ್ವಿಚ್ ಆಫ್ ಬಟನ್ ಪ್ರೆಸ್ ಮಾಡಿದಾಗ SOS ಆಪ್ಷನ್ ಕಾಣಲಿದೆ. ಅದಕ್ಕೆ ಎಮೆರ್ಜೆನ್ಸಿ ನಂಬರ್ ಆ್ಯಡ್ ಮಾಡಬಹುದು. ಅದನ್ನು ಪ್ರೆಸ್ ಮಾಡಿದಾಗ ಆ್ಯಡ್ ಮಾಡಿದ ನಂಬರ್‌ಗೆ ನಿರಂತರ ಕರೆ ಹಾಗೂ ಲೊಕೆಶನ್ ಶೇರ್ ಆಗುತ್ತೆ.
ಹೀಗಾಗಿ SOS ನಲ್ಲಿ ತಂದೆ ಹಾಗೂ ಸ್ನೇಹಿತೆ ನಂಬರ್ ಅನ್ನು ಆ್ಯಡ್ ಸಂತ್ರಸ್ತ ಯುವತಿ ಮಾಡಿದ್ದಳು. ಹೀಗಾಗಿ ತಕ್ಷಣ ಸ್ನೇಹಿತರಿಗೆ ಕರೆ ಹೋಗಿದೆ. ಲೊಕೇಶನ್ ಆಧರಿಸಿ ಬಂದು ಸ್ನೇಹಿತರು ಯುವತಿಯ ರಕ್ಷಣೆ ಮಾಡಿದ್ದಾರೆ. ಅರೆನಗ್ನ ಸ್ಥಿತಿಯಲ್ಲೇ ಯುವತಿಯನ್ನು ಆರೋಪಿ ಬಿಟ್ಟು ತೆರಳಿದ್ದ. ದೌರ್ಜನ್ಯ ಎಸಗಿದಾಗ ಯುವತಿ ಕೂಡ ಪ್ರತಿರೋಧ ಒಡ್ಡಿದ್ದಳು. ಇದರಿಂದ ಆರೋಪಿ ಹೆದರಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದ. ಸದ್ಯ ಹೆಬ್ಬಗೋಡಿ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರ
ಘಟನೆ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಮಾಹಿತಿ ನೀಡಿದ್ದಾರೆ. ಶನಿವಾರ ಮಧ್ಯರಾತ್ರಿ 1:30ರ ಸಂಧರ್ಭದಲ್ಲಿ ಈ ಘಟನೆ ನಡೆದಿದೆ. ಅಪರಿಚಿತನ ಜತೆಗೆ ಯುವತಿ ಡ್ರಾಪ್ ತೆಗೆದುಕೊಂಡಿದ್ದಾಳೆ. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿ ಅತ್ಯಾಚಾರವೆಸಗಿದ್ದಾನೆ. ಇದು ಗೆಟ್ ಟು ಗೆದರ್ ಪಾರ್ಟಿ ಮುಗಿಸಿ ಅಲ್ಲಿಂದ ವಾಪಾಸ್ ಬರುವಾಗ ಘಟನೆ ನಡೆದಿದೆ. ಇದು ಗ್ಯಾಂಗ್ ರೇಪ್ ಅಲ್ಲ, ಡ್ರಾಪ್ ತೆಗೆದುಕೊಂಡವನಿಂದ ಈ ಕೃ