Site icon Vistara News

Rajnath Singh : ಭಾರತದ ರಾಜಕೀಯದ ಬೆಸ್ಟ್​ ಫಿನಿಶರ್​! ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ ರಾಜ್​ನಾಥ್​ ಸಿಂಗ್​

Rajnath Singh

ಭೋಪಾಲ್: ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ (Mahedra Singh Doni) ಬೆಸ್ಟ್​ ಫಿನಿಶರ್​. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭಾರತೀಯ ರಾಜಕೀಯದ ಅತ್ಯುತ್ತಮ ಫಿನಿಶರ್ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ (Rajnath Singh) ಶನಿವಾರ ಲೇವಡಿ ಮಾಡಿದ್ದಾರೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ, ಭ್ರಷ್ಟಾಚಾರದೊಂದಿಗೆ ಕಾಂಗ್ರೆಸ್ ಅವಿನಾಭಾವ ನಂಟು ಹೊಂದಿದೆ ಎಂದು ಆರೋಪಿಸಿದರು.

ಒಂದು ಕಾಲದಲ್ಲಿ ಭಾರತೀಯ ರಾಜಕೀಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತ್ತು. ಆದರೆ ಈಗ ಅದು ಎರಡು ಅಥವಾ ಮೂರು ಸಣ್ಣ ರಾಜ್ಯಗಳಲ್ಲಿ ಮಾತ್ರ ಸರ್ಕಾರವನ್ನು ಹೊಂದಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಯಾಕೆ ಸೋಲುತ್ತಿದೆ ಎಂಬುದೇ ಆಶ್ಚರ್ಯಕರ. ಆದರೂ ನನಗೆ ಒಂದು ವಿಷಯ ಗೊತ್ತಾಗಿದೆ. ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಿನಿಶರ್ ಯಾರು? ಮಹೇಂದ್ರ ಸಿಂಗ್​ ಧೋನಿ. ಹಾಗೆಯೇ ಭಾರತೀಯ ರಾಜಕೀಯದಲ್ಲಿ ಅತ್ಯುತ್ತಮ ಫಿನಿಶರ್ ಯಾರು ಎಂದು ಯಾರಾದರೂ ನನ್ನನ್ನು ಕೇಳಿದರೆ, ಅದು ರಾಹುಲ್ ಗಾಂಧಿ ಎಂದು ನಾನು ಹೇಳುತ್ತೇನೆ. ಈ ಕಾರಣಕ್ಕಾಗಿಯೇ ಹಲವಾರು ನಾಯಕರು ಕಾಂಗ್ರೆಸ್ ತೊರೆದಿದ್ದಾರೆ” ಎಂದು ರಾಜ್​ನಾಥ್​ ಸಿಂಗ್ ಹೇಳಿದರು.

ಈ ಹಿಂದೆ ನಡೆದ ರ್ಯಾಲಿಯಲ್ಲಿ ಸಿಂಗ್ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ಗ್ರ್ಯಾಂಡ್ ಓಲ್ಡ್ ಪಾರ್ಟಿಯನ್ನು ಮುಗಿಸುವವರೆಗೂ ಅವರು ಬಿಡುವುದಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್ ಮತ್ತು ಭ್ರಷ್ಟಾಚಾರವು ಬೇರ್ಪಡಿಸಲಾಗದ ಸಂಬಂಧ ಹೊಂದಿವೆ. ಹೆಚ್ಚಿನ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯಾವುದೇ ಸಚಿವರ ವಿರುದ್ಧ ಅಂತಹ ಯಾವುದೇ ಆರೋಪಗಳನ್ನು ಮಾಡಲಾಗಿಲ್ಲ ಎಂದು ಸಿಂಗ್ ನುಡಿದರು.

ಸಲ್ಮಾನ್ ಖಾನ್ ಅಭಿನಯದ ‘ಮೈನೆ ಪ್ಯಾರ್ ಕಿಯಾ’ ಚಿತ್ರದ ‘ತು ಚಲ್ ಮೇ ಆಯ್’ (ನಾನು ನಿಮ್ಮನ್ನು ಅನುಸರಿಸುತ್ತೇನೆ) ಹಾಡಿನ ಮೂಲಕ ಭ್ರಷ್ಟಾಚಾರದೊಂದಿಗಿನ ಕಾಂಗ್ರೆಸ್ ಸಂಬಂಧವನ್ನು ವಿವರಿಸಬಹುದು ಎಂದು ಸಚಿವರು ಹೇಳಿಕೊಂಡರು.

ಒಂದು ರಾಷ್ಟ್ರ ಒಂದು ಚುನಾವಣೆ

‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಷಯವನ್ನು ಮುಂದಿಟ್ಟ ಸಿಂಗ್, ಇದು ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Yadgiri News: ಕಾಂಗ್ರೆಸ್‌ ಸರ್ಕಾರ ರಾಜ್ಯದ ಅಭಿವೃದ್ಧಿ ಮರೆತಿದೆ: ರಾಜಾ ಅಮರೇಶ್ವರ ನಾಯಕ

ಕಾಂಗ್ರೆಸ್ ಹೇಳುತ್ತಿರುವುದು ಸರಿಯಿಲ್ಲ. ಏಕಕಾಲದಲ್ಲಿ ಚುನಾವಣೆಗಳು ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು. ಐದು ವರ್ಷಗಳಲ್ಲಿ ಎರಡು ಬಾರಿ ಚುನಾವಣೆಗಳು ನಡೆಯಬೇಕು – ಒಮ್ಮೆ ಸ್ಥಳೀಯ ಸಂಸ್ಥೆಗಳಿಗೆ, ನಂತರ ವಿಧಾನಸಭೆಗಳು ಮತ್ತು ಲೋಕಸಭೆಗೆ ಚುನಾವಣೆಗಳು ಎಂದು ರಾಜ್​ನಾಥ್ ಸಿಂಗ್ ಹೇಳಿದರು.

ಕೆಲವು ದೊಡ್ಡ ಹಣಕಾಸು ಸಂಸ್ಥೆಗಳು, 2027 ರ ಆರಂಭದ ವೇಳೆಗೆ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಭವಿಷ್ಯ ನುಡಿಯುತ್ತಿವೆ. ಮೋದಿ ಸರ್ಕಾರ ಈಗಾಗಲೇ ಹತ್ತು ವರ್ಷಗಳ ಹಿಂದೆ 11 ನೇ ಸ್ಥಾನದಲ್ಲಿದ್ದ ದೇಶವನ್ನು ಅಗ್ರ ಐದು ಸ್ಥಾನಗಳಲ್ಲಿ ಇರಿಸಿದೆ ಎಂದು ರಕ್ಷಣಾ ಸಚಿವರು ಹೇಳಿದರು. 2045ರ ವೇಳೆಗೆ ಭಾರತ ಸೂಪರ್ ಪವರ್ ಆಗಲಿದೆ ಎಂದು ಸಿಂಗ್ ಹೇಳಿದರು.

Exit mobile version