Site icon Vistara News

Bigg Boss Kannada : ಬಿಗ್​ ಬಾಸ್​ 10ನೇ ಸೀಸನ್​ನ ಆಕರ್ಷಕ ಪ್ರೋಮೊ ರಿಲೀಸ್, ವಿಡಿಯೊದಲ್ಲಿದೆ ಹೊಸ ಗುಟ್ಟು

BIG BOSS 10

ಬೆಂಗಳೂರು: ಜನಪ್ರಿಯ ಟವಿ ರಿಯಾಲಿಟಿ ಶೋ ಬಿಗ್​ಬಾಸ್​ ಕನ್ನಡದ (Bigg Boss Kannada) ಮತ್ತೊಂದು ಪ್ರೋಮೊ ಬಿಡುಗಡೆಗೊಂಡಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಕಟವಾಗುವ ಮೋಸ್ಟ್​ ಪಾಪ್ಯುಲರ್​ ಕಾರ್ಯಕ್ರಮ ಈ ಬಾರಿ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕೌತುಕ ಮೂಡಿಸಿದೆ. ಈ ಕುತೂಹಲದ ನಡುವೆಯೇ ಕಲರ್ಸ್​ ಕನ್ನಡ ಪ್ರೊಮೊ ಬಿಡುಗಡೆ ಮಾಡಿದೆ. ‘ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ HAPPY ‘BIGG BOSS KANNADA’ ಹತ್ತನೇ ಸೀಸನ್!’ ಎಂದು ಬರೆದು ಸೋಶಿಯಲ್​ ಮೀಡಿಯಾ ಫ್ಲ್ಯಾಟ್​ಫಾರ್ಮ್​ಗಳಲ್ಲಿ ಪೋಸ್ಟ್​ ಹಾಕಿದೆ. ಅಂದಹಾಗೆ ಇದು ಬಿಸ್​ಬಾಸ್​ ಬಿಡುಗಡೆ ಮಾಡುತ್ತಿರುವ ಮತ್ತೊಂದು ವಿಡಿಯೊ . ಸೆಪ್ಟೆಂಬರ್ ಆರಂಭದಲ್ಲಿ ಒಂದು ಪ್ರೋಮೊ ಬಿಡುಗಡೆಗೊಂಡು ಕನ್ನಡಿಗರ ಗಮನ ಸೆಳೆದಿತ್ತು.

ಸೆಪ್ಟೆಂಬರ್​ 14ರಂದು ಸಂಜೆ ಪ್ರೋಮೊ ಪೋಸ್ಟ್​ ಆಗುತ್ತಿದ್ದಂತೆ ಲಕ್ಷಾಂತರ ಕನ್ನಡಿಗರು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸಿದ್ದಾರೆ. ತಾವೆಲ್ಲರೂ ರಿಯಾಲಿಟಿ ಶೋ ಶುರುವಾಗಲಿ ಎಂದು ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಬಿಗ್​ಬಾಸ್ ರಿಯಾಲಿಟಿ ಶೋ ಅನ್ನು ಹಬ್ಬ ಎಂಬುದಾಗಿಯೇ ಪ್ರತಿಬಿಂಬಿಸಲಾಗಿದೆ.

ಹೇಗಿದೆ ಪ್ರೋಮೊ

ಬಿಗ್​ ಬಾಸ್​ ಕನ್ನಡ, ವರ್ಷದ ಒಂದು ಹಬ್ಬ ಎಂಬ ಥೀಮ್​ ಮೇಲೆ ಪ್ರೊಮೊ ಸಿದ್ಧಪಡಿಸಲಾಗಿದೆ. ಯುವಕನೊಬ್ಬ ಸೆಕ್ಯುರಿಟಿ ಗಾರ್ಡ್​, ಆಟೋ ಡ್ರೈವರ್​, ಪೋಸ್ಟರ್​ ಅಂಟಿಸುವರನ್ನು ಭೇಟಿಯಾದಾಗ ಎಲ್ಲರೂ ಹಬ್ಬ ಶುರುವಾಗುತ್ತಿದೆ ಎಂದು ಹೇಳುತ್ತಾನೆ. ಏನದು ಎಂದು ಯೋಚಿಸುವಷ್ಟರಲ್ಲಿ ‘ಹ್ಯಾಪಿ ಬಿಗ್​ಬಾಸ್’​ ಎಂದು ಹೇಳುವ ಮೂಲಕ ಇದು ಬಿಗ್​ಬಾಸ್​ ಹಬ್ಬ ಎಂಬುದನ್ನು ನೋಡುಗರಿಗೆ ಅರ್ಥ ಮಾಡಿಸಲಾಗಿದೆ.

ಇದನ್ನೂ ಓದಿ : Bigg Boss OTT 2: ಬಿಗ್‌ಬಾಸ್‌ ಸ್ಕ್ರಿಪ್ಟೆಡ್‌? ಪೂಜಾ ಭಟ್‌ ಸ್ಕ್ರಿಪ್ಟ್‌ ಓದುತ್ತಿರುವ ದೃಶ್ಯ ವೈರಲ್‌!

ಅತ್ಯಂತ ಸೃಜನಾತ್ಮಕವಾಗಿರುವ ಪ್ರೋಮೊವನ್ನು ಬಿಗ್​ಬಾಸ್​ನ ಹೋಸ್ಟ್​​ ಸುದೀಪ್ ಅವರ ಗ್ರ್ಯಾಂಡ್​ ಎಂಟ್ರಿ ಮೂಲಕ ಆರಂಭಿಸಲಾಗಿದೆ. ಚೆಸ್​ಬೋರ್ಡ್​ನಲ್ಲಿ ಚೆಕ್​ಮೇಟ್ ಇಡುವ ಅವರನ್ನು ವಿಭಿನ್ನವಾಗಿ ತೋರಿಸಲಾಗಿದೆ. ಕರಿಕೋಟು ಧರಿಸಿರುವ ಕಿಚ್ಚ ಸುದೀಪ್​ ಅವರು ತಮ್ಮ ಕಣ್ಣು ಸನ್ನೆ ಹಾಗೂ ಕೈ ಸನ್ನೆಯ ಮೂಲಕವೇ ಹ್ಯಾಪಿ ಬಿಗ್​ಬಾಸ್ ಅರಂಭವಾಗುವ ಸೂಚನೆಯನ್ನು ವಿಡಿಯೊದಲ್ಲಿ ನೀಡುತ್ತಾರೆ.

ಫುಲ್​ ಸೆಲೆಬ್ರೇಷನ್​

ಪ್ರೋಮೊವನ್ನು ಸಂಪೂರ್ಣವಾಗಿ ಸೆಲೆಬ್ರೇಷನ್ ಮೂಡ್​ನಲ್ಲಿ ಕ್ರಿಯೇಟ್​ ಮಾಡಲಾಗಿದೆ. 1 ನಿಮಿಷ 21 ಸೆಕೆಂಡ್​​ಗಳಷ್ಟು ಸಮಯದ ಈ ಪ್ರೋಮೊ ಕಲರ್​ಫುಲ್ ಅಗಿದೆ. ನೋಡುವವರ ಗಮನ ಸೆಳೆಯುವಂತಿದೆ. ಬಣ್ಣ ಬಣ್ಣದ ಲೈಟ್​ಗಳು, ತಿಳಿ ರಾತ್ರಿಯು ಪ್ರೇಮ್​ಗಳು, ದೊಡ್ಡ ಕಟ್ಟಡಕ್ಕೆ ಅಂಟಿಸಿರುವ ಸುದೀಪ್ ಅವರ ಚಿತ್ರವಿರುವ ಪೋಸ್ಟರ್​, ಪಟಾಕಿಗಳ ರಂಗು ಹಾಗೂ ಬಣ್ಣದ ಕಾಗದಗಳ ಚೂರು ಇಡೀ ಪ್ರೋಮೊ ವನ್ನು ಅತ್ಯಂತ ಸುಂದರವಾಗಿ ಕಾಣುವಂತೆ ಮಾಡಿದೆ. ಕೆಂಪು ಬಣ್ಣದ ಹಿನ್ನೆಲೆಯು ನೋಡಗನ ಮನಸ್ಸಿನಲ್ಲಿ ಅಚ್ಚಳಿಯುವಂತೆ ಉಳಿಯುತ್ತದೆ.

ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು ಪ್ರೊಮೊ

ಕಲರ್ಸ್‌ ಕನ್ನಡ ಕಿಚ್ಚ ಸುದೀಪ್‌ ಅವರ ಜನುಮದಿನವೇ ಬಿಗ್‌ ಬಾಸ್‌ (Bigg Boss Kannada) ಪ್ರೋಮೊ ಹಂಚಿಕೊಂಡು ಬಿಗ್‌ ಬಾಸ್‌ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿತ್ತು . ಪ್ರೋಮೊನಲ್ಲಿ ಸುದೀಪ್ ಇರಲಿಲ್ಲ. ಬದಲಿಗೆ ‘ಬಿಗ್​ಬಾಸ್’ ಮಾತ್ರವೇ ಇದ್ದರು. ಈ ಹಿಂದಿನ ಬಿಗ್​ಬಾಸ್​ಗಳಿಗಿಂತಲೂ ಈ ಬಾರಿಯ ಬಿಗ್​ಬಾಸ್ ಭಿನ್ನವಾಗಿರಲಿದೆ ಎಂದು ಪ್ರೋಮೊನಲ್ಲಿ ಹೇಳಲಾಗಿದೆ. ಹತ್ತನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ. ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಶೋ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

ಈ ಬಾರಿ ಸ್ಪೆಷಲ್‌ ಅಂತೆ !

ಕಳೆದ ಬಾರಿಯ ಸೀಸನ್ ನಲ್ಲಿ OTTಯ 5 ಸ್ಪರ್ಧಿಗಳೊಂದಿಗೆ 18 ಸ್ಪರ್ಧಿಗಳು ಮನೆಯೊಳಗಿದ್ದರೆ ಆದರೆ ಈ ಬಾರಿಯ ಸೀಸನ್ ನಲ್ಲಿ ಅದೆಷ್ಟು ಜನ ಸ್ಪರ್ಧಿಸಲಿದ್ದಾರೆ ಎಂದು ಇನ್ನೂ ಕೂಡ ತಿಳಿದಿಲ್ಲ .ಆದರೆ ಈ ಬಾರಿಯ ಬಿಗ್ ಬಾಸ್ ನ ಮೊದಲ ಪ್ರೋಮೊದಲ್ಲಿ ಸುದೀಪ್ ಅವರು ಕಂಡುಬಂದಿಲ್ಲ, ಬದಲಿಗೆ ಬೆಂಗಳೂರು ನಗರದ ಹಲವು ಭಾಗಗಳನ್ನು ಹಾಗೂ ಸಿಸಿಟಿವಿ ಗಳನ್ನು ತೋರಿಸಲಾಗಿದೆ.ಪ್ರೋಮೋ ನೋಡಿದರೆ ಈ ಬಾರಿಯ ಸೀಸನ್ ಬೆಂಗಳೂರಿನ ಹಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ ಎನ್ನುವಂತೆ ಭಾಸವಾಗುತ್ತದೆ.

ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೊನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ. ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೊದಲ್ಲಿ ತೋರಿಸಲಾಗಿದೆ. ಈ ಮೂಲಕ ನೋಡುಗರಿಗೆ ಭಾರಿ ಕುತೂಹಲ ಹುಟ್ಟುಹಾಕಿದೆ.

ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಗ್​ಬಾಸ್ ಪ್ರಾರಂಭವಾಗುತ್ತಿದೆ. ಅಂತೆಯೇ ಕನ್ನಡದಲ್ಲಿಯೂ ಇನ್ನು ಕೆಲವೇ ದಿನಗಳಲ್ಲಿ ಬಿಗ್​ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಶೋ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

Exit mobile version