Site icon Vistara News

Kangana Ranaut : ಇದೆಂಥಾ ನಾಲಿಗೆ? ಬಿಜೆಪಿ ಅಭ್ಯರ್ಥಿ ಕಂಗನಾರನ್ನು ವೇಶ್ಯೆ ಎಂದು ಕರೆದ ಬಿಹಾರದ ರಾಜಕಾರಣಿ

Kangana Ranaut

ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳಿಗೇ ಹೆಸರುವಾಸಿಯಾಗಿರುವ ಬಿಹಾರದ ರಾಜಕಾರಣಿ ಹಾಗೂ “ಯುವ ವಿಚಾರ್​ ಮಂಚ್​ನ’ ಮುಖ್ಯಸ್ಥ ರುದ್ರ ಪ್ರತಾಪ್ ಕುಶ್ವಾಹ ಆಘಾತಕಾರಿ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ಈ ಬಾರಿ 2024 ರ ಲೋಕಸಭಾ (Lok Sabha Election 2024) ಚುನಾವಣೆಯ ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut)​ ವಿರುದ್ಧ ಅನಗತ್ಯ ಹಾಗೂ ಅತ್ಯಂತ ಕೀಳುಮಟ್ಟದ ಟೀಕೆ ಮಾಡಿದ್ದಾರೆ. ಅವರ ಹೇಳಿಕೆಗಳು ರಣಾವತ್ ಅವರನ್ನು ಗುರಿಯಾಗಿಸಿಕೊಂಡಿದ್ದಲ್ಲದೆ, ಬಿಜೆಪಿ ಮತ್ತು ದೇಶದ ಶಕ್ತಿ ಕೇಂದ್ರ ಸಂಸತ್​ಗೂ ಅವಮಾನ ಮಾಡುವಂಥದ್ದು. ಅವರು ಮೊದಲಿಗೆ ಕಂಗನಾ ಅವರನ್ನು ವೇಶ್ಯೆ ಎಂದರೆ ಪಾರ್ಲಿಮೆಂಟ್ ಅನ್ನು ವೇಶ್ಯಾಗೃಹ ಎಂದು ಕರೆಯವಷ್ಟು ನಾಲಗೆ ಹರಿಬಿಟ್ಟಿದ್ದಾರೆ.

ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ರಣಾವತ್​ ಅವರನ್ನು ಆಯ್ಕೆ ಮಾಡಿದ ಬಗ್ಗೆ ರುದ್ರ ಪ್ರತಾಪ್ ಕುಶ್ವಾಹ ಅತ್ಯಂತ ಕಳಪೆ ಮಟ್ಟದ ಟೀಕೆ ಮಾಡಿದ್ದಾರೆ “ಮಂಡಿಯಲ್ಲಿ ವೇಶ್ಯೆಯೊಬ್ಬರಿಗೆ ಟಿಕೆಟ್ ನೀಡಲಾಗಿದೆ. ದೇಶದ ಹಿಂದುಳಿದ ಜಾತಿಗಳ ಸಮೂಹವನ್ನು ಮೋಡಿ ಮಾಡಲು ಬಿಜೆಪಿ ಅಂತಹ ಮಹಿಳೆಯನ್ನು ಸಂಸತ್ ಭವನಕ್ಕೆ ಕಳುಹಿಸಲು ಮುಂದಾಗಿದೆ. ಅವರನ್ನು ಅಲ್ಲಿಗೆ ಕಳುಹಿಸಿ ಸಂಸತ್ತಿನಲ್ಲಿ ವೇಶ್ಯಾಗೃಹ ಆರಂಭಿಸುತ್ತಾರೆ. ಅಂತಹ ಮಹಿಳೆಯನ್ನು ಇತರ ಸಂಸದರಿಗೆ ತೋರಿಸುತ್ತಾರೆ. ಎಲ್ಲರೂ ಅವರ ಪರವಾಗಿ ಇರುವಂತೆ ಮೋಡಿ ಮಾಡುತ್ತಾರೆ. ಕಂಗನಾಗೆ ಮೊದಲಿನಿಂದಲೂ ಇದೇ ರೀತಿಯ ಹವ್ಯಾಸ ಇದೆ. ಬಿಜೆಪಿಗೂ ಇದೆ. ಇನ್ನೀ ಸನ್ನಿ ಲಿಯೋನ್ ಅವರಿಗೂ ಮಹಿಳಾ ಮತ್ತು ಯುವ ಖಾತೆ ನೀಡಬೇಕು ನಾವು ಮೋದಿ ಜಿ ಮತ್ತು ಶಾ ಅವರನ್ನು ವಿನಂತಿಸುತ್ತೇವೆ ಕುಶ್ವಾಹ ಹಾಸ್ಯ ಮಾಡಿದ್ದಾರೆ.

ಕಂಗನಾ ರಣಾವತ್​ ಅವರು ಚಲನಚಿತ್ರಗಳಲ್ಲಿನ ಅತ್ಯಂತ ಕನಿಷ್ಠ ಬಟ್ಟೆ ಧರಿಸುತ್ತಾರೆ. ಸಿನಿಮಾದ ಪಾತ್ರಗಳಿಂದಾಗಿ ಸಭ್ಯ ಮಹಿಳೆ ಪಡೆಯುವ ಯಾವುದೇ ಗೌರವಕ್ಕೆ ಅವರು ಅರ್ಹರಲ್ಲ. ಅವರು ಕೆಟ್ಟ ಉಡುಪುಗಳನ್ನು ಧರಿಸಿಕೊಂಡು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಿಜವಾದ ಮಹಿಳೆಯಲ್ಲ ಎಂದು ಕುಶ್ವಾಹ ಹೇಳಿದ್ದಾರೆ. ನಿಮ್ಮ ಕಾಮೆಂಟ್​ಗಳಿಗಾಗಿ ಪೊಲೀಸ್​ ಕೇಸ್​ ಎದುರಿಸಬೇಕಾಗುತ್ತದೆ ಎಂದು ಪತ್ರಕರ್ತ ಕೇಳಿದ್ದಕ್ಕೆ , ನಾನು ಅಂಥದ್ದಕ್ಕೆಲ್ಲ ಹೆದರುವುದಿಲ್ಲ ಎಂದು ಕುಶ್ವಾಹ ಹೇಳಿದ್ದಾರೆ.

ಇದನ್ನೂ ಓದಿ: Salman Khan : ಸಲ್ಮಾನ್ ಮನೆ ಬಳಿಯ ಗುಂಡಿನ ದಾಳಿಯ ಪ್ರಕರಣ ತನಿಖೆ ಎನ್​ಕೌಂಟರ್​ ದಯಾನಾಯಕ್ ಹೆಗಲಿಗೆ?

ರುದ್ರಪ್ರತಾಪ್ ಹೇಳಿಕೆಯನ್ನು ಹಿರಿಯ ಪತ್ರಕರ್ತೆ ಮಮತಾ ತ್ರಿಪಾಠಿ ಟ್ವೀಟ್ ಮೂಲಕ ಖಂಡಿಸಿದ್ದಾರೆ. “ಮಂಡಿಯಿಂದ ವೇಶ್ಯೆಯೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಈ ಬಿಜೆಪಿಯವರು ಸಂಸತ್ತಿನಲ್ಲಿ ವೇಶ್ಯಾಗೃಹವನ್ನು ತೆರೆಯುತ್ತಾರೆ ಎಂದು ಹೇಳುವ ಧೈರ್ಯ ಹೇಗೆ ಬಂತು? ನರೇಂದ್ರ ಮೋದಿ ಸರ್, ಈ ವ್ಯಕ್ತಿ ಇನ್ನೂ ತನ್ನ ಕಾಲ ಮೇಲೆ ಹೇಗೆ ನಿಂತಿದ್ದಾನೆ? ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ತಿಳಿದಿಲ್ಲದ ರುದ್ರಪ್ರತಾಪ್ ಕುಶ್ವಾಹ ಅವರಂತಹ ಪುರುಷರಿಗೆ ಅವರ ಭಾಷೆಯಲ್ಲಿ ಬುದ್ಧಿ ಕಲಿಸಬೇಕಾಗಿದೆ. ಇಡೀ ದೇಶದಲ್ಲಿ ಮಹಿಳೆಯರ ಸುರಕ್ಷತೆ ಧಕ್ಕೆ ತರಲಾಗಿದೆ. ಹೆಣ್ಣುಮಕ್ಕಳ ಬಗ್ಗೆ ಅಸಂಬದ್ಧವಾಗಿ ಮಾತನಾಡಲಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಅಜ್ಞಾನಿಗಳು ನಾಲಗೆ ಹರಿಯಬಿಡುತ್ತಾರೆ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಕುಶ್ವಾಹ

ರುದ್ರ ಪ್ರತಾಪ್ ಕುಶ್ವಾಹ ಈ ಹಿಂದೆಯೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಾಗಿ ಸುದ್ದಿಯಲ್ಲಿದ್ದರು. ವೀಡಿಯೊವೊಂದರಲ್ಲಿ ಅವರು ಅವರು ಬ್ರಾಹ್ಮಣರನ್ನು ಕೊಲ್ಲುವ ಮತ್ತು ದೇಶದಿಂದ ಓಡಿಸುವ ಬಗ್ಗೆ ಮಾತನಾಡಿದ್ದರು. “ಈಗ ದೇಶದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಗಲಭೆ ಇಲ್ಲ. ಯಾವ ಹಿಂದೂವೂ ಅಪಾಯದಲ್ಲಿಲ್ಲ. ಯಾವ ಮುಸ್ಲಿಮನೂ ಅಪಾಯದಲ್ಲಿಲ್ಲ. ಗೀತೆಯಾಗಲಿ, ಕುರಾನ್ ಆಗಲಿ ಅಪಾಯದಲ್ಲಿಲ್ಲ. ನಿಮ್ಮ ಕಣ್ಣುಗಳಿಂದ ಧರ್ಮದ ಕನ್ನಡಕವನ್ನು ತೆಗೆದು ನೋಡಬೇಕು ಅಷ್ಟೆ. ಆದರೆ, ಶೇಕಡಾ 2ರಷ್ಟು ಇರುವ ಬ್ರಾಹ್ಮಣರಿಂದಾಗಿ ಇಡೀ ಹಿಂದೂಸ್ತಾನವು ಅಪಾಯದಲ್ಲಿದೆ ಎಂದು ನುಡಿದಿದ್ದರು.

Exit mobile version