Site icon Vistara News

Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

Amith Shah

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮಿಳುನಾಡು ಬಿಜೆಪಿ ನಾಯಕಿ ತಮಿಳಿಸೈಯನ್ನು ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಗದರಿದ್ದಾರೆ ಎಂಬ ವಿಡಿಯೊ ವೈರಲ್ ಆಗಿದೆ. ಆದರೆ ಸ್ವತಃ ತಮಿಳಿಸೈ ಅವರು ಅದನ್ನು ನಿರಾಕರಿಸಿದ್ದು ಅವರು ತಮ್ಮನ್ನು ಬೈದಿದ್ದಲ್ಲ ಎಂದು ಹೇಳಿದ್ದಾರೆ.

ಸೌಂದರರಾಜನ್ ಅವರ ಪ್ರಕಾರ, ವೀಡಿಯೊದಲ್ಲಿ ಕಂಡುಬರುವಂತೆ ಅಮಿತ್ ಶಾ ಅವರ ಸೂಚನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಲ್ಲಿ ಅಮಿತ್ ಅವರು ತಮಗೆ ರಾಜಕೀಯವನ್ನು ಸಮರ್ಥವಾಗಿ ನಿರ್ವಹಿಸಲು ಸಲಹೆ ನೀಡಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.

ನಿನ್ನೆ, 2024 ರ ಚುನಾವಣೆಯ ನಂತರ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೆ. ಅವರು ನನಗೆ ಚುನಾವಣೆ ನಂತರದ ಸವಾಲುಗಳ ಬಗ್ಗೆ ಕೇಳಿದರು. ನಾನು ವಿವರಿಸುತ್ತಿರುವಂತೆ, ಸಮಯದ ಅಭಾವದಿಂದಾಗಿ ಅವರು ರಾಜಕೀಯ ಮತ್ತು ಕ್ಷೇತ್ರದ ಕೆಲಸಗಳನ್ನು ತೀವ್ರಗತಿಯಲ್ಲಿ ಮಾಡುವಂತೆ ಸಲಹೆ ನೀಡಿದರು. ಹೀಗಾಗಿ ಭರವಸೆ ಮೂಡಿದೆ. ಇದು ಅನಗತ್ಯ ಊಹಾಪೋಹ ಸೃಷ್ಟಿಸಿದೆ ಎಂದು ತಮಿಳಸೈ ಸೌಂದರರಾಜನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಕಾರಣವೇನು?

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಮಿತ್ ಶಾ ಅವರು ತೆಲಂಗಾಣದ ಮಾಜಿ ರಾಜ್ಯಪಾಲರನ್ನು ವೇದಿಕೆಯ ಮೇಲೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವೀಡಿಯೊ ವಿವಾದಕ್ಕೆ ಕಾರಣವಾಗಿತ್ತು . ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ರಾಜ್ಯದಲ್ಲಿನ ಚುನಾವಣಾ ಸೋಲಿನ ಬಗ್ಗೆ ಸೌಂದರರಾಜನ್ ಟೀಕಿಸಿದ್ದರು. ಅದೇ ಹೇಳಿಕೆಗಾಗಿ ಅಮಿತ್ ಶಾ ತಮಿಳಿಸೈ ಅವರನ್ನು ಬೈಯುತ್ತಿದ್ದಾರೆ ಎಂದು ಹಲವರು ಊಹಿಸಿದ್ದರು.

ಇದನ್ನೂ ಓದಿ: Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

ಈ ವಿಡಿಯೋದಲ್ಲಿ ಡಿಎಂಕೆ ನಾಯಕರು ಬಿಜೆಪಿಯನ್ನು ಗುರಿಯಾಗಿಸಿಕೊಂಡಿದ್ದು, ಅಮಿತ್ ಶಾ ಅವರ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರು ಅಮಿತ್ ಶಾ ಅವರ ಈ ವೀಡಿಯೊದ ಬಗ್ಗೆ ಟೀಕಿಸಿದ್ದು, ಇದು ‘ದುರದೃಷ್ಟಕರ’ ಮತ್ತು ‘ಸ್ವಾಗತಾರ್ಹವಲ್ಲ’ ಎಂದು ಹೇಳಿದ್ದಾರೆ.

ಇದು ತುಂಬಾ ದುರದೃಷ್ಟಕರ. ಅವರು ತೆಲಂಗಾಣ ಮತ್ತು ಪುದುಚೇರಿಯ ರಾಜ್ಯಪಾಲರಾಗಿದ್ದರು. ಗೃಹ ಸಚಿವರು ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅಥವಾ ವಿದೇಶಾಂಗ ಸಚಿವರಾಗಿರುವ ಎಸ್ ಜೈಶಂಕರ್ ಅವರನ್ನು ಅದೇ ರೀತಿ ಬೈಯುತ್ತಾರೆಯೇ? ತಮಿಳಿಸೈ ತಮಿಳುನಾಡಿನವಳು ಎಂಬ ಕಾರಣಕ್ಕಾಗಿ ತರಾಟೆಗೆ ತೆಗೆದುಕೊಂಡರೇ? ಇದು ಅತ್ಯಂತ ಸ್ವಾಗತಾರ್ಹವಲ್ಲ” ಎಂದು ಹೇಳಿದ್ದರು.

ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಇದನ್ನು ಅಪದ್ಧ ಎಂದು ಕರೆದಿದ್ದಾರೆ. ಇದು ಯಾವ ರೀತಿಯ ರಾಜಕೀಯ? ತಮಿಳುನಾಡಿನ ಪ್ರಮುಖ ಮಹಿಳಾ ರಾಜಕಾರಣಿಯನ್ನು ಸಾರ್ವಜನಿಕವಾಗಿ ಖಂಡಿಸುವುದು ಸಭ್ಯವೇ? ಇದನ್ನು ಎಲ್ಲರೂ ನೋಡಿದ್ದಾರೆ ಎಂಬುದನ್ನು ಅಮಿತ್ ಶಾ ತಿಳಿದುಕೊಳ್ಳಬೇಕು. ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.

Exit mobile version