ಬೆಂಗಳೂರು: ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳು ಸೇರಿದಂತೆ ವಿವಿಧ ರಾಜ್ಯಗಳ 72 ಲೋಕ ಸಭಾ ಕ್ಷೇತ್ರಗಳ (Lok Sabha Election) ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬುಧವಾರ ಸಂಜೆ ಪ್ರಕಟಗೊಂಡಿದೆ. ಮೊದಲ ಹಂತದಲ್ಲಿ 195 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 2ನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕ, ನವ ದೆಹಲಿ, ಗುಜರಾತ್, ಹರಿಯಾಣ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತ್ರಿಪುರಾ ಮತ್ತು ಉತ್ತರಾಖಂಡ ರಾಜ್ಯಗಳ ಅಭ್ಯರ್ಥಿಗಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇಲ್ಲಿದೆ
ಕರ್ನಾಟಕದಲ್ಲಿ ಪ್ರತಾಪ ಸಿಂಹ ಸೇರಿದಂತೆ ಕೆಲವು ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದೆ. ಅಂತೆಯೇ ಎರಡನೇ ಪಟ್ಟಿಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಮನೋಹರ್ ಲಾಲ್ ಖಟ್ಟರ್, ನಿತಿನ್ ಗಡ್ಕರಿ, ಅನುರಾಗ್ ಠಾಕೂರ್, ಪಿಯೂಷ್ ಗೋಯಲ್ ಮತ್ತು ತೇಜಸ್ವಿ ಸೂರ್ಯ ಇದ್ದಾರೆ. ಮನೋಹರ್ ಲಾಲ್ ಖಟ್ಟರ್ ಅವರು ಹರಿಯಾಣದ ಕರ್ನಾಲ್ ನಿಂದ ಸ್ಪರ್ಧಿಸಲಿದ್ದಾರೆ, ಖಟ್ಟರ್ ಅವರು ಹರಿಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ : Lok Sabha Election 2024: ಬಿಜೆಪಿ ಪಟ್ಟಿ ರಿಲೀಸ್; ಮೈಸೂರಿಗೆ ಯದುವೀರ್, ಬೆಂ. ಉತ್ತರಕ್ಕೆ ಶೋಭಾ ಶಿಫ್ಟ್, ಉಡುಪಿಗೆ ಕೋಟ!
2024 ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಇರಲಿಲ್ಲ. ಆದಾಗ್ಯೂ ಎರಡನೇ ಪಟ್ಟಿಯಲ್ಲಿ ಅವರು ತಮ್ಮ ನಾಗ್ಪುರ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
ಅಶೋಕ್ ತನ್ವರ್ (ಸಿರ್ಸಾ), ಚೌಧರಿ ಧರಮ್ಬೀರ್ ಸಿಂಗ್ (ಭಿವಾನಿ-ಮಹೇಂದ್ರಗಢ), ರಾವ್ ಇಂದ್ರಜಿತ್ ಸಿಂಗ್ ಯಾದವ್ (ಗುರುಗ್ರಾಮ ), ಅನುರಾಗ್ ಸಿಂಗ್ ಠಾಕೂರ್ (ಹಮೀರ್ಪುರ), ಬಿ.ವೈ.ರಾಘವೇಂದ್ರ (ಶಿವಮೊಗ್ಗ), ಬಸವರಾಜ ಬೊಮ್ಮಾಯಿ (ಹಾವೇರಿ), ಶೋಭಾ ಕರಂದ್ಲಾಜೆ (ಬೆಂಗಳೂರು ಉತ್ತರ), ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ಭಾರತಿ ಪ್ರವೀಣ್ ಪವಾರ್ (ದಿಂಡೋರಿ), ಪಂಕಜಾ ಮುಂಡೆ (ಬೀಡ್), ನಿತಿನ್ ಗಡ್ಕರಿ (ನಾಗ್ಪುರ), ಪಿಯೂಷ್ ಗೋಯಲ್ (ಮುಂಬೈ ಉತ್ತರ) ಎರಡನೇ ಪಟ್ಟಿಯಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.
ಇವರೇ ಕರ್ನಾಟಕದ ಬಿಜೆಪಿಯ 20 ಅಭ್ಯರ್ಥಿಗಳು
ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್
ವಿಜಯಪುರ: ರಮೇಶ್ ಜಿಗಜಿಣಗಿ
ಕಲಬುರಗಿ: ಡಾ. ಉಮೇಶ್ ಜಾಧವ್
ಬೀದರ್: ಭಗವಂತ್ ಖೂಬಾ
ಕೊಪ್ಪಳ: ಡಾ. ಬಸವರಾಜ ಕ್ಯಾವತೂರು
ಬಳ್ಳಾರಿ: ಬಿ. ಶ್ರೀರಾಮುಲು
ಹಾವೇರಿ: ಬಸವರಾಜ ಬೊಮ್ಮಾಯಿ
ಧಾರವಾಡ: ಪ್ರಹ್ಲಾದ್ ಜೋಶಿ
ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್
ಶಿವಮೊಗ್ಗ: ಬಿವೈ ರಾಘವೇಂದ್ರ
ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್ ಚೌಟ
ತುಮಕೂರು: ವಿ ಸೋಮಣ್ಣ
ಮೈಸೂರು: ಯದುವೀರ್ ಕೃಷ್ಣ ದತ್ತ ಒಡೆಯರ್
ಚಾಮರಾಜನಗರ: ಎಸ್. ಬಾಲರಾಜ್
ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್. ಮಂಜುನಾಥ್
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಅಭ್ಯರ್ಥಿ ಘೋಷಣೆಯಾಗದ ಕ್ಷೇತ್ರಗಳು:
ಉತ್ತರ ಕನ್ನಡ
ಬೆಳಗಾವಿ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ರಾಯಚೂರು
8 ಮಂದಿ ಹಾಲಿ ಸಂಸದರಿಗೆ ಟಿಕೆಟ್ ಮಿಸ್!
ಡಿ.ವಿ. ಸದಾನಂದಗೌಡ
ನಳಿನ್ ಕುಮಾರ್ ಕಟೀಲ್
ಪ್ರತಾಪ್ ಸಿಂಹ
ಶಿವಕುಮಾರ್ ಉದಾಸಿ
ದೇವೇಂದ್ರಪ್ಪ
ಜಿ.ಎಸ್. ಬಸವರಾಜು
ಜಿ.ಎಂ. ಸಿದ್ದೇಶ್ವರ್
ಶ್ರೀನಿವಾಸ್ ಪ್ರಸಾದ್