ಬೆಂಗಳೂರು: ಬಿಎಂಡಬ್ಲ್ಯು ಎಕ್ಸ್3 (BMW X3) ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಯಶಸ್ವಿ ಎಸ್ಯುವಿಯಾದ ಬಿಎಂಡಬ್ಲ್ಯು ಎಕ್ಸ್ 3 ನ ಈ ವಿಶೇಷ ಆವೃತ್ತಿಯು ಇಂದಿನಿಂದ ಎಲ್ಲಾ ಬಿಎಂಡಬ್ಲ್ಯು ಇಂಡಿಯಾ ಡೀಲರ್ ಶಿಪ್ ಗಳು ಮತ್ತು ಬಿಎಂಡಬ್ಲ್ಯು ಆನ್ ಲೈನ್ ಶಾಪ್ ಗಳಲ್ಲಿ ಡೀಸೆಲ್ ವೇರಿಯೆಂಟ್ಗಳಲ್ಲಿ ಲಭ್ಯವಿದೆ.
ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಮ್ ದರದಂತೆ ರೂ. 74,90,000ಗಳಾಗಿದೆ. ಇದು ಲಾಂಚಿಂಗ್ ಬೆಲೆಯಾಗಿದ್ದು ಮುಂದೆ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಬಿಎಂಡಬ್ಲ್ಯು ಎಕ್ಸ್ 3 ಎಕ್ಸ್ ಡ್ರೈವ್ 20 ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಕಾರು ಬ್ರೂಕ್ಲಿನ್ ಗ್ರೇ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಲೆದರ್ ವೆರ್ನಾಸ್ಕಾ ಅಪ್ಹೋಲ್ಸ್ಟೆರಿಯನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಮೋಚಾ & ಬ್ಲ್ಯಾಕ್ ವಿತ್ ಕಾಂಟ್ರಾಸ್ಟ್ ಸ್ಟಿಚಿಂಗ್ ಕೂಡ ಹೊಂದಿರುತ್ತದೆ.
ಬಿಎಂಡಬ್ಲ್ಯು ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಗೆ ಧನ್ಯವಾದಗಳು, ಕಸ್ಟಮೈಸ್ ಮಾಡಿದ ಮತ್ತು ಹೊಂದಿಕೊಳ್ಳುವ ಹಣಕಾಸು ಪರಿಹಾರಗಳನ್ನು ವೈಯಕ್ತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಬಿಎಂಡಬ್ಲ್ಯು 360 ಫೈನಾನ್ಸ್ ಪ್ಲಾನ್ ನೊಂದಿಗೆ ಗ್ರಾಹಕರು ಉತ್ತಮ ಮೌಲ್ಯ ಮತ್ತು ಸಂಪೂರ್ಣ ಮನಸ್ಸಿನ ಶಾಂತಿಯನ್ನು ಆನಂದಿಸುತ್ತಾರೆ. ಇದು ಆಕರ್ಷಕ ಮಾಸಿಕ ಕಂತುಗಳು, ಐದು ವರ್ಷಗಳವರೆಗೆ ಭರವಸೆಯ ಬೈ-ಬ್ಯಾಕ್ ಆಯ್ಕೆ, ಹೊಂದಿಕೊಳ್ಳುವ ಟರ್ಮ್-ಎಂಡ್ ಅವಕಾಶಗಳು ಮತ್ತು ಹೊಸ ಬಿಎಂಡಬ್ಲ್ಯುಗೆ ಅಪ್ಗ್ರೇಡ್ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ.
ಟರ್ಬೊ ಎಂಜಿನ್
ಬಿಎಂಡಬ್ಲ್ಯು ಟ್ವಿನ್ ಪವರ್ ಟರ್ಬೊ ತಂತ್ರಜ್ಞಾನ ಹೊಂದಿದೆ. ಡೀಸೆಲ್ ಎಂಜಿನ್ ಗರಿಷ್ಠ ದಕ್ಷತೆಯನ್ನು ಹೊಂದಿರುತ್ತದೆ. ಕಡಿಮೆ ಎಂಜಿನ್ ವೇಗದಲ್ಲಿಯೂ ಆಟೊಮ್ಯಾಟಿಕ್ ಪ್ರತಿಕ್ರಿಯೆ ನೀಡುತ್ತದೆ. ಎರಡು ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 1,750 – 2,500 ಆರ್ ಪಿಎಂನಲ್ಲಿ 140 ಕಿಲೋವ್ಯಾಟ್ / 190 ಬಿಹೆಚ್ ಪಿ ಮತ್ತು 400 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 0-100 ಕಿ.ಮೀ ವೇಗವನ್ನು ಕೇವಲ 7.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.
ಇದನ್ನೂ ಓದಿ: Startup Investment : ಡ್ರಿಂಕ್ಪ್ರೈಮ್ ವಿಸ್ತರಣಾ ಯೋಜನೆಯಲ್ಲಿ ಎಸ್ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ
ಅತ್ಯುತ್ತಮ ದರ್ಜೆಯ ತಂತ್ರಜ್ಞಾನವು ಆಟೋಮೋಟಿವ್ ಕ್ಷೇತ್ರದಲ್ಲಿ ಹೊಸತನದ ಗಡಿಯನ್ನು ಮೀರುತ್ತದೆ. ಬಿಎಂಡಬ್ಲ್ಯು ಗೆಸ್ಚರ್ ಕಂಟ್ರೋಲ್ ಮತ್ತು ವೈರ್ ಲೆಸ್ ಆ್ಯಪಲ್ ಕಾರ್ ಪ್ಲೇಯರ್ ಮತ್ತು ಆಂಡ್ರಾಯ್ಡ್ ಆಟೋ ವ್ಯವಸ್ಥೆಯನ್ನು ಇದು ಹೊಂದಿದೆ. ಬಿಎಂಡಬ್ಲ್ಯು ಆಪರೇಟಿಂಗ್ ಸಿಸ್ಟಮ್ 7.0 ನಲ್ಲಿ ಚಾಲನೆಯಲ್ಲಿರುವ ಬಿಎಂಡಬ್ಲ್ಯು ಲೈವ್ ಕಾಕ್ ಪಿಟ್ ಪ್ರೊಫೆಷನಲ್ 3 ಡಿ ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಸ್ಟೀರಿಂಗ್ ವೀಲ್ ಹಿಂದೆ ಹೆಚ್ಚಿನ ರೆಸಲ್ಯೂಶನ್ 12.3 ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕಂಟ್ರೋಲ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ಬಿಎಂಡಬ್ಲ್ಯು ಗೆಸ್ಚರ್ ಕಂಟ್ರೋಲ್ ನೊಂದಿಗೆ ಕೆಲಸ ಮಾಡುತ್ತದೆ. ಇದು ಹಲವಾರು ಕಾರ್ಯಗಳ ನಿಯಂತ್ರಣಕ್ಕಾಗಿ ಆರು ಪೂರ್ವನಿರ್ಧರಿತ ಕೈ ಚಲನೆಗಳನ್ನು ಹೊಂದಿದೆ. ಬಿಎಂಡಬ್ಲ್ಯು ಹೆಡ್-ಅಪ್ ಡಿಸ್ಪ್ಲೇ ಮಾಹಿತಿಯನ್ನೂ ಹೊಂದಿತ್ತು.
ತಾಂತ್ರಿಕ ಮಾಹಿತಿಗಳು ಹೀಗಿವೆ
ಎಂಟು-ಸ್ಪೀಡ್ ಆಟೋಮ್ಯಾಟಿಕ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಟ್ರಾನ್ಸ್ ಮಿಷನ್ ನಯವಾದ ಗೇರ್ಶಿಫ್ಟ್ ಕಾರ್ಯವನ್ನು ಮಾಡುತ್ತದೆ. ಯಾವುದೇ ಸಮಯದಲ್ಲಿ, ಯಾವುದೇ ಗೇರ್ನಲ್ಲಿ ಟ್ರಾನ್ಸ್ಮಿಷನ್ ಎಂಜಿನ್ನೊಂದಿಗೆ ಸಂಪೂರ್ಣ ಹೊಂದಾಣಿಕೆಯಾಗುತ್ತದೆ. ಇದು ಅದರ ಪೂರ್ಣ ಶಕ್ತಿ ಮತ್ತು ದಕ್ಷತೆ ಪಡೆಯಲು ನೆರವು ನೀಡುತ್ತದೆ.
ಅಡಾಪ್ಟಿವ್ ಸಸ್ಪೆಂಷನ್ ತನ್ನ ವೈಯಕ್ತಿಕ ಎಲೆಕ್ಟ್ರಾನಿಕ್ ನಿಯಂತ್ರಿತ ಡ್ಯಾಂಪರ್ ಗಳೊಂದಿಗೆ ರಸ್ತೆ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಚಾಲನಾ ಶೈಲಿ ಎರಡಕ್ಕೂ ಹೊಂದಿಕೊಳ್ಳುತ್ತದೆ, ಆ ಮೂಲಕ ಅಸಾಧಾರಣ ನಿಖರತೆ ಕೊಡುತ್ತದೆ. ಡ್ರೈವ್ ಮತ್ತು ಹ್ಯಾಂಡ್ಲಿಂಗ್ ಡೈನಾಮಿಕ್ಸ್ ಅನ್ನು ಹೆಚ್ಚಿಸುತ್ತದೆ. ಇದು ಸ್ಟೀರಿಂಗ್ ವೀಲ್ ಪ್ಯಾಡಲ್ ಶಿಫ್ಟರ್ ಗಳು, ಬ್ರೇಕಿಂಗ್ ಫಂಕ್ಷನ್ ನೊಂದಿಗೆ ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್. ಆಟೋಮ್ಯಾಟಿಕ್ ಡಿಫರೆನ್ಷಿಯಲ್ ಬ್ರೇಕ್ (ಎಡಿಬಿ) ಗಳೊಂದಿಗೆ ಲಭ್ಯವಿದೆ. ಬಿಎಂಡಬ್ಲ್ಯು ಪರ್ಫಾಮೆನ್ಸ್ ಕಂಟ್ರೋಲ್ ಬ್ರೇಕಿಂಗ್ ಮೂಲಕ ಕಾರಿನ ಸ್ಥಿರತೆ ಹೆಚ್ಚಿಸುತ್ತದೆ.
ಇಂಟಲಿಜೆಂಟ್ ಆಲ್-ವೀಲ್ ಡ್ರೈವ್ ವ್ಯವಸ್ಥೆಯಾದ ಬಿಎಂಡಬ್ಲ್ಯು ಎಕ್ಸ್ ಡ್ರೈವ್, ಚಾಲನಾ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಎಲೆಕ್ಟ್ರಾನಿಕ್ ನಿಯಂತ್ರಿತ ಸ್ವಯಂಚಾಲಿತ ಡಿಫರೆನ್ಷಿಯಲ್ ಬ್ರೇಕ್ ಗಳು / ಲಾಕ್ ಗಳು (ಎಡಿಬಿ-ಎಕ್ಸ್), ಡೈನಾಮಿಕ್ ಟ್ರಾಕ್ಷನ್ ಕಂಟ್ರೊಲ್ ಕೂಡ ಹೊಂದಿದೆ.
ಡ್ರೈವ್ ಅಸಿಸ್ಟ್ ವ್ಯವಸ್ಥೆ
ಚಾಲಕ ಸಹಾಯ ವ್ಯವಸ್ಥೆಗಳ ಹರಡುವಿಕೆ ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಕ. ಬಿಎಂಡಬ್ಲ್ಯು ಡ್ರೈವಿಂಗ್ ಅಸಿಸ್ಟೆಂಟ್ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಅನ್ನು ಒದಗಿಸುತ್ತದೆ. ಲೇನ್ ಬದಲಾವಣೆಗಳು, ಮುಂಭಾಗದ ಘರ್ಷಣೆಗಳು ಮತ್ತು ಹಿಂಭಾಗದ ಘರ್ಷಣೆಗಳ ಬಗ್ಗೆ ಚಾಲಕನನ್ನು ಎಚ್ಚರಿಸಲು ಸಹಾಯ ಮಾಡುತ್ತದೆ. 360 ಕ್ಯಾಮೆರಾ ಹೊಂದಿರುವ ಪಾರ್ಕಿಂಗ್ ಅಸಿಸ್ಟೆಂಟ್ ಪ್ಲಸ್ ವೇಗವರ್ಧನೆ, ಬ್ರೇಕಿಂಗ್ ಮತ್ತು ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.
ಬಿಎಂಡಬ್ಲ್ಯು ಎಫಿಶಿಯೆಂಟ್ ಡೈನಾಮಿಕ್ಸ್ ನಲ್ಲಿ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್, ಆಟೋ ಸ್ಟಾರ್ಟ್-ಸ್ಟಾಪ್, ಬ್ರೇಕ್-ಎನರ್ಜಿ ರಿಜನರೇಷನ್, ಆಕ್ಟಿವ್ ಏರ್ ಸ್ಟ್ರೀಮ್ ಕಿಡ್ನಿ ಗ್ರಿಲ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, 50:50 ತೂಕ ಡಿಸ್ಟ್ರಿಬ್ಯೂಷನ್, ಕಂಫರ್ಟ್ / ಇಕೋ ಪ್ರೊ / ಸ್ಪೋರ್ಟ್ ನಂತಹ ವಿವಿಧ ಡ್ರೈವಿಂಗ್ ಮೋಡ್ ಗಳಿವೆ. ಡ್ರೈವಿಂಗ್ ಎಕ್ಸ್ ಪೀರಿಯನ್ಸ್ ಕಂಟ್ರೋಲ್ ಸ್ವಿಚ್ ಮತ್ತು ಇತರ ಅನೇಕ ನವೀನ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಸುರಕ್ಷತಾ ಫೀಚರ್ಗಳು
ಬಿಎಂಡಬ್ಲ್ಯು ಸುರಕ್ಷತಾ ತಂತ್ರಜ್ಞಾನಗಳಲ್ಲಿ ಆರು ಏರ್ ಬ್ಯಾಗ್ ಗಳು, ಬ್ರೇಕ್ ಅಸಿಸ್ಟ್ ನೊಂದಿಗೆ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಅಟೆನ್ಸಿನೆಸ್ ಅಸಿಸ್ಟೆನ್ಸ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಜರ್ ಮತ್ತು ಕ್ರ್ಯಾಶ್ ಸೆನ್ಸಾರ್, ಡೈನಾಮಿಕ್ ಬ್ರೇಕಿಂಗ್ ಲೈಟ್ ಗಳು, ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಮೌಂಟಿಂಗ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ಗಳಿವೆ.