Site icon Vistara News

Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

Car price Discounts

ಬೆಂಗಳೂರು: ರಿನೊ ಇಂಡಿಯಾ ಕಂಪನಿಯು ಈ ತಿಂಗಳು ಕೈಗರ್ ಕಾಂಪ್ಯಾಕ್ಟ್ ಎಸ್ ಯುವಿ ಕೈಗರ್​ (Renault Kiger) , ಕ್ವಿಡ್ ಹ್ಯಾಚ್ ಬ್ಯಾಕ್ (Renault Kwid) ಮತ್ತು ಟ್ರೈಬರ್ 7 (Renault Triber) ಸೀಟರ್​ ಸೇರಿದಂತೆ ತನ್ನ ಎಲ್ಲಾ ಶ್ರೇಣಿಯ ಕಾರುಗಳ ಮೇಲೆ ರಿಯಾಯಿತಿ (Car price Discounts: ) ಘೋಷಿಸಿದೆ. ನಗದು ರಿಯಾಯಿತಿಗಳು, ಎಕ್ಸ್​ಚೇಂಜ್​ ಪ್ರಯೋಜನಗಳು ಮತ್ತು ಲಾಯಲ್ಟಿ ಬೋನಸ್ ಗಳ ಜೊತೆಗೆ, ಆಯ್ದ ಖರೀದಿದಾರರು ಹೆಚ್ಚುವರಿ ರೆಫರಲ್, ಕಾರ್ಪೊರೇಟ್ ಮತ್ತು ಲಾಯಲ್ಟಿ ರಿಯಾಯಿತಿಗಳನ್ನೂ ಪಡೆಯಬಹುದು. ಹೆಚ್ಚುವರಿಯಾಗಿ, ಬ್ರಾಂಡ್ ನ ವಾಹನ ಸ್ಕ್ರ್ಯಾಪೇಜ್ ಯೋಜನೆಯನ್ನು ಆರಿಸಿಕೊಳ್ಳುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿ ವಿನಿಮಯ ರಿಯಾಯಿತಿ ಒದಗಿಸುತ್ತಿದೆ.

ಈ ತಿಂಗಳು ಹೊಸ ರಿನೊ ಎಸ್ ಯುವಿ ಅಥವಾ ಕಾರಿನಲ್ಲಿ ನೀವು ಎಷ್ಟು ಉಳಿಸಬಹುದು ಎಂಬುದನ್ನು ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ. ಎಲ್ಲಾ ಮೂರು ಮಾದರಿಗಳಲ್ಲಿ ಎಂಟ್ರಿ ಲೆವೆಲ್ ಆಎಕ್ಸ್​ಇ ವೇರಿಯೆಂಟ್​ಗಳು ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ರಿನೊ ಕೈಗರ್​ ಕಾರಿಗೆ ಸಿಗುವ ರಿಯಾಯಿತಿಗಳು

ಕೈಗರ್ ಕಾರಿನಲ್ಲಿ 40,000 ರೂ.ಗಳವರೆಗೆ ಪ್ರಯೋಜನ ಸಿಗುತ್ತದೆ. ಇದರಲ್ಲಿ 15,000 ರೂ.ಗಳ ನಗದು ರಿಯಾಯಿತಿ, 15,000 ರೂ.ಗಳ ಎಕ್ಸ್​ಚೇಂಜ್ ಬೋನಸ್​ ಮತ್ತು 10,000 ರೂ.ಗಳ ಲಾಯಲ್ಟಿ ಬೋನಸ್ ಸೇರಿಕೊಂಡಿವೆ. ಇದರ ಬೆಲೆಯು ರೂ.6.00 ಲಕ್ಷದಿಂದ ರೂ.11.23 ಲಕ್ಷ ರೂಪಾಯಿ. ನಾಲ್ಕು ಸಿಲಿಂಡರ್​ ಎಂಜಿನ್ ಮತ್ತು ಗೇರ್ ಬಾಕ್ಸ್ ಸಂಯೋಜನೆಗಳನ್ನು ಇ ಕಾರು ಹೊಂದಿದೆ. 1.0-ಲೀಟರ್ ಪೆಟ್ರೋಲ್ ಎಂಜಿನ್​ 72 ಬಿಹೆಚ್ ಪಿ ಪವರ್​ ಅನ್ನು ಮ್ಯಾನುವಲ್ ಮತ್ತು ಎಎಂಟಿ ವೇರಿಯೆಂಟ್​ನಲ್ಲಿ ಬಿಡುಗಡೆ ಮಾಡುತ್ತದೆ. ಟರ್ಬೊ 1.0 ಪೆಟ್ರೊಲ್​ ಎಂಜಿನ್​ 100 ಬಿಹೆಚ್ ಪಿ ಪವರ್ ಬಿಡಗಡೆ ಮಾಡುತ್ತದೆ. ಇದರಲ್ಲಿ ಸಿವಿಟಿ ಆಯ್ಕೆಯೂ ಇದೆ.

ಇದನ್ನೂ ಓದಿ: Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ರಿನೊ ಟ್ರೈಬರ್ ಡಿಸ್ಕೌಂಟ್​ಗಳು

ರಿನೊ ಟ್ರೈಬರ್ ಏಳು ಸೀಟ್​ಗಳ ಕಾರಾಗಿದ್ದು 40,000 ರೂ.ಗಳವರೆಗೆ ರಿಯಾಯಿತಿ ಇದೆ. ಇದು ನಗದು ರಿಯಾಯಿತಿ, ವಿನಿಮಯ ಪ್ರಯೋಜನಗಳು ಮತ್ತು ಕೈಗರ್​ನಂತೆಯೇ ಲಾಯಲ್ಟಿ ಬೋನಸ್ ಕೂಡ ಪಡೆಯುತ್ತದೆ. ಇದರ ಬೆಲೆ 6.00 ಲಕ್ಷ ರೂಪಾಯಿಯಿಂದ ಆರಂಭಗೊಂಡು ರೂ.8.98 ಲಕ್ಷ ರೂಪಾಯಿ ತನಕ ಇದೆ. ಅದೇ 72 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್​ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆಗಳೊಂದಿಗೆ ಬರುತ್ತದೆ.

ರೆನಾಲ್ಟ್ ಕ್ವಿಡ್ ಕಾರಿಗೆ ಸಿಗುವ ರಿಯಾಯಿತಿಗಳು

ಕ್ವಿಡ್ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಅನ್ನು ಜುಲೈನಲ್ಲಿ ಕೈಗರ್​ ಮತ್ತು ಟ್ರೈಬರ್ ನಂತೆಯೇ ರಿಯಾಯಿತಿ ಹೊಂದಿದೆ. 4.70 ಲಕ್ಷ ರೂ.ಗಳಿಂದ 6.45 ಲಕ್ಷ ರೂ.ಗಳ ನಡುವೆ ಬೆಲೆಯನ್ನು ಹೊಂದಿರುವ ಇದು ಮಾರುತಿ ಸುಜುಕಿ ಆಲ್ಟೋ ಕೆ 10 ಗೆ ಪೈಪೋಟಿ ನೀಡುತ್ತದೆ. ಇದು 68 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ.

Exit mobile version