ಬೆಂಗಳೂರು: ಬೆಂಗಳೂರು ನಗರದಲ್ಲಿ ಕಿಡಿಗೇಡಿಗಳು ಬೈಕ್ ಹತ್ತಿ ವೀಲಿಂಗ್ ಮತ್ತು ಸ್ಟಂಟ್ ಮಾಡುವುದು ಮಾಮೂಲಿ. ಪೊಲೀಸರು ಕ್ರಮ ಕೈಗೊಂಡ ಹೊರತಾಗಿಯೂ ಪುಂಡರು ತಮ್ಮ ವರ್ತನೆಯನ್ನು ಮುಂದುರಿಸುತ್ತಲೇ ಇರುತ್ತಾರೆ. ಆದರೆ ಜನರಿಗೆ ಇದೀಗ ಹೊಸ ಗೀಳು ಶುರುವಾಗಿದೆ. ಅತಿ ವೇಗದಲ್ಲಿ ಕಾರು ಓಡಿಸುತ್ತಾ ಸ್ಟಂಟ್ (Car Stunt) ಮಾಡುವುದು. ಈ ಪ್ರವೃತ್ತಿ ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ. ಬೈಕ್ ಸ್ಟಂಟ್ಗಿಂತಲೂ ಹೆಚ್ಚು ಅಪಾಯಕಾರಿಯಾಗಿರುವ ಕಾರು ಸ್ಟಂಟ್ ಜನರ ಜೀವಕ್ಕೆ ಕುತ್ತು ತರುವುದಲ್ಲಿ ಯಾವುದೇ ಅನುಮಾನ ಇಲ್ಲ.
ಜೂನ್ 1 ರಂದು ರಾತ್ರಿ 1.52 ಕ್ಕೆ ಜಯನಗರದ 4ನೇ ಹಂತದಲ್ಲಿ ಈ ಘಟನೆ ನಡೆದಿದೆ. ಒಂದು ಸರ್ಕಲ್ಗೆ ಹಲವಾರು ಬಾರಿ ಕಾರನ್ನು ಸುತ್ತು ಹಾಕಿಸಿ ಸ್ಟಂಟ್ ಮಾಡಿರುವ ಘಟನೆ ನಡೆದಿದೆ. ಹೆಡ್ಲೈಟ್ ಹಾಕಿಕೊಂಡು ಹಲವಾರು ಬಾರಿ ಕಾರಿನಲ್ಲಿ ಗಿರಕಿ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಯನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದರ ವಿಡಿಯೊಗಳು ಎಲ್ಲೆಡೆ ವೈರಲ್ ಆಗಿದೆ. ಘಟನೆ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಇಲ್ಲ.
ಶಾಸಕ ಪ್ರದೀಪ್ ಈಶ್ವರ್ ನಿವಾಸದ ಮೇಲೆ ಕಲ್ಲು ತೂರಾಟ, ಗಾಜು ಪುಡಿಪುಡಿ
ಚಿಕ್ಕಬಳ್ಳಾಪುರ: ಇಲ್ಲಿನ ಶಾಸಕ ಪ್ರದೀಪ್ ಈಶ್ವರ್ ನಿವಾಸದ ಮೇಲೆ ಮಂಗಳವಾರ ರಾತ್ರಿ (ಜೂ4ರಂದು) ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಮನೆಗೆ ಹಾಕಲಾಗಿದ್ದ ಗಾಜುಗಳು ಪುಡಿಪುಡಿಯಾಗಿವೆ. ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ರಾಜಕೀಯ ವಿರೋಧಿಗಳ ವಿರುದ್ಧ ಭಯಂಕರ ಭಾಷಣ ಮಾಡುವ ಪ್ರದೀಪ್ ಈಶ್ವರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕಲ್ಲು ಎಸೆದಿರಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್!
ಮಂಗಳವಾರ ಪ್ರಕಟವಾದ ಲೋಕ ಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರದೀಪ್ ಈಶ್ವರ್ ಅವರ ರಾಜಕೀಯ ಪ್ರತಿಸ್ಪರ್ಧಿ ಡಾ. ಸುಧಾಕರ್ ಗೆಲುವ ಸಾಧಿಸಿದ್ದಾರೆ. ಆ ಬಳಿಕ ಸುಧಾಕರ್ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೆ ಸುಧಾಕರ್ ಒಂದೇ ಒಂದು ಓಟ್ ರಕ್ಷಾ ರಾಮಯ್ಯ ಅವರಿಗಿಂತ ಹೆಚ್ಚು ಪಡೆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿದ್ದರು.
ರಾತ್ರಿ 10ರಿಂದ 11 ಗಂಟೆಯ ನಡುವೆ ಸುಧಾಕರ್ ಅವರ ಗೃಹಕಚೇರಿಯ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ಅವರ ಗೃಹಕಚೇರಿ ಇದ್ದು ಅಲ್ಲಿಗೆ ಕಲ್ಲು ತೂರಲಾಗಿದೆ. ತಡರಾತ್ರಿ ಮನೆಯ ಹಿಂಭಾಗದ ಮೂಲಕ ಕಲ್ಲು ತೂರಾಟ