ಹೊಸದಿಲ್ಲಿ: 10ನೇ ತರಗತಿಗೆ 7 ಹೆಚ್ಚುವರಿ ವಿಷಯಗಳು, 3 ಭಾಷೆಗಳು ಹಾಗೂ 12ನೇ ತರಗತಿಗೆ ಆರು ಪಠ್ಯ ವಿಷಯಗಳ (CBSE Text) ಪ್ರಶ್ನೆಪತ್ರಿಕೆಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಶಿಫಾರಸು (CBSE Recommendation) ಮಾಡಿದೆ.
ಪ್ರಸ್ತಾವಿತ ಬದಲಾವಣೆಗಳಲ್ಲಿ, 10ನೇ ತರಗತಿಯಲ್ಲಿ ಎರಡು ಭಾಷೆಗಳ (Language study) ಅಧ್ಯಯನವನ್ನು ಮೂರಕ್ಕೆ ಏರಿಸಬೇಕು ಎಂಬುದೂ ಸೇರಿದೆ. ಇವುಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತದ ಭಾಷೆಗಳಾಗಿರಬೇಕು ಎಂಬುದು ಷರತ್ತು. ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಶೈಕ್ಷಣಿಕ ರಚನೆಯಲ್ಲಿ ಪಠ್ಯಗಳ (CBSE Text) ಮೂಲಕ ಕೂಲಂಕಷ ಬದಲಾವಣೆಗಳಿಗೆ ಈ ಮೂಲಕ ಉದ್ದೇಶಿಸಲಾಗಿದೆ.
ಶೈಕ್ಷಣಿಕ ಪರಿಶ್ರಮವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, 10ನೇ ತರಗತಿಯ ವಿದ್ಯಾರ್ಥಿಗಳ ಉತ್ತೀರ್ಣ ಮಾನದಂಡದಲ್ಲಿಯೂ ಬದಲಾವಣೆ ಪ್ರಸ್ತಾವಿಸಲಾಗಿದೆ. ಸದ್ಯದ ಐದು ವಿಷಯಗಳಲ್ಲಿ ಉತ್ತೀರ್ಣರಾದರೆ ಸಾಕು. ಇದನ್ನು 10ಕ್ಕೆ ಹೆಚ್ಚಿಸುವ ಅವಶ್ಯಕತೆಯಿದೆ. ಅದೇ ರೀತಿ 12ನೇ ತರಗತಿಯಲ್ಲಿ ಒಂದರ ಬದಲಿಗೆ ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕು. ಕನಿಷ್ಠ ಒಂದು ಸ್ಥಳೀಯ ಭಾರತೀಯ ಭಾಷೆಯಾಗಿರಬೇಕು. ಪರಿಣಾಮವಾಗಿ, ವಿದ್ಯಾರ್ಥಿಗಳು ಪ್ರೌಢಶಾಲೆಯನ್ನು ಪೂರ್ಣಗೊಳಿಸಲು ಪ್ರಸ್ತುತ ಇರುವ ಐದು ವಿಷಯಗಳ ಬದಲಿಗೆ ಆರು ವಿಷಯಗಳಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕಾಗುತ್ತದೆ.
ಪ್ರಸ್ತಾವಿತ ಪರಿಷ್ಕರಣೆಗಳು ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಕ್ರೆಡಿಟ್ ವ್ಯವಸ್ಥೆಯನ್ನು ಸ್ಥಾಪಿಸಲು ಮುಂದಾಗಿರುವ CBSEಯ ದೊಡ್ಡ ಗುರಿಯ ಭಾಗವಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ, ಈ ಕ್ರೆಡಿಟ್ ವ್ಯವಸ್ಥೆ ಸಾಮಾನ್ಯ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದ ನಡುವೆ ಶೈಕ್ಷಣಿಕ ಸಮಾನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ಇದು ಎರಡು ಶೈಕ್ಷಣಿಕ ವ್ಯವಸ್ಥೆಗಳ ನಡುವೆ ಸುಗಮ ಪರಿವರ್ತನೆಗೆ ಅನುವು ಮಾಡಿಕೊಡುತ್ತದೆ.
ಪ್ರಸ್ತುತ ಸಾಂಪ್ರದಾಯಿಕ ಶಾಲಾ ಪಠ್ಯಕ್ರಮವು ಸಂಘಟಿತ ಕ್ರೆಡಿಟ್ ವ್ಯವಸ್ಥೆಯನ್ನು ಹೊಂದಿಲ್ಲ. CBSE ಪ್ರಸ್ತಾವನೆಯು 1,200 ಕಲಿಕೆಯ ಗಂಟೆಗಳು ಅಥವಾ 40 ಕ್ರೆಡಿಟ್‌ಗಳನ್ನು ಒಳಗೊಂಡಿರುವ ಪೂರ್ಣ ಶೈಕ್ಷಣಿಕ ವರ್ಷವನ್ನು ರೂಪಿಸಲಿದೆ. ಕಲಿಕೆಯ ಗಂಟೆಯು ಅಂದಾಜು ಕಲಿಕೆಯ ಸಮಯವನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳು ಒಂದು ವರ್ಷದಲ್ಲಿ 1,200 ಅಧ್ಯಯನ ಗಂಟೆಗಳನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕಲಿಕೆಗಳು ಇರುತ್ತವೆ.
ಈ ಉಪಕ್ರಮದೊಂದಿಗೆ ಹೊಂದಾಣಿಕೆ ಮಾಡಲು, ಮಾಧ್ಯಮಿಕ ಮತ್ತು ಪ್ರೌಢಶಾಲೆ ಪಠ್ಯಕ್ರಮಕ್ಕೆ ಹೆಚ್ಚಿನ ವಿಷಯಗಳನ್ನು ಸೇರಿಸಲು CBSE ಸೂಚಿಸಿದೆ. ಇದು ವೃತ್ತಿಪರ ಮತ್ತು ಅಂತರ್‌ಶಿಸ್ತೀಯ ಕೋರ್ಸ್‌ಗಳನ್ನು ಒಳಗೊಂಡಿದೆ. 10ನೇ ತರಗತಿಗೆ ಕ್ರೆಡಿಟ್ ಆಧಾರಿತ ವ್ಯವಸ್ಥೆಯಡಿಯಲ್ಲಿ, ವಿದ್ಯಾರ್ಥಿಗಳು ಪ್ರಸ್ತುತ ಐದು ವಿಷಯಗಳಿಗೆ ಬದಲು ಏಳು ಮುಖ್ಯ ವಿಷಯಗಳು ಮತ್ತು ಮೂರು ಭಾಷೆಗಳು ಒಟ್ಟು ಸೇರಿ 10 ವಿಷಯಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.
ಇದನ್ನೂ ಓದಿ: CBSE Board Exam: ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ