Site icon Vistara News

Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ

Tirupati Temple

ಬೆಂಗಳೂರು: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚಂದ್ರಬಾಬು ನಾಯ್ಡು ಅವರು ಗುರುವಾರ ವಿಶ್ವ ಪ್ರಸಿದ್ಧ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ (Tirupati Temple) ಭೇಟಿ ನೀಡಿದರು. ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಈ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥಿಸಿದಿರು. ಈ ವೇಳೆ ಅವಉ ತಿರುಪತಿ-ತಿರುಮಲ ಆಡಳಿತವನ್ನು ಹಿಂದೂಗಳ ನಂಬಿಕೆಯಂತೆ ಶುದ್ಧೀಕರಿಸುವ ಪ್ರತಿಜ್ಞೆ ಮಾಡಿದರು. ಮಾಜಿ ಸಿಎಂ ಜಗನ್ ಆಡಳಿತವನ್ನು ಅಪವಿತ್ರಗೊಳಿಸಿದ್ದರು ಎಂಬುದನ್ನು ಅವರು ಬೊಟ್ಟು ಮಾಡಿದರು.

ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ವೆಂಕಟೇಶ್ವರ ದೇವಾಲಯದ ಮೇಲ್ವಿಚಾರಣೆ ನಡೆಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ತಿರುಮಲದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ‘ಹಿಂದೂ ಧರ್ಮ’ವನ್ನು ರಕ್ಷಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ನಾನು ತಿರುಮಲದ ಆಡಳಿತವನ್ನು ಸನಾತನ ಸಂಸ್ಕೃತಿ ಪ್ರಕಾರ ಶುದ್ಧೀಕರಣವನ್ನು ಪ್ರಾರಂಭಿಸುತ್ತೇನೆ. ತಿರುಮಲವನ್ನು ಅಪವಿತ್ರಗೊಳಿಸುವುದು ಸ್ವೀಕಾರಾರ್ಹವಲ್ಲ. ತಿರುಮಲದಲ್ಲಿ ಗೋವಿಂದನ ನಾಮ ಜಪ ಮಾತ್ರ ಉಳಿಯುತ್ತದೆ. ಅನ್ಯರ ನಂಬಿಕೆಗಳು ತೊಲಗುತ್ತವೆ ಎಂದು ಅವರು ಹೇಳಿದರು.

ವ್ಯಾಪಾರೀಕರಣ ಇಲ್ಲ

ತಿರುಪತಿ ದೇವಸ್ಥಾನ ಹಿಂದೂ ಧಾರ್ಮಿಕ ನಂಬಿಕೆ ಕೇಂದ್ರ. ಹಿಂದಿನ ರಾಜ್ಯ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನವವನ್ನು ವ್ಯಾಪಾರೀಕರಣಗೊಳಿಸುತ್ತು ಎಂದು ಅವರು ಆರೋಪಿಸಿದರು.

ಇಲ್ಲಿನ ಪ್ರಸಾದ ಉತ್ತಮ ಗುಣಮಟ್ಟದ್ದಾಗಿರಬೇಕು. ಅನಗತ್ಯವಾಗಿ ದರ ಹೆಚ್ಚಿಸಬಾರದು ಮತ್ತು ದರ್ಶನದ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಹಿಂದಿನ ಆಡಳಿತ ಈ ಧಾರ್ಮಿಕ ಸ್ಥಳವನ್ನು ಗಾಂಜಾ, ಮದ್ಯ ಮತ್ತು ಮಾಂಸಾಹಾರಿ ಆಹಾರದ ಕೇಂದ್ರವನ್ನಾಗಿ ಪರಿವರ್ತಿಸಿದ್ದರು. ಹೀಗಾಗಿ ಶುದ್ಧೀಕರಣವು ಟಿಟಿಡಿಯಿಂದ ಪ್ರಾರಂಭವಾಗುತ್ತದೆ ಎಂದು ನಾಯ್ಡು ಪ್ರತಿಪಾದಿಸಿದರು.

ಇದನ್ನೂ ಓದಿ: Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

2047ರ ವೇಳೆಗೆ ತೆಲುಗು ಜನರು ವಿಶ್ವದಲ್ಲೇ ನಂಬರ್ ಒನ್ ಆಗಲಿದ್ದಾರೆ. ನಾನು ಆಂಧ್ರಪ್ರದೇಶವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇನೆ. ಅಪರಾಧವನ್ನು ಸಹಿಸುವುದಿಲ್ಲ. ಅಪರಾಧಗಳನ್ನು ಮಾಡಿದ ನಂತರ ಕೆಲವರು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ರಾಜಕೀಯ ಪಿತೂರಿಗಳನ್ನು ಸಹಿಸುವುದಿಲ್ಲ. ನಾವು ಒಳ್ಳೆಯವರನ್ನು ರಕ್ಷಿಸುತ್ತೇವೆ” ಎಂದು ಟಿಡಿಪಿ ಮುಖ್ಯಸ್ಥರು ಹೇಳಿದರು.

ಪತ್ನಿ, ಮಗ ನಾರಾ ಲೋಕೇಶ್, ಸೊಸೆ ಮತ್ತು ಇತರ ಸಂಬಂಧಿಕರು ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಮುಖ್ಯಮಂತ್ರಿಗಳು ಗುರುವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದರು. ನಂತರ ರಸ್ತೆ ಮಾರ್ಗ ಮೂಲಕ ತಿರುಮಲಕ್ಕೆ ಪ್ರಯಾಣಿಸಿದರು. ಅಲ್ಲಿ ಅವರು ರಾತ್ರಿ ಕಳೆದರು. ಗುರುವಾರ ಮುಂಜಾನೆ, ಅವರು ಪವಿತ್ರ ಬೆಟ್ಟದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Exit mobile version