Site icon Vistara News

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Citroen C3 Aircross

ಬೆಂಗಳೂರು: ಸಿಟ್ರೋಯನ್​ ತನ್ನ ಮಧ್ಯಮ ಗಾತ್ರದ ಎಸ್​ಯುವಿ ಕಾರಾಗಿರುವ ಸಿ3 ಏರ್ ಕ್ರಾಸ್ (Citroen C3 Aircross) ಧೋನಿ ಎಡಿಷನ್ ಹೊಸ ವಿಶೇಷ ಆವೃತ್ತಿ ಹೊರತಂದಿದೆ. 11.82 ಲಕ್ಷ ರೂ.ಗಳ ಬೆಲೆ ಹೊಂದಿರುವ ಧೋನಿ ಎಡಿಷನ್ ಅನೇಕ ರೂಪಾಂತರಗಳು 5 ಮತ್ತು 7 ಸೀಟರ್​ ಕಾನ್ಫಿಗರೇಶನ್ ಗಳಲ್ಲಿ ಲಭ್ಯವಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ವಿಶೇಷ ಆವೃತ್ತಿಯ ಮಾದರಿಯು 100 ಯುನಿಟ್ ಗಳಿಗೆ ಸೀಮಿತವಾಗಿದೆ ಎಂಬುದೇ ವಿಶೇಷ. ಈ ಎಡಿಷನ್​ನಲ್ಲಿ ಸಿ3 ಏರ್ ಕ್ರಾಸ್ ಗಿಂತ ಸಣ್ಣ ಪ್ರಮಾಣದ ಇಂಟೀರಿಯರ್​ ಬದಲಾವಣೆ ಮಾಡಲಾಗಿದೆ.

ಸಿ3 ಏರ್ ಕ್ರಾಸ್ ಧೋನಿ ಆವೃತ್ತಿಯ ಹೊರಭಾಗದಲ್ಲಿ ಧೋನಿಯ ಹೆಸರು ಮತ್ತು ಅವರ ಜೆರ್ಸಿ ಸಂಖ್ಯೆ 7 ನೊಂದಿಗೆ ಹೊಸ ಡೆಕಾಲ್ ನೀಡಲಾಗಿದೆ. ಒಳಭಾಗದಲ್ಲಿ ಲಿಮಿಟೆಡ್ ರನ್​ ಮಾಡೆಲ್ ಆಗಿದ್ದು. ಹೊಸ ಬಣ್ಣ-ಸಂಯೋಜಿತ ಸೀಟ್ ಕವರ್ ಗಳು ಮತ್ತು ಕುಶನ್ ಪಿಲ್ಲೊ, ಸೀಟ್ ಬೆಲ್ಟ್ ಕುಶನ್ ಗಳು, ಹೆಚ್ಚು ಪ್ರಕಾಶಮಾನವಾಗಿರವು ಡೋರ್ ಸಿಲ್ ಪ್ಲೇಟ್ ಗಳು ಮತ್ತು ಮುಂಭಾಗದ ಡ್ಯಾಶ್ ಕ್ಯಾಮ್ ನೀಡಲಾಗಿದೆ.

ಪ್ರತಿ ಧೋನಿ ಎಡಿಷನ್​ ಕಾರಿನ ಗ್ಲೋವ್ ಬಾಕ್ಸ್​ನಲ್ಲಿ ವಿಶೇಷ ‘ಧೋನಿ ಗೂಡಿ’ ಒಳಗೊಂಡಿರುತ್ತದೆ ಎಂದು ಸಿಟ್ರನ್ ಹೇಳುತ್ತಾರೆ. ಅಂದರೆ ಅದೃಷ್ಟಶಾಲಿ ವಿಜೇತರು ಸ್ವತಃ ಧೋನಿಯಿಂದ ಸಹಿ ಮಾಡಿದ ಗ್ಲವ್ಸ್​​ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ

ಉಳಿದಂತೆ ಧೋನಿ ಆವೃತ್ತಿಯು ಸ್ಟ್ಯಾಂಡರ್ಡ್ ಸಿ 3 ಏರ್ ಕ್ರಾಸ್ ನಂತೆಯೇ ಇದೆ. ಇದು 110 ಬಿಹೆಚ್ ಪಿ, 1.2-ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ.

ಸಚಿನ್​ ಹೆಸರಿನ ಫಿಯೆಟ್​ ಕಾರು ಬಂದಿತ್ತು

ಖ್ಯಾತ ಕ್ರಿಕೆಟಿಗರೊಬ್ಬರು ಕಾರು ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2002 ರಲ್ಲಿ ಫಿಯೆಟ್ ತಂಡವು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕೈಜೋಡಿಸಿ ಪಾಲಿಯೋ ಎಸ್ 10 ಅನ್ನು ಹೊರತಂದಿತ್ತು. ಈ ಸೀಮಿತ ರನ್ ಮಾದರಿಯನ್ನು (ಕೇವಲ 500 ಮಾತ್ರ ಉತ್ಪಾದಿಸಲಾಗಿತ್ತು. ಪ್ರತಿಯೊಂದೂ ಅದರ ಸರಣಿ ಸಂಖ್ಯೆಯನ್ನು ಸೂಚಿಸುವ ಅಲ್ಯೂಮಿನಿಯಂ ಫಲಕವನ್ನು ಪಡೆದುಕೊಂಡಿತ್ತು ) ಹೊರಗೆ ಹಲವಾರು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಂದಿತ್ತಯ. ವಿಶೇಷ ಬಣ್ಣ ಮತ್ತು ಸಚಿನ್ ಅವರ ಆಟೋಗ್ರಾಫ್ ನಿಂದ ಹಿಡಿದು ಹಿಂಭಾಗದ ಸ್ಪಾಯ್ಲರ್ ಮತ್ತು ಹೊಸ ಅಲಾಯ್ ಚಕ್ರಗಳವರೆಗೆ ವಿಶೇಷತೆ ಇತ್ತು.

Exit mobile version