Site icon Vistara News

Lok Sabha Election : ಶುಕ್ರವಾರ ಮತದಾನ ಬೇಡ, ಮುಸ್ಲಿಮರಿಗೆ ತೊಂದರೆಯಾಗುತ್ತದೆ; ಕಾಂಗ್ರೆಸ್​ನಿಂದ ಪತ್ರ

Fact Check

Fact Check: Rs 350 will be deducted from bank account for not voting in Lok Sabha polls? Viral claim debunked

ನವದೆಹಲಿ: ಇಸ್ಲಾಂನಲ್ಲಿ ವಾರದ ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾದ ಶುಕ್ರವಾರದಂದು ದಕ್ಷಿಣ ರಾಜ್ಯಗಳಲ್ಲಿ ಮತದಾನ ನಿಗದಿ (Lok Sabha Election) ಮಾಡಿರುವುದು ಸರಿಯಿಲ್ಲ. ಇಲ್ಲೆಲ್ಲ ಚುನಾವಣೆ ದಿನಾಂಕವನ್ನು ಪರಿಷ್ಕರಿಸಬೇಕು ಎಮದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಚುನಾವಣಾ ಆಯೋಗವನ್ನು (ECI) ಒತ್ತಾಯಿಸಿದೆ. ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಚುನಾವಣಾ ಆಯೋಗಕ್ಕೆ ಜಂಟಿ ಪತ್ರ ಬರೆದಿದ್ದು, ಮುಸ್ಲಿಂ ಮತದಾರರಿಗೆ ಆಗುವ ತೊಂದರೆಗಳನ್ನು ಉಲ್ಲೇಖಿಸಿ ಮತದಾನದ ದಿನವನ್ನು ಏಪ್ರಿಲ್ 26 ರಿಂದ ಬದಲಾಯಿಸುವಂತೆ ವಿನಂತಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶುಕ್ರವಾರ ಅಥವಾ ಭಾನುವಾರ ಚುನಾವಣೆಗಳನ್ನು ನಡೆಸುವುದರಿಂದ ಮತದಾರರಿಗೆ ಮತ್ತು ಮತಗಟ್ಟೆ ಅಧಿಕಾರಿಗಳು ಮತ್ತು ಬೂತ್ ಏಜೆಂಟರಿಗೆ ಗಮನಾರ್ಹ ಅನಾನುಕೂಲತೆ ಉಂಟಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಕೇರಳದಲ್ಲಿ, ಶುಕ್ರವಾರ ಮತ್ತು ಭಾನುವಾರ (ಕ್ರಿಶ್ಚಿಯನ್ನರಿಗೆ) ವಿವಿd ಸಮುದಾಯಗಳಿಗೆ ಅನಾನುಕೂಲವಾಗುತ್ತದೆ. ಆದ್ದರಿಂದ ಮತದಾನದ ದಿನಾಂಕವನ್ನು ಬದಲಾಯಿಸಬೇಕೆಂದು ನಾವು ಒತ್ತಾಯಿಸಿದ್ದೇವೆ” ಎಂದು ಹಸನ್ ತಿಳಿಸಿದ್ದಾರೆ.

ನಾನು, ಕೇಂದ್ರ ಚುನಾವಣಾ ಆಯುಕ್ತರಿಗೆ, ಯುಡಿಎಫ್​ ಅಧ್ಯಕ್ಷರಿಗೆ, ವಿರೋಧ ಪಕ್ಷದ ನಾಯಕರಿಗೆ ಮೇಲ್​ ಮಾಡಿದ್ದೇನೆ. ಅವರೂ ಕೇಂದ್ರ ಚುನಾವಣಾ ಆಯುಕ್ತರಿಗೂ ಮೇಲ್ ಕಳುಹಿಸಿದ್ದಾರೆ ಎಂದು ಹಸನ್ ಹೇಳಿದ್ದಾರೆ.

ಈ ಹಿಂದೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕೇರಳ ಮತ್ತು ತಮಿಳುನಾಡಿನಲ್ಲಿ ಮತದಾನದ ದಿನಾಂಕಗಳನ್ನು ಬದಲಾಯಿಸುವಂತೆ ಕೋರಿ ಚುನಾವಣಾ ಆಯೋಗವನ್ನು ಸಂಪರ್ಕಿಸುವ ಉದ್ದೇಶವನ್ನು ವ್ಯಕ್ತಪಡಿಸಿತ್ತು. ಕೇರಳದಲ್ಲಿ ಕಾಂಗ್ರೆಸ್​ನ ಪ್ರಮುಖ ಮಿತ್ರ ಪಕ್ಷವಾದ ಐಯುಎಂಎಲ್, ದಕ್ಷಿಣದ ಎರಡು ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಬದಲಾಯಿಸಲು ಚುನಾವಣಾ ಆಯೋಗವನ್ನು ಸಂಪರ್ಕಿಸುವುದಾಗಿ ಹೇಳಿಕೊಂಡಿತ್ತು.

ಮತಗಟ್ಟೆ ಕರ್ತವ್ಯಕ್ಕೆ ಸಮಸ್ಯೆ

ಶುಕ್ರವಾರ ಮತದಾನ ಘೋಷಣೆಯಾಗುವುದರಿಂದ ಮತದಾರರು, ಅಭ್ಯರ್ಥಿಗಳು, ಮತಗಟ್ಟೆ ಏಜೆಂಟರು ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳಿಗೆ ಅನಾನುಕೂಲವಾಗಲಿದೆ. ನಾವು ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ ಎಂದು ಐಯುಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ.ಸಲಾಂ ಹೇಳಿದ್ದರು.

ಇದನ್ನೂ ಓದಿ Taranjit Singh Sandhu : ಬಿಜೆಪಿ ಸೇರಿದ ಅಮೆರಿಕದ ಮಾಜಿ ರಾಯಭಾರಿ ತರಣ್​ಜಿತ್​ ಸಿಂಗ್

2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗವು ಕಳೆದ ವಾರ ಪ್ರಕಟಿಸಿದ್ದು, ಇದು ಏಳು ಹಂತಗಳ ವ್ಯವಹಾರವಾಗಿದೆ. ಏಪ್ರಿಲ್ 19 ರಂದು ಮತದಾನ ಪ್ರಾರಂಭವಾಗಲಿದ್ದು, ಬೇಸಿಗೆಯ ಗರಿಷ್ಠ ತಿಂಗಳು ಜೂನ್ ವರೆಗೆ ವಿಸ್ತರಿಸಲಿದೆ.

Exit mobile version