Site icon Vistara News

Congress Spokesperson : ಅಪಮಾನ ಸಹಿಸಲಾರದೇ ಕಾಂಗ್ರೆಸ್​ ತ್ಯಜಿಸಿದ ರಾಷ್ಟ್ರೀಯ ವಕ್ತಾರ

Rohan Gupta

ಅಹ್ಮದಾಬಾದ್: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕಾಂಗ್ರೆಸ್​ಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ (Congress Spokesperson) ರೋಹನ್ ಗುಪ್ತಾ (Rohan Gupta) ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಇತರ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಅಹ್ಮದಾಬಾದ್ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಲೋಕಸಭಾ ಟಿಕೆಟ್ ಪಡೆದಿದ್ದ ಗುಪ್ತಾ ಅವರು ತಮ್ಮ ತಂದೆಯ ಅನಾರೋಗ್ಯದ ಕಾರಣ ನೀಡಿ ಸೋಮವಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಗುಪ್ತಾ, “ನಾನು ಈ ಮೂಲಕ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಅವರು ರಾಜೀನಾಮೆ ಪತ್ರದ ಪ್ರತಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಿರಂತರ ಅವಮಾನ’
ರೋಹನ್ ಗುಪ್ತಾ ಅವರು ಅವರು ತಮ್ಮ ಪೋಸ್ಟ್​ನಲ್ಲಿ ಬೇಸರದಿಂದ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. “ಕಳೆದ ಎರಡು ವರ್ಷಗಳಿಂದ ಪಕ್ಷದ ಸಂವಹನ ವಿಭಾಗಕ್ಕೆ ಸಂಬಂಧಿಸಿದ ಹಿರಿಯ ನಾಯಕರೊಬ್ಬರು ನಿರಂತರವಾಗಿ ಅವಮಾನ ಮತ್ತು ಚಾರಿತ್ರ್ಯ ಹರಣ ಮಾಡಿದ್ದಾರೆ ಎಂದು ನಿಮಗೆ ತಿಳಿಸಲು ನನಗೆ ತೀವ್ರ ನೋವಾಗಿದೆ.

“ನನ್ನ ವಿನಮ್ರತೆಯನ್ನು ನನ್ನ ದೌರ್ಬಲ್ಯವೆಂದು ಪರಿಗಣಿಸಬಾರದು. ನಾನು ನನ್ನ ಪಾಠಗಳನ್ನು ಕಠಿಣ ರೀತಿಯಲ್ಲಿ ಕಲಿತಿದ್ದೇನೆ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ : Financial Year End : ಮಾರ್ಚ್​​ ಕೊನೆಯೇ ಶನಿವಾರ, ಭಾನುವಾರ ಬ್ಯಾಂಕ್​ಗೆ ರಜೆ ಇಲ್ಲ; ಆರ್​ಬಿಐ ಆದೇಶ

“ಕಳೆದ ಎರಡು ವರ್ಷಗಳಿಂದ ನನ್ನನ್ನು ಅವಮಾನಿಸಿದ ವ್ಯಕ್ತಿ, ಕಳೆದ ಮೂರು ದಿನಗಳಲ್ಲಿ ಅದನ್ನೇ ಮುಂದುವರಿಸಿದ್ದಾರೆ. ಭವಿಷ್ಯದಲ್ಲಿ ಅವರು ಅದನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ. ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ನನಗೆ ಖಾತ್ರಿಯಿದೆ. ಆದರೆ ನನ್ನ ಆತ್ಮಗೌರವದ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

“ಅದೇ ನಾಯಕ ತನ್ನ ದುರಹಂಕಾರ ಮತ್ತು ಅಸಭ್ಯ ನಡವಳಿಕೆಯಿಂದ ಪಕ್ಷಕ್ಕೆ ಹಾನಿ ಮಾಡಿದ್ದಾರೆ. ಅವರ ತೀವ್ರ ಎಡಪಂಥೀಯ ಮನಸ್ಥಿತಿಯಿಂದಾಗಿ ಅವರು ಸನಾತನ ಧರ್ಮವನ್ನು ಅವಮಾನಿಸುವ ಬಗ್ಗೆ ಪಕ್ಷದ ಮೌನವನ್ನು ಒಪ್ಪಿಕೊಂಡಿದ್ದಾರೆ. ಅದು ನನಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ.

Exit mobile version