ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಯುಜಿ (NEET-UG) 2024ರ ಕೌನ್ಸೆಲಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗಲಿದೆ ಎಂದು ಎಂಸಿಸಿ ಸೋಮವಾರ ಹೊರಡಿಸಿದ ನೋಟಿಸ್ನಲ್ಲಿ ತಿಳಿಸಿದೆ. ಆದಾಗ್ಯೂ ಕೌನ್ಸೆಲಿಂಗ್ ಪ್ರಕ್ರಿಯೆಗೆ ನೋಂದಣಿ ಆಗಸ್ಟ್ ಮೊದಲ ವಾರದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್ ತಿಳಿಸಿದ್ದಾರೆ.
ಅಭ್ಯರ್ಥಿಗಳು ಇತ್ತೀಚಿನ ಸುದ್ದಿ ಮತ್ತು ವಿವರಣೆ ಮತ್ತು ಸೂಚನೆಗಳಿಗಾಗಿ ಎಂಸಿಸಿ ವೆಬ್ಸೈಟ್ಗೆ ಭೇಟಿ ನೀಡಲು ಸೂಚಿಸಲಾಗಿದೆ. ದೇಶಾದ್ಯಂತ ಸುಮಾರು 710 ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 1.10 ಲಕ್ಷ ಎಂಬಿಬಿಎಸ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಯಲಿದೆ. ಅಲ್ಲದೆ, ಆಯುಷ್ ಮತ್ತು ನರ್ಸಿಂಗ್ ಸೀಟುಗಳಲ್ಲದೆ 21,000 ಬಿಡಿಎಸ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಶ್ರೀನಿವಾಸ್ ಹೇಳಿದರು.
NEET UG COUNSELLING SCHEDULE 2024#neetcounselling2024 #neet #neetug #neetug2024 #neet2024 #mcc #counselling pic.twitter.com/xN5qVCpnKZ
— NEET COUNSELLING 2024 (@Admsarathi) July 29, 2024
ಅಖಿಲ ಭಾರತ ಕೋಟಾದ ಶೇ. 15ರಷ್ಟು ಸೀಟುಗಳು ಮತ್ತು ಎಲ್ಲ ಏಮ್ಸ್, ಜಿಪ್ಮರ್ ಪುದುಚೆರಿ, ಎಲ್ಲ ಕೇಂದ್ರೀಯ ವಿವಿ ಸೀಟುಗಳು ಮತ್ತು ಶೇ. 100ರಷ್ಟು ಡೀಮ್ಡ್ ವಿವಿ ಸೀಟುಗಳಿಗೆ ಎಂಸಿಸಿ ಕೌನ್ಸೆಲಿಂಗ್ ನಡೆಸಲಿದೆ.
ಪರೀಕ್ಷೆಯ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳು ಸೇರಿದಂತೆ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಶುಕ್ರವಾರ ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿತ್ತು