Site icon Vistara News

Baltimore Bridge : ಬಾಲ್ಟಿಮೋರ್ ಸೇತುವೆ ಕುಸಿಯಲು ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ಕಾರಣ?

Baltimore bridge collapse

ನ್ಯೂಯಾರ್ಕ್: ಅಮೆರಿಕದ ಬಾಲ್ಟಿಮೋರ್ ನ ಪ್ರಮುಖ ಸೇತುವೆಗೆ (Baltimore Bridge) ಮಂಗಳವಾರ ಮುಂಜಾನೆ ಡಿಕ್ಕಿ ಹೊಡೆದ ಸರಕು ಹಡಗಿನ (Commercial Ship) ಸಂಪೂರ್ಣ 22 ಸಿಬ್ಬಂದಿ ಭಾರತೀಯರು (Indian’s) ಎಂದು ಕಂಪನಿ ತಿಳಿಸಿದೆ. ಸಿಂಗಾಪುರ ಧ್ವಜ (Singapore Flag) ಹೊಂದಿರುವ ಕಂಟೈನರ್ ಹಡಗು “ಡಾಲಿ” ಸ್ಥಳೀಯ ಸಮಯ ಮುಂಜಾನೆ 1: 30 ರ ಸುಮಾರಿಗೆ ಬಾಲ್ಟಿಮೋರ್​ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಕಂಬವೊಂದಕ್ಕೆ ಡಿಕ್ಕಿ ಹೊಡೆದಿತ್ತು.

ಸಿನರ್ಜಿ ಮೆರೈನ್ ಗ್ರೂಪ್ ಒದಗಿಸಿದ ಹಡಗಿನ ಮಾಹಿತಿಯ ಪ್ರಕಾರ, ಸಿಬ್ಬಂದಿಗಳೆಲ್ಲರೂ ಭಾರತೀಯರಾಗಿದ್ದಾರೆ. “ಡಾಲಿ” 10,000 ಟಿಇಯು (10,000 20 ಅಡಿ ಉದ್ದದ ಕಂಟೈನರ್​ಗಳನ್ನು) ಸಾಮರ್ಥ್ಯ ಹೊಂದಿತ್ತು. ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಹಡಗಿನ ಮಾಲೀಕತ್ವವನ್ನು ಹೊಂದಿದೆ. ಹಡಗು ಬಾಲ್ಟಿಮೋರ್ ನಿಂದ ಕೊಲಂಬೊಗೆ ಹೊರಹೋಗುತ್ತಿತ್ತು.

ಸಿಂಗಾಪುರ ಧ್ವಜ ಹೊಂದಿರುವ ಕಂಟೇನರ್ ಹಡಗು “ಡಾಲಿ” ಬಾಲ್ಟಿಮೋರ್​ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಕಂಬಗಳಲ್ಲಿ ಒಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಹಡಗು ನಿರ್ವಹಣಾ ಕಂಪನಿ ಸಿನರ್ಜಿ ಮೆರೈನ್ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

ಇಬ್ಬರು ಪೈಲೆಟ್​ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಲೆಕ್ಕಹಾಕಲಾಗಿದೆ. ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಘಟನೆಯ ನಿಖರ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಲಾಗಿದೆ.

20 ಮಂದಿಯ ಸಾವು

ಉಕ್ಕಿನ ಸೇತುವೆಗೆ ನೌಕೆಯೊಂದು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಸಂಪೂರ್ಣವಾಗಿ (Baltimore bridge collapse) ನೀರುಗುರುಳಿದೆ. 20ಕ್ಕೂ ಅಧಿಕ ಮಂದಿ (Drowned) ನೀರುಪಾಲಾಗಿದ್ದಾರೆ.

ಇದನ್ನೂ ಓದಿ: Pakistan Terrorist : ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 5 ಚೀನೀ ಪ್ರಜೆಗಳ ಸಾವುa

ಡಿಕ್ಕಿಯ ರಭಸಕ್ಕೆ ಸೇತುವೆಯ ಮೇಲೆ ಚಲಿಸುತ್ತಿದ್ದ ಹಲವು ವಾಹನಗಳು ನೀರಿಗೆ ಬಿದ್ದಿವೆ. ಕನಿಷ್ಠ ಇಪ್ಪತ್ತು ಜನರು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಡುರಾತ್ರಿ ಈ ಘಟನೆ ನಡೆದ ಕಾರಣ ಸೇತುವೆಯ ಮೇಲೆ ಹೆಚ್ಚಿನ ವಾಹನಗಳು ಇರಲಿಲ್ಲ. ಜನದಟ್ಟಣೆಯ ಸಮಯದಲ್ಲಿ ಈ ಘಟನೆ ಸಂಬಂಧಿಸಿದ್ದರೆ ನೂರಾರು ಜನರ ಸಾವುನೋವು ಸಂಭವಿಸುವ ಸಾಧ್ಯತೆಯಿತ್ತು.

ವೈರಲ್‌ ಆಗಿರುವ ವಿಡಿಯೋದಲ್ಲಿ, ದೊಡ್ಡ ಹಡಗು ಸೇತುವೆಗೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಸೋಶಿಯಲ್ ಮೀಡಿಯಾ ಸೈಟ್ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ತುಣುಕಿನ ಪ್ರಕಾರ, ಸೇತುವೆ ಭಗ್ನಗೊಂಡು ಮುಳುಗುವ ಮೊದಲು ಬೆಂಕಿ ಹೊತ್ತಿಕೊಂಡಿತು. ಮತ್ತು ಅನೇಕ ವಾಹನಗಳು ಪಟಾಪ್ಸ್ಕೋ ನದಿಗೆ ಬೀಳುತ್ತಿರುವುದು ಕಂಡುಬಂದಿತು.

ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಸಂವಹನ ನಿರ್ದೇಶಕ ಕೆವಿನ್ ಕಾರ್ಟ್‌ರೈಟ್ ಪ್ರಕಾರ, ಕನಿಷ್ಠ ಇಪ್ಪತ್ತು ಜನರಿಗಾಗಿ ನೀರಿನಲ್ಲಿ ಹುಡುಕಾಟ ನಡೆದಿದೆ. ಸ್ಥಳೀಯ ಸಮಯ ರಾತ್ರಿ 1:30ರ ವೇಳೆಗೆ ಈ ಘಟನೆ ನಡೆದಿದೆ. ಬಾಲ್ಟಿಮೋರ್‌ನಿಂದ ಹೊರಹೋಗುತ್ತಿದ್ದ ಹಡಗು ಸೇತುವೆಯ ನಡುವಿನ ಸ್ತಂಭ ಹಾಗೂ ಮೇಲಿನ ಕಮಾನಿಗೆ ಬಡಿದು ಅದು ಕುಸಿಯಲು ಕಾರಣವಾಯಿತು. ಆ ಸಮಯದಲ್ಲಿ ಸೇತುವೆಯ ಮೇಲೆ ಹಲವಾರು ವಾಹನಗಳು ಇದ್ದವು. ಅದರಲ್ಲಿ ಒಂದು ಟ್ರಾಕ್ಟರ್-ಟ್ರೇಲರ್ ಕೂಡ ಸೇರಿದೆ.

ಶಿಪ್ ಮಾನಿಟರಿಂಗ್ ವೆಬ್‌ಸೈಟ್ MarineTraffic ಮಂಗಳವಾರ ಮುಂಜಾನೆ ಸೇತುವೆಯ ಕೆಳಗೆ ನಿಲ್ಲಿಸಿದ ಡಾಲಿ ಎಂಬ ಸಿಂಗಾಪುರದ ಧ್ವಜದ ಕಂಟೈನರ್ ಹಡಗನ್ನು ತೋರಿಸಿದೆ. I-695 ಕೀ ಬ್ರಿಡ್ಜ್‌ ಕುಸಿದ ಪರಿಣಾಮ ಇಲ್ಲಿ ಹಾದುಹೋಗುವ ಎಲ್ಲಾ ಲೇನ್‌ಗಳನ್ನು ಎರಡೂ ದಿಕ್ಕುಗಳಲ್ಲಿ ಮುಚ್ಚಲಾಗಿದೆ ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಬಾಲ್ಟಿಮೋರ್‌ ಮುನ್ಸಿಪಲ್ ನಗರದ ನೈಋತ್ಯಕ್ಕೆ ಇರುವ ಪಟಾಪ್ಸ್ಕೋ ನದಿಗೆ ಅಡ್ಡಲಾಗಿ ಈ ನಾಲ್ಕು-ಲೇನ್ ಸೇತುವೆಯನ್ನು ಕಟ್ಟಲಾಗಿತ್ತು. ಇದು 1.6 ಮೈಲಿ (2.6-ಕಿಲೋಮೀಟರ್) ಉದ್ದವಿದೆ. 1977ರಲ್ಲಿ ಕಟ್ಟಲಾಗಿದ್ದ ಇದರ ಮೇಲೆ ವರ್ಷಕ್ಕೆ 1.10 ಕೋಟಿ ವಾಹನಗಳು ಓಡಾಡುತ್ತಿದ್ದವು. ಇದು ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಜಾಲದ ಪ್ರಮುಖ ಭಾಗ. ಬಾಲ್ಟಿಮೋರ್‌, ರಾಜಧಾನಿ ವಾಷಿಂಗ್ಟನ್ DCಯ ಪಕ್ಕದಲ್ಲಿರುವ ಅಮೆರಿಕದ ಪೂರ್ವ ಕರಾವಳಿಯ ಕೈಗಾರಿಕಾ ನಗರವಾಗಿದೆ.

Exit mobile version