Site icon Vistara News

Lok Sabha Election : ತಮಿಳು ನಟ ನಟ ಶರತ್ ಕುಮಾರ್ ಪಕ್ಷ ಬಿಜೆಪಿಯಲ್ಲಿ ವಿಲೀನ

Actor Shart kumar

ಚೆನ್ನೈ: ಹಿರಿಯ ನಟ ಆರ್.ಶರತ್ ಕುಮಾರ್ ಅವರು ತಮ್ಮ ಅಖಿಲ ಭಾರತ ಸಮತ್ವ ಮಕ್ಕಳ್ ಕಚ್ಚಿ (ಎಐಎಸ್ಎಂಕೆ) ಪಕ್ಷವನ್ನು ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಸಮ್ಮುಖದಲ್ಲಿ ಚೆನ್ನೈನ ಅವರ ಹಿಂದಿನ ಕಚೇರಿಯಲ್ಲಿ ವಿಲೀನ ಪ್ರಕ್ರಿಯೆ ನಡೆಯಿತು. ಸೋಮವಾರ ಎಐಎಸ್​ಎಂಕೆ ಬಿಜೆಪಿ ಜತೆ ಲೋಕ ಸಭಾ ಚುನಾವಣೆಗೆ (Lok Sabha Election) ಮೈತ್ರಿ ಮಾಡಿಕೊಂಡಿತ್ತು. ಒಂದೇ ದಿನದಲ್ಲಿ ಪಕ್ಷವನ್ನು ವಿಲೀನ ಮಾಡಲಾಗಿದೆ.

“ನಾನು ಸಾಕಷ್ಟು ಆತ್ಮಾವಲೋಕನದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಕಾರ್ಯಕರ್ತರು ಏನು ಹೇಳುತ್ತಾರೆಂದು ನನಗೆ ಭಯವಿತ್ತು. ಅವರನ್ನು ಮನವರಿಕೆ ಮಾಡಲಾಗಿದೆ ಎಂದು ನನಗೆ ಸಂತೋಷವಾಗಿದೆ. ಮೈತ್ರಿ ಬಯಸುವ ಮತ್ತು ಸ್ಥಾನಗಳನ್ನು ಕೇಳುವ ಬದಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಏಕೆ ಸಂಪೂರ್ಣ ಬೆಂಬಲವನ್ನು ನೀಡಬಾರದು ಎಂದು ನಾನು ಯೋಚಿಸಿದೆ” ಎಂದು ಶರತ್ ಕುಮಾರ್ ವಿಲೀನದ ಬಳಿಕ ಮಾತನಾಡಿದ್ದಾರೆ.

2001ರಲ್ಲಿ ಡಿಎಂಕೆ ಪಕ್ಷದ ಬೆಂಬಲದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ಎಐಎಡಿಎಂಕೆಯಲ್ಲಿ ಕೆಲಸ ಮಾಡಿದ ನಂತರ, ಅವರು 2007 ರಲ್ಲಿ ತಮ್ಮದೇ ಆದ ಎಐಎಸ್ಎಂಕೆ ಪಕ್ಷವನ್ನು ಪ್ರಾರಂಭಿಸಿದ್ದರು. 2011ರಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ತೆಂಕಾಸಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಶರತ್​ಕುಮಾರ್​ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಅಣ್ಣಾಮಲೈ, “ಶರತ್ ಕುಮಾರ್ ಈಗ ಮುಖ್ಯವಾಹಿನಿಯ ರಾಜಕೀಯದಲ್ಲಿ ರಾಷ್ಟ್ರೀಯ ಪಾತ್ರವನ್ನು ಹೊಂದಲಿದ್ದಾರೆ” ಎಂದು ಹೇಳಿಕೊಂಡರು. ಪ್ರಬಲ ನಾಡಾರ್ ಸಮುದಾಯಕ್ಕೆ ಸೇರಿದ ಶರತ್ ಕುಮಾರ್ ಅವರ ವಿಲೀನವು ಬಿಜೆಪಿಗೆ ವಿಶೇಷವಾಗಿ ತಮಿಳುನಾಡು ದಕ್ಷಿಣ ಜಿಲ್ಲೆಗಳಲ್ಲಿ ಅವರ ಸಮುದಾಯದ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ.

ಈ ನಿರ್ಧಾರ ಎರಡು ಅಗಲಿನ ಖಡ್ಗ ಎಂದು ಕೆಲವರು ಬಣ್ಣಿಸಿದ್ದಾರೆ. ಅವರ ನಿರ್ಧಾರದಿಂದಾಗಿ ದ್ರಾವಿಡ ಹೃದಯಭಾಗದಲ್ಲಿಯೂ ಹಿನ್ನಡೆಯಾಗಬಹುದು ಎಂದಿದ್ದಾರೆ. ಈ ಬೆಳವಣಿಗೆಯು ಅವರ ಪಕ್ಷದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಕಂಡಿತು.

ಇದನ್ನು ಓದಿ : Citizenship Amendment Act : ಸಿಎಎ ಜಾರಿಯಿಂದ ಮುಸ್ಲಿಂ ವಲಸಿಗರಿಗೆ ಸಮಸ್ಯೆಯಿದೆಯೇ? ಸರ್ಕಾರ ಹೇಳಿದ್ದೇನು?

ಮಹಿಳೆಯೊಬ್ಬರು ” ಇದನ್ನು ನಂಬಲು ಕಷ್ಟ ಆದರೆ ನಾನು ಶರತ್ ಕುಮಾರ್ ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ” ಎಂದು ಕಣ್ಣೀರು ಹಾಕಿರುವು ಪ್ರಸಂಗ ನಡೆದಿದೆ. ಇನ್ನೊಬ್ಬರು ಶರತ್​ ಕುಮಾರ್​ ಅವರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಶೇಕಡಾ 3 ಕ್ಕಿಂತ ಕಡಿಮೆ ಮತಗಳನ್ನು ಹೊಂದಿರುವ ಬಿಜೆಪಿಗೆ ಎಐಎಡಿಎಂಕೆ ನಿರ್ಗಮನದ ನಂತರ ಇನ್ನೂ ಪ್ರಮುಖ ಮಿತ್ರ ಪಕ್ಷವನ್ನು ಕಂಡುಕೊಂಡಿಲ್ಲ. ಇಲ್ಲಿಯವರೆಗೆ, ಜಿಕೆ ವಾಸನ್ ಅವರ ಟಿಎಂಸಿ ಮಾತ್ರ ಬಿಜೆಪಿ ಜತೆ ಕೈಜೋಡಿಸಿದೆ. ಪಕ್ಷವು ಪಿಎಂಕೆ ಮತ್ತು ದಿವಂಗತ ನಟ ವಿಜಯಕಾಂತ್ ಅವರ ಡಿಎಂಡಿಕೆಯೊಂದಿಗೆ ಮಾತುಕತೆ ನಡೆಸುತ್ತಿದೆ.

Exit mobile version