ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ಯೋಜನೆಯಡಿ ಕೆವೈಸಿ ಅಪ್ಡೇಟ್ ಮಾಡಲು (FASTag KYC) ನೀಡಿದ್ದ ಗಡುವನ್ನು ಮಾರ್ಚ್ 31, 2024 ರವರೆಗೆ ವಿಸ್ತರಿಸಿದೆ. ಪೇಟಿಎಂ ಫಾಸ್ಟ್ಟ್ಯಾಗ್ ಬಳಕೆದಾರರು ಎದುರಿಸುತ್ತಿರುವ ಸವಾಲುಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರಿಣಾಮವಾಗಿ, ಫಾಸ್ಟ್ಟ್ಯಾಗ್ ಬಳಕೆದಾರರು ಈಗ ನಿಮ್ಮ ಕೆವೈಸಿ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿ ತಿಂಗಳು ಪಡೆದುಕೊಂಡಿದ್ದಾರೆ.
ಮಾರ್ಚ್ 1 ರ ಒಳಗೆ ಕೆವೈಸಿ ಮಾಡುವಂತೆ ಪ್ರಾಧಿಕಾರ ಸೂಚಿಸಿತ್ತು. ‘ಒನ್ ವೆಹಿಕಲ್, ಒನ್ ಫಾಸ್ಟ್ಯಾಗ್’ ಯೋಜನೆ ಮೂಲಕ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ ) ತಂತ್ರಜ್ಞಾನದ ಮೂಲಕ ಟೋಲ್ ಸಂಗ್ರಹ ಮಾಡುವ ಕಾರ್ಯದ ದಕ್ಷತೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿತ್ತ. ಇದರ ಮೂಲಕ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ ಟೋಲ್ ಹಣವ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತಿತ್ತು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಟೋಲ್ ಪಾವತಿ ಅನುಭವವನ್ನು ಪಡೆಯಲು ಕೆವೈಸಿ ಅಪ್ಡೇಟ್ ಮಾಡಲೇಬೇಕೆಂದು ಹೆದ್ದಾರಿ ಪ್ರಾಧಿಕಾರ ಹೇಳಿದೆ. ವಾಣಿಜ್ಯ ಅಥವಾ ಖಾಸಗಿ ವಾಹನಗಳೇ ಆಗಿರಲಿ, ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಯಾವುದೇ ಅಡೆತಡೆಗಳನ್ನು ತಪ್ಪಿಸಲು ಕೆವೈಸಿ ಅಪ್ಡೇಟ್ ಕಡ್ಡಾಯ ಎಂದ ಹೇಳಿತ್ತು. ಇದೀಗ ಅದನ್ನು ಮಾರ್ಚ್ 31 ರ ಪರಿಷ್ಕೃತ ದಿನಾಂಕಕ್ಕೆ ವಿಸ್ತಿರಿಸಿದೆ. ಕೆವೈಸಿ ವಿವರಗಳನ್ನು ನವೀಕರಿಸಲು ವಿಫಲವಾದರೆ ಫಾಸ್ಟ್ಟ್ಯಾಗ್ ಖಾತೆ ನಿಷ್ಕ್ರಿಯಗೊಳ್ಳಲಿದೆ.
ಯಾವ ದಾಖಲೆಗಳು ಸಾಕು?
ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡಲು ವಾಹನ ಮಾಲೀಕರು ವಾಹನ ನೋಂದಣಿ ಪ್ರಮಾಣಪತ್ರ, ಚಾಲನಾ ಪರವಾನಗಿ ಮತ್ತು ಪ್ಯಾನ್ ಅಥವಾ ಮತದಾರರ ಗುರುತಿನ ಚೀಟಿಯಂತಹ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ : LPG Price: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಶಾಕ್, 25.50 ರೂ.ಗಳಷ್ಟು ಏರಿಕೆ
ಹೆಚ್ಚುವರಿಯಾಗಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಮತ್ತು ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳಂತಹ ವಿಳಾಸ ಪುರಾವೆಗಳು ಬೇಕಾಗುತ್ತವೆ. ಬ್ಯಾಂಕ್-ಲಿಂಕ್ಡ್ ಅಥವಾ ವಿತರಣಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ, ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ, ‘ಮೈ ಪ್ರೊಫೈಲ್’ ವಿಭಾಗಕ್ಕೆ ನ್ಯಾವಿಗೇಟ್ ಮಾಡುವ ಮೂಲಕ, ‘ಕೆವೈಸಿ’ ಉಪ-ವಿಭಾಗವನ್ನು ಕ್ಲಿಕ್ ಮಾಡುವ ಮೂಲಕ ಮತ್ತು ಕಡ್ಡಾಯ ದಾಖಲೆಗಳನ್ನು ಸಲ್ಲಿಸಬೇಕು. ಅಗತ್ಯವಿರುವ ಎಲ್ಲಾ ವಿಭಾಗವನ್ನು ಅಪ್ಡೇಟ್ ಮಾಡಿ ಕೆವೈಸಿ ನವೀಕರಣವನ್ನು ಪೂರ್ಣಗೊಳಿಸಬಹುದು.
ವೆರಿಫಿಕೇಷನ್ ಆಗಿದೆಯೇ ಎಂದು ನೋಡಲು ಫಾಸ್ಟ್ಟ್ಯಾಗ್ ನೀಡುವ ಪ್ರಾಧಿಕಾರದ ಮೂಲಕ ಲಾಗಿನ್ ಆಗುವ ಅಥವಾ ಅಧಿಕೃತ ಫಾಸ್ಟ್ಯಾಗ್ ವೆಬ್ಸೈಟ್ಗೆ ಭೇಟಿ ನೀಡಬಹುದು.