Site icon Vistara News

K Kavitha : ಮಾರ್ಚ್​​ 23ರವರೆಗೆ ಕೆ. ಕವಿತಾ ಸಿಬಿಐ ಕಸ್ಟಡಿಗೆ, ಡೆಲ್ಲಿ ಕೋರ್ಟ್​​ ಆದೇಶ

K Kavita

ನವದೆಹಲಿ: ಬಿಆರ್​ಎಸ್​​ ಮುಖಂಡರಾದ ಕೆ. ಕವಿತಾ (K Kavitha ) ಅವರನ್ನು ಮಾರ್ಚ್ 23 ರವರೆಗೆ ಜಾರಿ ನಿರ್ದೇಶನಾಲಯಕ್ಕೆ (ED Arrest) ಕಸ್ಟಡಿಗೆ ದೆಹಲಿ ನ್ಯಾಯಾಲಯವು (Delhi Court) ಒಪ್ಪಿಸಿದೆ. ದೆಹಲಿ ಮದ್ಯ ನೀತಿ (Delhi Excise Policy) ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಇಡಿ ಕವಿತಾ ಅವರನ್ನು ಶುಕ್ರವಾರ ಬಂಧಿಸಿತ್ತು.

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರನ್ನು ಬಂಧಿಸಿದ ನಂತರ ಕೇಂದ್ರ ತನಿಖಾ ಸಂಸ್ಥೆ, ರೂಸ್ ಅವೆನ್ಯೂ ನ್ಯಾಯಾಲಯದ ಕರೆತಂದು 10 ದಿನಗಳ ಕಾಲ ಕಸ್ಟಡಿಗೆ ಕೋರಿತ್ತು. ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು 23ರವರೆಗೆ ಕಸ್ಟಡಿಗೆ ಒಪ್ಪಿಸಿದ್ದಾರೆ. ತೆಲಂಗಾಣ ವಿಧಾನ ಪರಿಷತ್ ಸದಸ್ಯರಾಗಿರುವ ಕವಿತಾ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಶುಕ್ರವಾರ ಸಂಜೆ 5: 20 ಕ್ಕೆ ಹೈದರಾಬಾದ್​ನ ಬಂಜಾರಾ ಹಿಲ್ಸ್​ನಲ್ಲಿರುವ ಅವರ ಮನೆಯಿಂದ ಬಂಧಿಸಿದೆ.

ಬಂಧನ್ಕಕೆ ಮುನ್ನ ಕವಿತಾ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಮದ್ಯ ನೀತಿ ಹಗರಣ ಪ್ರಕರಣದಲ್ಲಿ ತನ್ನ ಬಂಧನವನ್ನು ‘ಕಾನೂನುಬಾಹಿರ’ ಎಂದು ಬಣ್ಣಿಸಿದ್ದರು. ಇದು ‘ಕಪೋಲಕಲ್ಪಿತ ಪ್ರಕರಣ’ ಎಂದು ಬಿಆರ್​ಎಸ್​​ ಎಮ್ಎಲ್​ಸಿ ಹೇಳಿದ್ದರು.

“ಈ ಬಂಧನ ಕಾನೂನು ಬಾಹಿರ. ನಾವು ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತೇವೆ” ಎಂದು ಕೆ ಕವಿತಾ ಅವರನ್ನು ನ್ಯಾಯಾಲಯಕ್ಕೆ ಕರೆತರುವಾಗಲೂ ಹೇಳಿದ್ದಾರೆ. ಕವಿತಾ ಅವರ ಹಿರಿಯ ವಕೀಲ ವಿಕ್ರಮ್ ಚೌಧರಿ ಬಂಧನದ ವಿರುದ್ಧ ಮಾತನಾಡಿದ್ದು. ಇದು ಅಧಿಕಾರದ ಸ್ಪಷ್ಟ ದುರುಪಯೋಗ” ಎಂದು ಆರೋಪಿಸಿದ್ದಾರೆ.

ಕಳೆದ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಗೆ ಮೌಖಿಕವಾಗಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ಬಂಧನ ಮಾಡುವಂತಿಲ್ಲ. ಸಮನ್ಸ್ ವಿರುದ್ಧದ ಅರ್ಜಿಯಲ್ಲಿ ಕವಿತಾ ಅವರನ್ನು “ಮುಂದಿನ ವಿಚಾರಣೆಯ ದಿನಾಂಕದವರೆಗೆ” ಕರೆಸದಿರಲು ಕೇಂದ್ರ ತನಿಖಾ ಸಂಸ್ಥೆ ಒಪ್ಪಿಕೊಂಡಿತ್ತು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Lok Sabha Election : ಚುನಾವಣಾ ಬಾಂಡ್​; ಪೂರ್ಣ ಮಾಹಿತಿ ಕೊಡದ ಎಸ್​ಬಿಐಗೆ ಸುಪ್ರೀಂ ತಪರಾಕಿ

“ನಿಮ್ಮ ಇಡೀ ಕ್ರಮ ತಪ್ಪು. ಇದು ನಾಚಿಕೆಗೇಡಿನ ಬಂಧನ” ಎಂದು ಚೌಧರಿ ವಾದಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಲ್ಲಿ ದಾಖಲಿಸಿದ ಮೌಖಿಕ ಭರವಸೆಯನ್ನು ಇಡಿ ಉಲ್ಲಂಘಿಸಿದೆ ಎಂದು ಒತ್ತಿ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ದೋಷಾರೋಪ ಪಟ್ಟಿ ಪ್ರಕಾರ, ದೆಹಲಿ ಅಬಕಾರಿ ನೀತಿಯಡಿ ಪಡೆದ ಪ್ರಯೋಜನಗಳಿಗೆ ಪ್ರತಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ 100 ಕೋಟಿ ರೂ.ಗಳ ಲಂಚವನ್ನು ನೀಡಿದ ‘ಸೌತ್ ಗ್ರೂಪ್’ ನಲ್ಲಿ ಕವಿತಾ ಅವರ ಪಾಲಿದೆ ಹೇಳಲಾಗಿದೆ. ಕವಿತಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಇಡಿ ನೋಟಿಸ್​​​ಗಳನ್ನು “ಮೋದಿ ನೋಟಿಸ್” ಎಂದು ಆರೋಪಿಸಿದ್ದಾರೆ. ವಿಶೇಷವೆಂದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ವಿಜಯ್ ನಾಯರ್ ಈಗಾಗಲೇ ಜೈಲಿನಲ್ಲಿದ್ದಾರೆ.

Exit mobile version