Site icon Vistara News

Delhi excise policy Case: ಆಪ್‌ಗೆ 25 ಕೋಟಿ ಲಂಚ ನೀಡಲು ಒತ್ತಾಯಿಸಿದ್ದ ಕವಿತಾ: ಸಿಬಿಐ ಆರೋಪ

Posters with BL Santosh Photo Called As wanted criminal seen at Hyderabad

ಹೊಸದಿಲ್ಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯಡಿ (Delhi excise policy) ಮಾಡಿಕೊಡಲಾದ ಲಾಭಗಳಿಗಾಗಿ ಆಮ್ ಆದ್ಮಿ ಪಕ್ಷಕ್ಕೆ (Aam Admi party) 25 ಕೋಟಿ ರೂಪಾಯಿ ನೀಡುವಂತೆ ಅರಬಿಂದೋ ಫಾರ್ಮಾ ಪ್ರಮೋಟರ್ ಶರತ್ ಚಂದ್ರ ರೆಡ್ಡಿ ಅವರಿಗೆ ಬಿಆರ್‌ಎಸ್ (BRS) ನಾಯಕಿ ಕೆ.ಕವಿತಾ (K Kavitha) ಬೆದರಿಕೆ ಹಾಕಿದ್ದರು ಎಂದು ಸಿಬಿಐ (CBI) ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಹೊಸ ನೀತಿಯಡಿ ಅರಬಿಂದೋ ಫಾರ್ಮಾ ಸಂಸ್ಥೆಗೆ ಮಂಜೂರು ಮಾಡಿರುವ ಐದು ಚಿಲ್ಲರೆ ವಲಯಗಳಿಗೆ ಸಂಬಂಧಿಸಿ ಹಣ ನೀಡುವಂತೆ ಆಕೆ ಒತ್ತಾಯಿಸಿದ್ದಳು. ಹಣ ಪಾವತಿ ಮಾಡದಿದ್ದಲ್ಲಿ ಅಬಕಾರಿ ನೀತಿಯಡಿ (Delhi excise policy) ತೆಲಂಗಾಣ ಮತ್ತು ದೆಹಲಿಯಲ್ಲಿ ಸಂಸ್ಥೆಯ ವ್ಯವಹಾರಕ್ಕೆ ಹಾನಿಯಾಗುತ್ತದೆ ಎಂದು ಕವಿತಾ ರೆಡ್ಡಿ ಬೆದರಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪಿಎಂಎಲ್‌ಎ ಪ್ರಕರಣದಡಿ ಆರೋಪಿಯಾಗಿದ್ದ ರೆಡ್ಡಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದರು. ಅವರ ವಿರುದ್ಧ ಸಿಬಿಐ ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಕವಿತಾ ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸಲು ಕೋರಿದ ಸಿಬಿಐ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರನ್ನು ಕೋರಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರ ಒತ್ತಾಯ ಮತ್ತು ಭರವಸೆಯಿಂದಲೇ ರೆಡ್ಡಿ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯವಹಾರದಲ್ಲಿ ಭಾಗವಹಿಸಿದ್ದಾರೆ ಎಂದು ಸಿಬಿಐ ದೂರಿದೆ.

ದೆಹಲಿ ಸರ್ಕಾರದಲ್ಲಿ ತನಗೆ ಸಂಪರ್ಕವಿದೆ ಮತ್ತು ಹೊಸ ಅಬಕಾರಿ ನೀತಿಯ ಅಡಿಯಲ್ಲಿ ದೆಹಲಿಯಲ್ಲಿ ಮದ್ಯದ ವ್ಯವಹಾರದಲ್ಲಿ ರೆಡ್ಡಿಗೆ ಸಹಾಯ ಮಾಡುವುದಾಗಿ ಕವಿತಾ ಭರವಸೆ ನೀಡಿದ್ದರು ಎನ್ನಲಾಗಿದೆ. “ಮದ್ಯದ ವ್ಯಾಪಾರವನ್ನು ಪಡೆಯಲು ಸಗಟು ವ್ಯಾಪಾರಕ್ಕೆ 25 ಕೋಟಿ ರೂಪಾಯಿ ಮತ್ತು ಪ್ರತಿ ಚಿಲ್ಲರೆ ವಲಯಕ್ಕೆ 5 ಕೋಟಿ ರೂಪಾಯಿಗಳ ಮುಂಗಡ ಹಣದ ಪಾವತಿಯನ್ನು ಆಮ್ ಆದ್ಮಿ ಪಕ್ಷಕ್ಕೆ ಮಾಡಲಾಗುವುದು ಎಂದು ಕವಿತಾ, ಶರತ್ ಚಂದ್ರ ರೆಡ್ಡಿಗೆ ತಿಳಿಸಿದ್ದರು. ಆಕೆಯ ಸಹಚರರಾದ ಅರುಣ್ ಆರ್. ಪಿಳ್ಳೈ ಮತ್ತು ಅಭಿಷೇಕ್ ಬೋಯಿನ್ಪಲ್ಲಿ ಅವರಿಗೆ ಇದನ್ನು ಪಾವತಿಸಲಾಗಿದೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಪ್ರತಿನಿಧಿಯಾಗಿದ್ದ ವಿಜಯ್ ನಾಯರ್ ಅವರೊಂದಿಗೆ ಸಮನ್ವಯ ಸಾಧಿಸಿದ್ದರು,” ಎಂದು ಸಿಬಿಐ ಆರೋಪಿಸಿದೆ.

ಇದಕ್ಕೂ ಮುನ್ನ ದೆಹಲಿ ನ್ಯಾಯಾಲಯವು ಕೆ. ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಏಪ್ರಿಲ್ 15ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಿದೆ. ಮಾರ್ಚ್ ಮತ್ತು ಮೇ 2021ರಲ್ಲಿ, ಅಬಕಾರಿ ನೀತಿಯನ್ನು ರೂಪಿಸುವಾಗ, ಕವಿತಾ ಅವರ ಸಹಚರರಾದ ಅರುಣ್ ಆರ್ ಪಿಳ್ಳೈ, ಅಭಿಷೇಕ್ ಬೋನಪಲ್ಲಿ ಮತ್ತು ಬುಚ್ಚಿಬಾಬು ಗೋರಂಟ್ಲಾ ಅವರು ದೆಹಲಿಯ ಹೋಟೆಲ್ ಒಬೆರಾಯ್‌ನಲ್ಲಿ ಡೀಲ್‌ಗಳನ್ನು ಕುದುರಿಸಿದ್ದರು.

2021ರ ಜುಲೈನಲ್ಲಿ 7 ಕೋಟಿ ಮತ್ತು 2021ರ ನವೆಂಬರ್ ಮಧ್ಯದಲ್ಲಿ ಏಳು ಕೋಟಿ ರೂ.ಗಳನ್ನು ಬ್ಯಾಂಕ್ ವಹಿವಾಟಿನ ಮೂಲಕ ಆಕೆಗೆ ಒಟ್ಟು 14 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಸಿಬಿಐ ಹೇಳಿದೆ. 2021ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ರೆಡ್ಡಿ ಅವರಿಗೆ ಮಂಜೂರು ಮಾಡಿದ ಐದು ಚಿಲ್ಲರೆ ವಲಯಗಳಿಗೆ ಪ್ರತಿ ವಲಯಕ್ಕೆ ಐದು ಕೋಟಿ ರೂಪಾಯಿಗಳಂತೆ 25 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ಕೇಳಿಕೊಂಡರು ಕವಿತಾ ಆಗ್ರಹಿಸಿದತರು ಸಿಬಿಐ ಆರೋಪಿಸಿದೆ.

ಇದನ್ನೂ ಓದಿ: K Kavitha : ತಿಹಾರ್​ ಜೈಲಿನಿಂದಲೇ ಕವಿತಾ ಅರೆಸ್ಟ್​​; ಇದೀಗ ಸಿಬಿಐ ಸರದಿ

Exit mobile version