Site icon Vistara News

ಬುರ್ಖಾ ಧರಿಸಿ ತಮ್ಮ ಮನೆಯಲ್ಲೇ ಚಿನ್ನ, ದುಡ್ಡು ಕದ್ದ ಮಹಿಳೆ! ಯಾವ ಸೇಡಿಗಾಗಿ ಇಂಥ ಕೃತ್ಯ?

Woman

Delhi Woman Robs Own Home, Steals Jewellery Meant For Sister's Wedding

ನವದೆಹಲಿ: ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಪೊಸೆಸಿವ್‌ನೆಸ್‌ (Possessiveness) ಜಾಸ್ತಿ ಇರುತ್ತದೆ. ತಂದೆ-ತಾಯಿ, ಪತಿ, ಮಕ್ಕಳು, ಸಂಬಂಧಿಕರೆಲ್ಲರೂ ತನ್ನನ್ನು ಮಾತ್ರ ಇಷ್ಟಪಡಬೇಕು, ತನಗೆ ಸಂಬಂಧಿಸಿದವರ ಗಮನ ತನ್ನ ಮೇಲೆ ಮಾತ್ರ ಇರಬೇಕು ಎಂಬ ಪೊಸೆಸಿವ್‌ನೆಸ್‌ ಜಾಸ್ತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಪೊಸೆಸಿವ್‌ನೆಸ್‌ ಹೊಟ್ಟೆಕಿಚ್ಚಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ ತಾಯಿಗೆ ತಂಗಿ ಮೇಲೆಯೇ ಜಾಸ್ತಿ ಪ್ರೀತಿ ಎಂಬ ಹೊಟ್ಟೆಕಿಚ್ಚಿನಿಂದಾಗಿ ತಮ್ಮ ಮನೆಗೇ ಬುರ್ಖಾ ಧರಿಸಿ ತೆರಳಿದ ಮಹಿಳೆಯು (Delhi Woman) ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದಿದ್ದಾರೆ. ಈಗ ಮಹಿಳೆಯು ಪೊಲೀಸರ ಅತಿಥಿಯಾಗಿದ್ದಾರೆ.

ಹೌದು, ದೆಹಲಿಯ ಉತ್ತಮ ನಗರ ಪ್ರದೇಶದಲ್ಲಿ ಶ್ವೇತಾ (31) ಎಂಬ ಮಹಿಳೆಯು ತಮ್ಮ ತಾಯಿ ಮನೆಯಲ್ಲೇ ಕಳ್ಳತನ ಮಾಡಿದ್ದಾರೆ. ಶ್ವೇತಾ, ಆಕೆಯ ತಂಗಿ ಹಾಗೂ ತಾಯಿ ಒಟ್ಟಿಗೆ ವಾಸಿಸುತ್ತಿದ್ದು, ತಾಯಿಗೆ ತನಗಿಂತ ತಂಗಿ ಮೇಲೆಯೇ ಹೆಚ್ಚು ಪ್ರೀತಿ ಇದೆ ಎಂದು ಶ್ವೇತಾ ಭಾವಿಸಿದ್ದಾರೆ. ಈ ಪೊಸೆಸಿವ್‌ನೆಸ್‌ ಸೇಡಾಗಿ ಬದಲಾಗಿದೆ. ಇದಕ್ಕಾಗಿ, ಯಾರಿಗೂ ಗೊತ್ತಾಗಬಾರದು ಎಂದು ಬುರ್ಖಾ ಧರಿಸಿ, ತಮ್ಮ ಮನೆಯ ಬಾಗಿಲನ್ನೇ ಮುರಿದ ಶ್ವೇತಾ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕದ್ದಿದ್ದಾರೆ.

ಉತ್ತಮ ನಗರ ವ್ಯಾಪ್ತಿಯ ಸೇವಕ ಪಾರ್ಕ್‌ ಪ್ರದೇಶದಲ್ಲಿರುವ ಮನೆಯಲ್ಲಿ ಜನವರಿ 30ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶ್ವೇತಾ ಕಳ್ಳತನ ಮಾಡಿದ್ದಾರೆ. ತಂಗಿಯ ಮದುವೆಗಾಗಿ ಇಟ್ಟಿದ್ದ ಚಿನ್ನ ಹಾಗೂ 25 ಸಾವಿರ ರೂಪಾಯಿಯನ್ನು ಶ್ವೇತಾ ಕದ್ದಿದ್ದಾರೆ. ಮನೆಯಲ್ಲಿ ಕಳ್ಳತನವಾಗಿರುವ ಕುರಿತು ಶ್ವೇತಾ ಅವರ ತಾಯಿ ಕಮಲೇಶ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಶ್ವೇತಾ ಅವರೇ ಕಳ್ಳತನ ಮಾಡಿದ್ದು ಗೊತ್ತಾಗಿದೆ.

ಇದನ್ನೂ ಓದಿ: Viral Video: ಇನ್ನೆಂದೂ ಕಳವು ಮಾಡದಂತೆ ರೈಲು ಪ್ರಯಾಣಿಕರು ಖದೀಮನಿಗೆ ಪಾಠ ಕಲಿಸಿದ್ದು ಹೀಗೆ

ಶ್ವೇತಾ ಎರಡು-ಮೂರು ದಿನದಿಂದ ಮನೆಯಲ್ಲಿ ಇರದಿರುವುದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಶ್ವೇತಾ ಅವರೇ ಕಳ್ಳತನ ಮಾಡಿರುವುದು ಬಯಲಾಗಿದೆ. ಶ್ವೇತಾ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಆಕೆಯ ಹೊಟ್ಟೆಕಿಚ್ಚಿನ ಕತೆ ಬಯಲಾಗಿದೆ. ಶ್ವೇತಾ ಒಂದಷ್ಟು ಸಾಲ ಮಾಡಿಕೊಂಡಿದ್ದರು. ಇದಕ್ಕಾಗಿ ತಾಯಿ ಬಳಿ ಹಣ ಕೇಳಿದ್ದರು. ತಂಗಿ ಮದುವೆ ಇದೆ, ಹಣ ಕೊಡುವುದಿಲ್ಲ ಎಂದು ತಾಯಿ ಹೇಳಿದ್ದರು. ಇದು ಕೂಡ ಕಳ್ಳತನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version