Site icon Vistara News

Holi 2024 : ಅಯೋಧ್ಯೆಯ ರಾಮ ಲಲ್ಲಾನಿಗೆ ಮೊದಲ ಹೋಳಿ, ಇಲ್ಲಿದೆ ವಿಶೇಷ ವಿಡಿಯೊ

Ram lalla

ಅಯೋಧ್ಯೆ: ಶ್ರೀರಾಮನ ಜನ್ಮಭೂಮಿ ಆಯೋಧ್ಯೆಯ ಭವ್ಯ ರಾಮಮಂದಿರದಲ್ಲಿ (Ram Mandir) ಭಾನುವಾರ ಮೊಟ್ಟ ಮೊದಲ ಹೋಳಿ ಹಬ್ಬವನ್ನು (Holi 2024) ಆಚರಿಸಲಾಯಿತು. ಸಾವಿರಾರು ಭಕ್ತರು ಅಲಂಕೃತ ರಾಮ ದೇವರ ವಿಗ್ರಹವನ್ನು ಪೂಜಿಸಿ ಪಾವನರಾದರು. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರವು ದೇವಾಲಯದ ಸರಣಿ ಚಿತ್ರಗಳನ್ನು ತನ್ನ ಅಧಿಕೃತ ಪುಟದಲ್ಲಿ ಎಕ್ಸ್ ನಲ್ಲಿ ಹಂಚಿಕೊಂಡಿದೆ.

ಮೊದಲ ಚಿತ್ರದಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಫುಚ್​ಸಿಯಾ-ಗುಲಾಬಿ ಬಣ್ಣದ ವಸ್ತ್ರದ ಅಲಂಕಾರ ಮಾಡಲಾಗಿತ್ತು. ಇನ್ನೆರಡು ಚಿತ್ರಗಳಲ್ಲಿ ಭಗವಾನ್ ರಾಮನನ್ನು ಪೂಜಿಸಲು ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಿದ್ದಾರೆ. ಅದೇ ರೀತಿ ಹೂಮಾಲೆಗಳಿಂದ ಅಲಂಕರಿಸಿದ ದೇವರ ವಿಗ್ರಹವೂ ಇದೆ. ಮತ್ತೊಂದು ಚಿತ್ರದಲ್ಲಿ ಭಕ್ತರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುವುದು ಕಾಣುತ್ತಿದೆ.

ಚಿತ್ರಗಳನ್ನು ಹಂಚಿಕೊಂಡಿರುವ ಟ್ರಸ್ಟ್, “ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾ ನಂತರದ ಮೊದಲ ಹೋಳಿ ದಿನದಂದು ದೇವರು ಮತ್ತು ಅವರ ಭಕ್ತರು” ಎಂದು ಬರೆದಿದೆ.

ಇದನ್ನೂ ಓದಿ : R K S Bhadauria : ವಾಯುಪಡೆಯ ಮಾಜಿ ಮುಖ್ಯಸ್ಥ ಆರ್.ಕೆ.ಎಸ್. ಬದೌರಿಯಾ ಬಿಜೆಪಿಗೆ ಸೇರ್ಪಡೆ

ಏತನ್ಮಧ್ಯೆ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಎಸ್ಐಆರ್-ಎನ್​ಬಿಆರ್​ಐ ) ತಂಡವು ರಾಮ್ ಲಲ್ಲಾ ನ ಮೊದಲ ಹೋಳಿಗಾಗಿ ವಿಶೇಷ ಗುಲಾಲ್ (ಬಣ್ಣಗಳು) ಅನ್ನು ಸಿದ್ಧಪಡಿಸಿದೆ. ಈ ತ್ವಜೆಯ ಸ್ನೇಹಿ ಗುಲಾಲ್ ಅನ್ನು ಕಚ್ನಾರ್​ ಹೂವುಗಳಿಂದ ತಯಾರಿಸಲಾಗಿದೆ.

ರಾಮ್ ಲಲ್ಲಾಗಾಗಿ ಮತ್ತೊಂದು ರೀತಿಯ ಗಿಡಮೂಲಿಕೆ ಬಣ್ಣವನ್ನೂ ತಯಾರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಗೋರಖ್ಪುರದ ಗೋರಖ್ನಾಥ್ ದೇವಾಲಯದಲ್ಲಿ ಅರ್ಪಿಸುವ ಹೂವುಗಳಿಂದ ವಿಜ್ಞಾನಿಗಳು ಮತ್ತೊಂದು ಗಿಡಮೂಲಿಕೆ ಬಣ್ಣವನ್ನು ತಯಾರಿಸಿದ್ದಾರೆ. ಲ್ಯಾವೆಂಡರ್ ಮತ್ತು ಶ್ರೀಗಂಧದ ಪರಿಮಳದಲ್ಲಿ ಲಭ್ಯವಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. 51 ಇಂಚಿನ ವಿಗ್ರಹವನ್ನು ರಚಿಸಲು ಬಳಸಿದ ಕಲ್ಲು ಕರ್ನಾಟಕದಿಂದ ತರಲಾದ ಕೃಷ್ಣ ಶಿಲೆಯಾಗಿದೆ.

Exit mobile version