ಬೆಂಗಳೂರು: ಇರಾನ್ ಹಾಗೂ ಇಸ್ರೇಲ್ ನಡುವೆ ಶಸ್ತ್ರಾಸ್ತ್ರಗಳ ದಾಳಿ (Iran- Israel war : ಇಸ್ರೆಲ್, ಇರಾನ್ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?) ನಡೆಯುತ್ತಿರುವ ಕಾರಣ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಇರಾನ್ ಅಥವಾ ಇಸ್ರೇಲ್ಗೆ ಪ್ರಯಾಣಿಸದಂತೆ ವಿದೇಶಾಂಗ ಸಚಿವಾಲಯ ಶುಕ್ರವಾರ ಎಲ್ಲಾ ಭಾರತೀಯರಿಗೆ ಸಲಹೆ ನೀಡಿದೆ. ಈಗಾಗಲೇ ಅಲ್ಲಿ ವಾಸಿಸುತ್ತಿರುವ ಭಾರತೀಯರು ಆಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ತಮ್ಮ ಇರುವಿಕೆಯನ್ನು ದಾಖಲು ಮಾಡಲು ಹೇಳಿದೆ.
“ಈ ಪ್ರದೇಶದಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಎಲ್ಲಾ ಭಾರತೀಯರು ಇರಾನ್ ಅಥವಾ ಇಸ್ರೇಲ್ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್ ಅಥವಾ ಇಸ್ರೇಲ್ಗೆ ಹೋದವರು ಅಥವಾ ಅಲ್ಲಿ ವಾಸಿಸುತ್ತಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ವಿನಂತಿ ಮಾಡಲಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮತ್ತು ಅವರ ಸಂಚಾರವನ್ನು ಕನಿಷ್ಠ ಮಟ್ಟಕ್ಕೆ ನಿರ್ಬಂಧಿಸಲು ವಿನಂತಿಸಲಾಗಿದೆ” ಎಂದು ಅದು ಹೇಳಿದೆ.
ಎಲ್ಲ ದೇಶಗಳಿಂದಲೂ ಸೂಚನೆ
ಭದ್ರತಾ ಭಯದ ಹಿನ್ನೆಲೆಯಲ್ಲಿ ತನ್ನ ರಾಜತಾಂತ್ರಿಕರ ಚಲನವಲನಗಳನ್ನು ನಿರ್ಬಂಧಿಸುವುದಾಗಿ ಇಸ್ರೇಲ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಘೋಷಿಸಿದ ನಂತರ, ಇರಾನ್, ಇಸ್ರೇಲ್, ಲೆಬನಾನ್ ಅಥವಾ ಪ್ಯಾಲೆಸ್ತೀನ್ಗೆ ಪ್ರಯಾಣಿಸದಂತೆ ಫ್ರೆಂಚ್ ಸರ್ಕಾರ ಫ್ರೆಂಚ್ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Beggary Rescue : ರಂಜಾನ್ ಹಬ್ಬದಂದು 40ಕ್ಕೂ ಹೆಚ್ಚು ಮಕ್ಕಳಿಂದ ಭಿಕ್ಷಾಟನೆ; ಸಿಕ್ಕಿಬಿದ್ದರು ಲೇಡಿ ಗ್ಯಾಂಗ್
ಇರಾನ್ ತನ್ನ ಮಿಲಿಟರಿ ಸಂಪನ್ಮೂಲಗಳನ್ನು ಗುರಿಯಾಗಿಸಿಕೊಂಡು 100 ಕ್ಕೂ ಹೆಚ್ಚು ಡ್ರೋನ್ಗಳು ಮತ್ತು ಡಜನ್ಗಟಗಟಲೆ ಕ್ಷಿಪಣಿಗಳೊಂದಿಗೆ ಶುಕ್ರವಾರದ ವೇಳೆಗೆ ಇಸ್ರೇಲ್ ಮೇಲೆ ದಾಳಿ ನಡೆಸಲಿದೆ ಎಂದು ಯುಎಸ್ ಮೂಲದ ಸುದ್ದಿ ಸಂಸ್ಥೆ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಜರ್ಮನ್ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಮತ್ತು ಅವರ ಬ್ರಿಟಿಷ್ ಮತ್ತು ಆಸ್ಟ್ರೇಲಿಯಾದ ಸಹವರ್ತಿಗಳಿಂದ ದೂರವಾಣಿ ಕರೆಗಳು ಬಂದಿವೆ ಎಂದು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಗುರುವಾರ ಹೇಳಿದ್ದಾರೆ.
ಇಸ್ರೇಲ್ರಾ ಜತಾಂತ್ರಿಕ ವ್ಯಕ್ತಿಗಳು ಮತ್ತು ಸ್ಥಳಗಳ ವಿನಾಯಿತಿ ಉಲ್ಲಂಘಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅದನ್ನು ಖಂಡಿಸಲು ವಿಫಲವಾಗಿದೆ. ಹೀಗಾಗಿ “ಕಾನೂನುಬದ್ಧ ರಕ್ಷಣೆ ಅವಶ್ಯಕತೆಯಾಗಿದೆ ಎಂದು ಇರಾನ್ ಹೇಳಿದೆ. ಅದರೆ, ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುವುದಿಲ್ಲ ಎಂಬುದಾಗಿಯೂ ನುಡಿದಿದೆ.