ಬೆಂಗಳೂರು: ಕಷ್ಟಕಾಲಕ್ಕೊ ಅಥವಾ ಹೊಸ ಕಾರನ್ನು ತೆಗೆದುಕೊಳ್ಳುವುದಕ್ಕೊ ಹಳೆ ಕಾರನ್ನು (Used Car Sale) ಮಾರಬೇಕಾಗುತ್ತದೆ. ಮೊದಲ ನೋಟಕ್ಕೆ ಅದು ಸುಲಭ ಎನಿಸಬಹುದು. ‘ಮಾರಿದ್ರೆ ಆಯ್ತು’ ಎಂದು ಹೇಳಬಹುದು. ಆದರೆ ಅದು ಅಷ್ಟೊಂದು ಸುಲಭವಲ್ಲ. ನೀವು ಮಾರಲು ನಿರ್ಧರಿಸಿದ ತಕ್ಷಣ ಅಂದುಕೊಳ್ಳುವಷ್ಟು ಬೆಲೆಯು ಸಿಗುವುದೇ ಇಲ್ಲ. ಕಾರು ಕೊಡಲು ಮುಂದಾದಾಗ ಕಡಿಮೆ ಬೆಲೆಗೆ ಕೇಳುವವರೇ ಹೆಚ್ಚು. ಹೀಗಾಗಿ ಸಾಕಷ್ಟು ಲಾಸ್ ಆಗಬಹುದು. ಅದೂ ಅಲ್ಲದಿದ್ದರೆ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ಗಳ ಬಳಿಗೆ ಹೋಗಬೇಕು. ಅವರು ಕೂಡ ತಮ್ಮ ಲಾಭಾಂಶವನನ್ನು ಇಟ್ಟುಕೊಂಡೇ ಖರೀದಿ ಮಾಡುತ್ತದೆ. ಆ ರೀತಿ ಆಗಬಾರದು ಎಂದಾರೆ ಸ್ವಲ್ಪ ಯೋಚನೆ ಮಾಡಿಕೊಂಡು ಕಾರನ್ನು ಮಾರಲು ಮುಂದಾಗಬೇಕು. ಅದಕ್ಕೆ ಬೇಕಾಗಿರುವ ಕೆಲವೊಂದು ತಂತ್ರಗಳನ್ನು ಇಲ್ಲಿ ನೀಡಲಾಗಿದೆ.
ಏನು ಮಾಡಬೇಕು
ಕಾರು ಡೀಲರ್ಗಳು ಅಥವಾ ಬ್ರೋಕರ್ಗಳು ಬೇಡ ಎಂದು ಅಂದು ತಕ್ಷಣ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ ಹಾಗೂ ಹೆಚ್ಚು ಲಾಭ ನಿಮ್ಮದಾಗುತ್ತದೆ. ಹೀಗಾಗಿ ಮಾರುವ ಮೊದಲು ಕೆಲವೊಂದು ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಮೊದಲಾಗಿ ಮಾನಸಿಕವಾಗಿ ಸಂಪೂರ್ಣವಾಗಿ ಸಿದ್ಧಗೊಳ್ಳಬೇಕು. ಇಂತಿಷ್ಟು ಬೆಲೆ ಸಿಕ್ಕರೆ ಮಾರುವುದು ಖಚಿತ. ಇಲ್ಲವಾದರೆ ಇಲ್ಲ. ಇಂಥವರಿಗಷ್ಟೇ ಮಾರುವೆ. ಒಂದು ಬಾರಿಗೆ ಹಣ ಕೊಟ್ಟರಷ್ಟೇ ಮಾರುವೆ ಎಂಬೆಲ್ಲ ಯೋಜನೆಗಳನ್ನು ಹಾಕಿಕೊಂಡಿಬೇಕು.
ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಅರಿತುಕೊಳ್ಳಬೇಕು.
ಇಂಟರ್ನೆಟ್ ನಿಮಗೆ ಲಭ್ಯವಿದ್ದರೆ ನಿಮ್ಮಲ್ಲಿರುವ ಕಾರಿನ ಪ್ರಸ್ತುತ ಅನ್ರೋಡ್ ಪ್ರೈಸ್ ತಿಳಿದುಕೊಳ್ಳಬೇಕು. ಹೀಗಾಗಿ ಕೆಲವೊಂದು ವರ್ಷಗಳು ಹಳೆಯದಾಗಿರುವ ನಿಮ್ಮ ಕಾರಿಗೆ ಎಷ್ಟು ಬೆಲೆ ಪಡೆಯಬಹುದು ಎಂದು ಅಂದಾಜಿಸಿ. ಕಾರಿನ ಬೆಲೆಯ ಅಂದಾಜು ಮಾಡಲು ಯೂಸ್ಡ್ ಕಾರು ಮಾರಾಟ ವೆಬ್ಸೈಟ್ ಹೋಗಿ ಎಲ್ಲ ಮಾಹಿತಿ ನಮೂದಿಸಿ. ಖರೀದಿ ಮಾಡಿದ ವರ್ಷ, ಓಡಿರುವ ಕಿಲೋಮೀಟರ್ಗಳು, ಯಾವ ವೇರಿಯೆಂಟ್ ಎಂಬುದನ್ನೆಲ್ಲ ಹಾಕಿ. ಅಲ್ಲಿ ಕಾಣುವ ಬೆಲೆಗಿಂತ ಸ್ವಲ್ಪ ಜಾಸ್ತಿ ಹೇಳಿ. ಕನಿಷ್ಠ ಬೆಲೆಯ ಮೇಲೆ ಬಫರ್ ದರ ಇಟ್ಟುಕೊಳ್ಳಿ. ಆದರೆ ನೆನಪಿಡಿ, ಜಾಸ್ತಿ ಹೇಳಬೇಡಿ. ಖರೀದಿದಾರನ ಬಳಿಯೂ ಇಂಟರ್ನೆಟ್ ಇರುತ್ತದೆ. ಚೌಕಾಸಿಯಲ್ಲೇ ಟೈಮ್ ವೇಸ್ಟ್ ಮಾಡಬೇಕಾಗುತ್ತದೆ. ಬಳಿಕ ಕಾರಿನ ಮಾಹಿತಿಯೊಂದಿಗೆ ಸೆಕೆಂಡ್ ಹ್ಯಾಂಡ್ ಕಾರು ಮಾರಾಟದ ವೆಬ್ಸೈಟ್, ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿ. ಕಾರಿನ ಎಲ್ಲ ಮಾಹಿತಿ ಕೊಟ್ಟು ಹ್ಯಾಕರ್ಗಳ ಮೋಸಗಾರರ ಕೈಗೆ ಸಿಕ್ಕಿ ಹಾಕಿಕೊಳ್ಳಬೇಡಿ. ಅಗತ್ಯ ಮಾಹಿತಿ ಮಾತ್ರ ಕೊಡಿ. ಹೆಚ್ಚು ಪ್ರತಿಕ್ರಿಯೆಗಳನ್ನು ಬಯಸದಿದ್ದರೆ ಅಥವಾ ಸಿಂಗಲ್ ಡಿಲ್ ಎಂದಾದರೆ “ಅತ್ಯುತ್ತಮ ಕೊಡುಗೆ”, “ಅಂತಿಮ ಬೆಲೆ”, “ಮಾತುಕತೆ ಇಲ್ಲ ” ಎಂಬುದನ್ನು ಸ್ಪಷ್ಟಪಡಿಸಿ.
ಎಲ್ಲ ದಾಖಲೆಗಳೂ ಜತೆಗಿರಲಿ
ನಿಮ್ಮ ಕಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒಟ್ಟಿಗೆ ಇಟ್ಟುಕೊಳ್ಳಿ. “ಎಲ್ಲವೂ” ಎಂದರೆ ಎಲ್ಲವೂ ಇರಬೇಕು. ಮೆಂಟೇನೆನ್ಸ್ ಬಿಲ್, ಸರ್ವಿಸ್ ದಾಖಲೆಗಳು, ಟೈರ್ ಗಳು, ಬ್ಯಾಟರಿಗಳಿಗೆ ವಾರಂಟಿ ರಸೀದಿಗಳನ್ನು ಜತೆಗೆ ಇಟ್ಟುಕೊಳ್ಳಿ. ಈ ರೀತಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ದಾಖಲೆಗಳಿಂದಾಗಿ ಹೆಚ್ಚು ಬೆಲೆ ಸಿಗುತ್ತದೆ. ಅಂದರೆ ನಿಮ್ಮ ಕಾರಿನ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ ಎಂದು ಅರ್ಥ.
ಆನ್ಲೈನ್ ಜಾಹೀರಾತು
ನಿಮಗೆ ಅತ್ಯುತ್ತಮ ಡೀಲ್ ಬೇಕಾದರೆ ಆನ್ ಲೈನ್ ಜಾಹೀರಾತು ನೀಡಿ. ಎಷ್ಟು ವೆಬ್ಸೈಟ್ಗಳನ್ನು ಎಷ್ಟು ಜನ ನೀಡುತ್ತಾರೆ ಎಂಬ ಮಾಹಿತಿ ಪಡೆಯಿತು. ಅವರಲ್ಲಿ ಕಾರಿನ ಬಗ್ಗೆ ಆಸಕ್ತಿ ಹೊಂದಿರುವವರು ಎಷ್ಟೆಂದು ತಿಳಿದುಕೊಳ್ಳಿ. ಅದರ ಪ್ರಕಾರ ಜಾಹೀರಾತು ನೀಡಿ. ನಿಮ್ಮ ಕಾರು ಮಾರಾಟವಾಗುವವರೆಗೂ ವೆಬ್ಸೈಟ್ನಲ್ಲಿ ಅಗತ್ಯ ಮಾಹಿತಿ ಇರಲಿ,
ಕೆಲವು ಸಲಹೆಗಳು ಇಲ್ಲಿವೆ
ಉತ್ತಮ ಫೋಟೋಗಳನ್ನು ಅಪ್ ಲೋಡ್ ಮಾಡಿ. ಚಿತ್ರಗಳನ್ನು ಕ್ಲಿಕ್ ಮಾಡಲು ನಿಮ್ಮ ಮೊಬೈಲ್ ಕ್ಯಾಮೆರಾವನ್ನು ನೀವು ಬಳಸಬಹುದು. ನಿಮ್ಮ ಕಾರಿನ ಫೋಟೊವನ್ನು ಹಗಲು ಹೊತ್ತಿನಲ್ಲಿಯೇ ತೆಗೆಯಿರಿ. ಆದ್ಯತೆಯ ಮೇರೆಗೆ ಮುಂಜಾನೆ ಅಥವಾ ಸಂಜೆ ಫೋಟೋ ತೆಗೆಯುವುದು ಒಳ್ಳೆಯದು.
ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್ಫುಲ್ ಬೈಕ್ಗಳು
ನಿಮ್ಮ ಕಾರಿನ ಬಗ್ಗೆ ಸಾಧ್ಯವಾದಷ್ಟು ವಿವರಗಳನ್ನು ನೀಡಿ. ಇದು ಸೂಕ್ತ ಖರೀದಿದಾರರನ್ನು ಆಕರ್ಷಿಸುತ್ತದೆ ಮತ್ತು ವೇಗವಾಗಿ ಮಾರಾಟ ಮಾಡಲು ಸಹಾಯ ಮಾಡುತ್ತದೆ.
ಅಲಾಯ್ ಚಕ್ರಗಳು, ಲೆದರ್ ಅಪ್ಹೋಲ್ಸ್ಟರಿ, ಸಿಡಿ-ಚೇಂಜರ್, ಮ್ಯೂಸಿಕ್ ಸಿಸ್ಟಮ್, ಹೊಸ ಟೈರ್ಗಳು, ಲಭ್ಯವಿರುವ ಸರ್ವಿಸ್ಗಳು, ವಾರಂಟಿಗಳು ಮುಂತಾದ ಹೆಚ್ಚುವರಿ ಮಾಹಿತಿಯನ್ನು ನಿರ್ದಿಷ್ಟಪಡಿಸಿ.
ವಿಚಾರಣೆಗಳನ್ನು ಸೂಕ್ತ ಕಾಲಕ್ಕೆ ಸ್ವೀಕರಿಸಿ
ಒಮ್ಮೆ ನೀವು ನಿಮ್ಮ ಜಾಹೀರಾತು ಹಾಕಿದ ನಂತರ ನೀವು ಅದರಲ್ಲಿ ನಮೂದಿಸಿದ ಎಲ್ಲ ದಾಖಲೆಯೊಂದಿಗೆ ಸಿದ್ಧರಾಗಿರಿ. ನೀವು ಉಲ್ಲೇಖಿಸಿದ ಎಲ್ಲಾ ಅಂಕಿಅಂಶಗಳು ನೆನಪಿಲ್ಲದಿದ್ದರೆ ಅವುಗಳನ್ನು ಒಂದು ಕಾಗದದ ತುಣುಕಿನ ಮೇಲೆ ಬರೆದಿದೆ. ಖರೀದಿದಾರರು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ, ಆದ್ದರಿಂದ ಪ್ರತಿ ಪ್ರಶ್ನೆಗೆ ಪ್ರಾಮಾಣಿಕವಾಗಿ ಮತ್ತು ಬಹಿರಂಗವಾಗಿ ಉತ್ತರಿಸಲು ಪ್ರಯತ್ನಿಸಿ.
ಅನಗತ್ಯ ಅಪಾಯಿಂಟ್ಮೆಂಟ್ ಕೊಡಬೇಡಿ. ನಿಮ್ಮ ಸಮಯವನ್ನು ಉಳಿಸಬೇಕಾದರೆ ಫೋನ್ ಮೂಲಕ ಖರೀದಿದಾರರಿಗೆ ಆರಂಭಿಕ ಸ್ಕ್ರೀನಿಂಗ್ ಮಾಡಿ. ನಂತರ ಅಪಾಯಿಂಟ್ಮೆಂಟ್ ನಿಗದಿ ಮಾಡಿ. ಖರೀದಿದಾರರನ್ನು ನಿರ್ದಿಷ್ಟ ಸಮಯಕ್ಕೆ ಭೇಟಿಯನ್ನು ಮಾಡಿ. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನಿಮ್ಮ ಮನೆಗೆ ಬರುವುದು ಬೇಡ ಎಂದಾರೆ ಹೊರಗಡೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿ.
ಟೆಸ್ಟ್ ಡ್ರೈವ್ಗೆ ನೇರ ಕೊಡಬೇಡಿ
ಆಸಕ್ತ ಖರೀದಿದಾರರಿಗೆ ನಿಮ್ಮ ಕಾರನ್ನು ತೋರಿಸಿ. ನೀವು ಜತೆಗೆ ಇಲ್ಲದೆ ನಿಮ್ಮ ಕಾರನ್ನು ಟೆಸ್ಟ್ ಡ್ರೈವ್ ಗೆ ತೆಗೆದುಕೊಳ್ಳಲು ಬಿಡಬೇಡಿ. ಖರೀದಿದಾರರ ಚಾಲನಾ ಪರವಾನಗಿ ಪರಿಶೀಲಿಸಿ. ಆತನಿಗೆ ಚಾಲನೆ ಮಾಡಲು ಬಿಡಿ, ಆದರೆ ನೀವು ನ್ಯಾವಿಗೇಟ್ ಮಾಡುತ್ತಿರಬೇಕು. ಖರೀದಿದಾರನು ನೀವು ಕಾರನ್ನು ಕಾಯ್ದಿರಿಸಲು ಬಯಸಿದರೆ ಅಡ್ವಾನ್ಸ್ ಡೆಪಾಸಿಟ್ ಕೇಳಿ. ಆತನ ಅಡ್ವಾನ್ಸ್ ಮುಕ್ತಾಯಗೊಳ್ಳುವ ಸಮಯ ನಿರ್ದಿಷ್ಟಪಡಿಸಿ. ಬೆಲೆಯ ಬಗ್ಗೆ ಮಾತುಕತೆ ನಡೆಸಿ. ಹೆಚ್ಚು ಚೌಕಾಸಿಗೆ ಅವಕಾಶ ನೀಡಬೇಡಿ.
ಮಾರಾಟ ಪ್ರಕ್ರಿಯೆಗಳು
ನೀವು ನಿಮ್ಮ ವಾಹನವನ್ನು ಮಾರಾಟ ಮಾಡಬೇಕಾದರೆ ಕೆಲವು ಕಾಗದಪತ್ರಗಳನ್ನು ಮಾಡಬೇಕಾಗುತ್ತದೆ. ಪಾವತಿಯನ್ನು ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸ್ವೀಕರಿಸಿ. ಚೆಕ್ ಪಾವತಿಯ ಸಂದರ್ಭದಲ್ಲಿ, ಚೆಕ್ ಕ್ಲಿಯರ್ ಆಗುವ ತನಕ ದಾಖಲೆಗಳನ್ನು ವರ್ಗಾಯಿಸಬಾರದು. ಖರೀದಿದಾರ ಸಾಲವನ್ನು ವ್ಯವಸ್ಥೆ ಮಾಡುತ್ತಿದ್ದರೆ, ಫೈನಾನ್ಸ್ ಕಂಪನಿಯ ಡಿಎಸ್ಎ ಸಹಾಯ ಪಡೆಯಿರು. ಅವರು ಎಲ್ಲಾ ಕಾಗದಪತ್ರಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅದರಿಂದ ಕಾಗದ ಪತ್ರಗಳ ವರ್ಗಾವಣೆಗೆ ಅನುಕೂಲವಾಗುತ್ತದೆ.