Site icon Vistara News

Lok Sabha Election : ತಮಿಳುನಾಡಿನಲ್ಲಿ ಕತ್ತೆಗಳ ಮೂಲಕ ಹಳ್ಳಿಗಳಿಗೆ ಇವಿಎಂ ತಲುಪಿಸಿದ ಅಧಿಕಾರಿಗಳು!

Lok Sabah Election

ಚೆನ್ನೈ: ತಮಿಳುನಾಡಿನ ಎಲ್ಲ 39 ಲೋಕಸಭಾ ಕ್ಷೇತ್ರಗಳಿಗೆ (Lok Sabha Election) ಏಪ್ರಿಲ್ 19ರಂದು ಮತದಾನ ನಡೆಯಲಿದೆ. ಇದು 17ನೇ ಲೋಕಸಭೆಗೆ ಮೊದಲ ಹಂತದ ಚುನಾವಣಾ ಪ್ರಕ್ರಿಯೆಯಾಗಿದೆ. ಮತದಾನಕ್ಕಾಗಿ ಅಧಿಕಾರಿಗಳು ಸಕಲ ಸಿದ್ದತೆ ನಡೆಸಲಾಗಿದ್ದು, ಬೂತ್​ಗಳಿಗೆ ಇವಿಎಂ ಯಂತ್ರಗಳು ತಲುಪಿವೆ. ಏತನ್ಮಧ್ಯೆ ತಮಿಳುನಾಡಿನಲ್ಲಿ ಮತದಾನದ ಒಂದು ದಿನ ಮುಂಚಿತವಾಗಿ ಕತ್ತೆಗಳ ಮೂಲಕ ಇವಿಎಂಗಳನ್ನು ದೂರದ ಪ್ರದೇಶಗಳಿಗೆ ಸಾಗಿಸುವ ವೀಡಿಯೊವೊಂದು ವೈರಲ್ ಆಗಿದೆ. ಇದು ರಸ್ತೆ ಮೂಲಸೌಕರ್ಯದ ಕೊರತೆಯ ಚರ್ಚೆಯನ್ನು ಹುಟ್ಟುಹಾಕಿದೆ.

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದಿಂಡಿಗಲ್ ಜಿಲ್ಲೆಯ ನಥಮ್ ಪ್ರದೇಶದ ಹಳ್ಳಿಗಳಿಗೆ ಕತ್ತೆಗಳು ಮೇಲೇರಿಸಿ ಇವಿಎಂಗಳನ್ನು ಸಾಗಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಸಂಸ್ಥೆ ಎಎನ್ಐ ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಸ್ಥಳೀಯರು ಇವಿಎಂಗಳನ್ನು ಲೋಡ್ ಮಾಡುವುದನ್ನು ಮತ್ತು ನಂತರ ಇವಿಎಂಗಳನ್ನು ಕತ್ತೆಗಳಿಗೆ ಕಟ್ಟುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊ ಮುಂದುವರಿಯುತ್ತಿದ್ದಂತೆ, ಕತ್ತೆಗಳು ಬಿಗಿ ಭದ್ರತೆಯಲ್ಲಿ ಇವಿಎಂಗಳನ್ನು ಹೊತ್ತುಕೊಂಡು ಹೋಗುವುದನ್ನು ನೋಡಬಹುದು.

ಏಜೆನ್ಸಿ ಏಪ್ರಿಲ್ 18 ರಂದು ವೀಡಿಯೊವನ್ನು ಹಂಚಿಕೊಂಡಿದೆ. ಅಲ್ಲಿಂದ ಅದು 41,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಅದೆರ ಸಂಖ್ಯೆಗಳು ಇನ್ನೂ ಹೆಚ್ಚುತ್ತಿವೆ. ಅನೇಕರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪೋಸ್ಟ್ ನ ಕಾಮೆಂಟ್ ವಿಭಾಗವನ್ನು ಬಳಸಿಕೊಂಡಿದ್ದಾರೆ.

“ನಾವು ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸಲು ಸಿದ್ಧರಾಗುತ್ತಿದ್ದೇವೆ. ಆದರೆ ದೂರದ ಪ್ರದೇಶಗಳಲ್ಲಿ ಹೆಲಿಕಾಪ್ಟರ್​ ಮೂಲಕ ಮತ ಪೆಟ್ಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇಸ್ರೋದ ಆರಂಭಿಕ ದಿನಗಳಲ್ಲಿ ಬೈಸಿಕಲ್​​ಗಳಲ್ಲಿ ರಾಕೆಟ್ ಭಾಗಗಳನ್ನು ಸಾಗಿಸುವ ಚಿತ್ರ ನೆನಪಿರಬಹುದು. ಈ ವೀಡಿಯೊವನ್ನು ನೆನಪಿಟ್ಟುಕೊಳ್ಳಿ” ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Arvind Kejriwal : ಜಾಮೀನಿಗಾಗಿ ಕುತಂತ್ರ; ಸಿಹಿ ತಿಂಡಿ ತಿಂದು ಸಕ್ಕರೆ ಕಾಯಿಲೆ ಎನ್ನುತ್ತಿರುವ ಕೇಜ್ರಿವಾಲ್​ ಎಂದ ಇಡಿ

“ಇದು ಭಾರತದ ಚುನಾವಣಾ ಆಯೋಗದ ಮೇಲೆ ಕೆಟ್ಟ ಸ್ಥಿತಿಗೆ ಉದಾಹರಣೆ” ಎಂದು ಇನ್ನೊಬ್ಬರು ಹೇಳಿದರು.

ಕಳಪೆ ರಸ್ತೆ ಮೂಲಸೌಕರ್ಯಗಳ ಬಗ್ಗೆ ಅನೇಕರು ಆಡಳಿತಾರೂಢ ಸರ್ಕಾರವನ್ನು ಟೀಕಿಸಿದ್ದಾರೆ. ಒಬ್ಬರು ಇದನ್ನು “ಡಿಎಂಕೆ ಅಭಿವೃದ್ಧಿ” ಎಂದು ಕರೆದಿದ್ದಾರೆ.

ಲೋಕಸಭಾ ಚುನಾವಣೆ 2024: ಮೊದಲ ಹಂತದ ಮತದಾನ

18ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದೆ. ಈ ಹಂತದಲ್ಲಿ 21 ರಾಜ್ಯಗಳ ಒಟ್ಟು 102 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಪೈಕಿ ಪುದುಚೇರಿಯ ಏಕೈಕ ಕ್ಷೇತ್ರ ಸೇರಿದಂತೆ ತಮಿಳುನಾಡಿನ 39 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Exit mobile version