Site icon Vistara News

S Jaishankar : ಪಾಠ ಹೇಳಲು ಬರಬೇಡಿ; ಭಾರತದ ಚುನಾವಣಾ ವಿಚಾರಕ್ಕೆ ಮೂಗು ತೂರಿಸಿದ ವಿಶ್ವ ಸಂಸ್ಥೆಗೆ ಜೈಶಂಕರ್​​ ತಿರುಗೇಟು

S jaishankar

ತಿರುವನಂತಪುರಂ: ಮುಂಬರುವ ಲೋಕಸಭಾ ಚುನಾವಣೆ ಕುರಿತು ವಿಶ್ವ ಸಂಸ್ಥೆಯ (United Nations) ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಗುರುವಾರ ಆಕ್ಷೇಪ ಎತ್ತಿದ್ದರು. ನಿಮ್ಮ ಪಾಠ ನಮಗೆ ಬೇಕಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದು ಜಾಗತಿಕ ಸಂಸ್ಥೆ ಹೇಳಿತ್ತು. ಅದಕ್ಕೆ ಜೈಶಂಕರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ, ಜನರ “ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು” ರಕ್ಷಿಸಲಾಗುತ್ತಿದೆ. ಪ್ರತಿಯೊಬ್ಬರೂ “ಮುಕ್ತ ಮತ್ತು ನ್ಯಾಯಸಮ್ಮತ” ವಾತಾವರಣದಲ್ಲಿ ಮತ ಚಲಾಯಿಸಲು ನಮ್ಮಲ್ಲಿ ಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರರು ನೀಡಿದ ಹೇಳಿಕೆಗೆ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಚಿವ ಸಹೋದ್ಯೋಗಿ ಮತ್ತು ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ಪರವಾಗಿ ಪ್ರಚಾರ ಮಾಡಲು ಇಲ್ಲಿಗೆ ಆಗಮಿಸಿದ್ದ ಜೈಶಂಕರ್, ಯುಎನ್ ಅಧಿಕಾರಿ ಕಳೆದ ವಾರ ಭಾರತೀಯ ಚುನಾವಣೆಗಳ ಬಗ್ಗೆ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಅಲ್ಲದೆ ಅದಕ್ಕೆ ನಮ್ಮ ಉತ್ತರವೂ ಇದೆ ಎಂಬುದಾಗಿ ತಿಳಿಸಿದರು.

ಇದನ್ನೂ ಓದಿ: Earthquake today : ಹಿಮಾಚಲ ಪ್ರದೇಶದಲ್ಲಿ 5.3 ಮ್ಯಾಗ್ನಿಟ್ಯೂಡ್ ತೀವ್ರತೆಯ ಭೂಕಂಪ

“ನಮ್ಮ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದು ವಿಶ್ವಸಂಸ್ಥೆ ನನಗೆ ಹೇಳುವ ಅಗತ್ಯವಿಲ್ಲ. ನಮಗೆ ಭಾರತದ ಬಗ್ಗೆ ಭರವಸೆಯಿಂದೆ ಭಾರತದ ಜನರು ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರುವುದನ್ನು ಅರಿತುಕೊಂಡಿದ್ದಾರೆ. ಆದ್ದರಿಂದ, ಅದರ ಬಗ್ಗೆ ಚಿಂತಿಸಬೇಡಿ” ಎಂದು ಸಚಿವರು ಹೇಳಿದರು.

ಕಳೆದ ವಾರ ನೀಡಿದ್ದ ಹೇಳಿಕೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಮತ್ತು ಪ್ರತಿಪಕ್ಷ ಕಾಂಗ್ರೆಸ್​​ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮುಂಬರುವ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಭಾರತದಲ್ಲಿ “ರಾಜಕೀಯ ಅಶಾಂತಿ” ಉಂಟಾಗಿದೆ ಎಂದು ಯುಎನ್​ ಪ್ರಧಾನ ಕಾರ್ಯದರ್ಶಿ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದರು.

“ಚುನಾವಣೆಗಳನ್ನು ಹೊಂದಿರುವ ಯಾವುದೇ ದೇಶದಂತೆ ಭಾರತದಲ್ಲಿ, ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸೇರಿದಂತೆ ಪ್ರತಿಯೊಬ್ಬರ ಹಕ್ಕುಗಳನ್ನು ಭಾರತದಲ್ಲಿ ರಕ್ಷಿಸಬೇಕು. ಪ್ರತಿಯೊಬ್ಬರೂ ಮುಕ್ತ ಮತ್ತು ನ್ಯಾಯಯುತ ವಾತಾವರಣದಲ್ಲಿ ಮತ ಚಲಾಯಿಸುವುದನನು ನಾವು ಆಶಿಸುತ್ತೇವೆ” ಎಂದು ಡುಜಾರಿಕ್ ಹೇಳಿದ್ದರು.

Exit mobile version