Site icon Vistara News

Double-Decker Flyover: ಇಂದು ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಚಾಲನೆ; ದಕ್ಷಿಣ ಭಾರತದ ಪ್ರಥಮ ಮೆಟ್ರೋ ಕಂ ಮೇಲ್ಸೇತುವೆ

Double-Decker Flyover

ಬೆಂಗಳೂರು: ರಾಜಧಾನಿಯ ಬಹು ನಿರೀಕ್ಷಿತ 3.3 ಕಿಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ (Double-Decker Flyover), ದಕ್ಷಿಣ ಭಾರತದ (South India) ಮೊದಲ ಮೆಟ್ರೋ ಕಂ ಮೇಲ್ಸೇತುವೆ (Metro Cum Flyover) ಇಂದು (Inauguration) ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ಇದನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಉದ್ಘಾಟಿಸಲಿದ್ದಾರೆ. ಸಾರಿಗೆ ಸಚಿವ ಮತ್ತು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ (Ramalinga Reddy) ಮತ್ತು ಶಾಸಕರು ಇರಲಿದ್ದಾರೆ.

ಈ ಫ್ಲೈಓವರ್‌ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ (Silk Board Junction) ಜೋಡಿಸಲಿದೆ. ಈ ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ವಾಹನ ದಟ್ಟಣೆಗಾಗಿ ಕುಖ್ಯಾತವಾಗಿರುವ ಸಿಎಸ್‌ಬಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಅವ್ಯವಸ್ಥೆಯನ್ನು ಈ ಮೇಲ್ಸೇತುವೆ ಹಗುರಗೊಳಿಸಲಿದೆ.

ಫ್ಲೈಓವರ್ ನಿರ್ಮಿತವಾಗಿದ್ದರೂ ಅದನ್ನು ವಾಹನ ಸಂಚಾರಕ್ಕೆ ತೆರೆಯಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಳಂಬ ಮಾಡಿತ್ತು. ಬಲವಂತವಾಗಿ ತೆರೆಯುವುದಾಗಿ ಕಳೆದ ವಾರ ಎಎಪಿ ನಾಯಕರು ಎಚ್ಚರಿಕೆ ನೀಡಿದ್ದರು.

ಮೇಲ್ಸೇತುವೆಯ ಲೂಪ್‌ಗಳು ಮತ್ತು ಇಳಿಜಾರುಗಳ ನಿರ್ಮಾಣವನ್ನು M/s ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಕಾರ್ಯಗತಗೊಳಿಸಿದೆ. ರಾಗಿಗುಡ್ಡದಿಂದ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮೂಲಕ ಬರುವ ವಾಹನ ಬಳಕೆದಾರರು ಎ ರ‍್ಯಾಂಪ್ ಮೂಲಕ ಹೊಸೂರು ರಸ್ತೆ ಮತ್ತು ಸಿ ರ‍್ಯಾಂಪ್ ಮೂಲಕ ಎಚ್ಎಸ್ಆರ್ ಲೇಔಟ್ ತಲುಪುತ್ತಾರೆ.

ನೆಲಮಟ್ಟದಲ್ಲಿರುವ ರ‍್ಯಾಂಪ್ ಬಿ, ಬಿಟಿಎಂ ಬದಿಯಿಂದ ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ರ‍್ಯಾಂಪ್ ಎ ಅನ್ನು ಸಂಪರ್ಕಿಸುತ್ತದೆ. ಎಚ್‌ಎಸ್‌ಆರ್ ಲೇಔಟ್‌ನಿಂದ ಬರುವವರು ರ‍್ಯಾಂಪ್ ಎ ಮತ್ತು ಹಳದಿ ಲೈನ್ ಮೆಟ್ರೋ ಲೈನ್‌ನ ಮೇಲೆ ಹಾದು ಹೋಗುವ ರ‍್ಯಾಂಪ್ ಡಿ ಮೂಲಕ ರಾಗಿಗುಡ್ಡ ಕಡೆಗೆ ತಲುಪಲು ಸಾಧ್ಯವಾಗುತ್ತದೆ ಮತ್ತು ಬಿಟಿಎಂ ಲೇಔಟ್‌ಗೆ ಪ್ರವೇಶಿಸಲು ಡೌನ್ ರ‍್ಯಾಂಪ್ ಇಯೊಂದಿಗೆ ಮುಂದುವರಿಯುತ್ತದೆ.

ರ‍್ಯಾಂಪ್ ಎ ಮತ್ತು ರ‍್ಯಾಂಪ್ ಬಿ ಎರಡೂ ಅಸ್ತಿತ್ವದಲ್ಲಿರುವ ಮಡಿವಾಳ ಮೇಲ್ಸೇತುವೆಯ ಮೇಲೆ ವಿಲೀನಗೊಳ್ಳುತ್ತವೆ. ಇವು ಅತ್ಯಂತ ಜನನಿಬಿಡ ರಾಷ್ಟ್ರೀಯ ಹೆದ್ದಾರಿ (NH-44) ನಲ್ಲಿ ನಿರಂತರವಾಗಿ ಮುಂದುವರಿಯುತ್ತವೆ. ಇವು ನಾಲ್ಕು ನಿರಂತರ ವೇಗಳನ್ನು ಒಳಗೊಂಡಿವೆ.

ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ ಹಳದಿ ಮಾರ್ಗದ ಮೆಟ್ರೋಗಾಗಿ ರಸ್ತೆ ಮೇಲ್ಸೇತುವೆಯ ಮೊದಲ ಹಂತವನ್ನು ಈಗಾಗಲೇ ನಿರ್ಮಿಸಲಾಗಿದೆ. BMRCL ಪ್ರಕಾರ, A, B ಮತ್ತು C ರ್ಯಾಂಪ್‌ಗಳು ಮೇ 2024ರೊಳಗೆ ಪೂರ್ಣಗೊಂಡು ಕಾರ್ಯಾರಂಭಿಸಬೇಕಿತ್ತು. D ಮತ್ತು E ರ‍್ಯಾಂಪ್‌ಗಳನ್ನು ಡಿಸೆಂಬರ್ 2024ರೊಳಗೆ ಕಾರ್ಯಾರಂಭ ಮಾಡಲಾಗುತ್ತದೆ.

ಇದನ್ನೂ ಓದಿ: Steel Flyover: ಬೆಂಗಳೂರಿನ ಮೊದಲ ಸ್ಟೀಲ್‌ ಫ್ಲೈಓವರ್‌ ಸೇತುವೆಯಲ್ಲಿ ಬಿರುಕು

Exit mobile version